‘ಪಬ್ಲಿಕ್ ಟಿವಿ’ ಇಂಪ್ಯಾಕ್ಟ್; ಬೆಂಗಳೂರಲ್ಲಿ ಮುಚ್ಚಿದ್ದ 10ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಓಪನ್

Public TV
1 Min Read

ಬೆಂಗಳೂರು: ಕಳೆದ 15 ದಿನಗಳಿಂದ ಬೆಂಗಳೂರು (Bengaluru) ದಕ್ಷಿಣ ಭಾಗದಲ್ಲಿ ಬಂದ್ ಆಗಿದ್ದ, 10ಕ್ಕೂ ಹೆಚ್ಚಿನ ಇಂದಿರಾ ಕ್ಯಾಂಟೀನ್‌ಗಳು (Indira Canteen) ಮತ್ತೆ ಓಪನ್ ಆಗಿವೆ.

ಈ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆ ಟೆಂಡರ್ ಪಡೆದಿದ್ದ, ಶೆಫ್ ಟೆಕ್ ಸಂಸ್ಥೆಗೆ ಬಿಬಿಎಂಪಿಯಿಂದ ಬಾಕಿ ಹಣ ಬಿಡುಗಡೆಯಾಗಿಲ್ಲ. ಜೊತೆಗೆ ನೀರು, ವಿದ್ಯುತ್ ಬಿಲ್ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಕ್ಯಾಂಟೀನ್‌ಗಳು ಬಂದ್ ಆಗಿದ್ದವು. ಇದನ್ನೂ ಓದಿ: ಕಾಂಗ್ರೆಸ್ ಅವಧಿಯಲ್ಲೇ ಇಂದಿರಾ ಕ್ಯಾಂಟೀನ್ ಬಂದ್ – ಬೆಂಗಳೂರಲ್ಲಿ 15ಕ್ಕೂ ಹೆಚ್ಚು ಕ್ಯಾಂಟೀನ್‌ಗಳಿಗೆ ಬೀಗ

ಈ ಬಗ್ಗೆ ‘ಪಬ್ಲಿಕ್ ಟಿವಿ’ ಕಳೆದ ಮೂರು ದಿನದ ಹಿಂದೆ ಸವಿಸ್ತಾರ ಸುದ್ದಿ ಪ್ರಸಾರ ಮಾಡಿತ್ತು. ವರದಿ ಬಳಿಕ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದು, ಕ್ಯಾಂಟೀನ್‌ಗಳನ್ನ ಪುನರಾರಂಭ ಮಾಡಲಾಗಿದೆ.

ಜಯನಗರ 153 ರ ವಾರ್ಡ್ ಸೇರಿದಂತೆ ಬಸವನಗುಡಿ, ವಿವಿ ಪುರಂ, ಆಡುಗೋಡಿ, ಪದ್ಮನಾಭನಗರ ಸೇರಿದಂತೆ 10 ಇಂದಿರಾ ಕ್ಯಾಂಟೀನ್‌ಗಳು ತೆರೆದಿವೆ. ನಿಮಾನ್ಸ್ ಆಸ್ಪತ್ರೆ ಬಳಿಯ ಕ್ಯಾಂಟೀನ್ ಒಂದನ್ನ ಹೊರತುಪಡಿಸಿ ಉಳಿದೆಲ್ಲ ಕಡೆ ಓಪನ್ ಆಗಿವೆ. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಕಾರ್ಯಕರ್ತರನ್ನ ಶಿಕಾರಿ ಮಾಡಿ, ಒಬ್ಬ ಮುಖಂಡ ಕನಿಷ್ಠ 10 ಮಂದಿಯನ್ನ ಪಕ್ಷಕ್ಕೆ ಕರೆತನ್ನಿ: ಡಿಕೆಶಿ

ರಾಹುಲ್ ಗಾಂಧಿ ಉದ್ಘಾಟನೆ ಮಾಡಿದ್ದ ಜಯನಗರ 153 ವಾರ್ಡ್ ಕ್ಯಾಂಟೀನ್ ಕೂಡ ಬಂದ್ ಆಗಿತ್ತು. ಸದ್ಯ ನಿನ್ನೆಯಿಂದ ಕ್ಯಾಂಟೀನ್ ತೆರೆದಿದೆ. ಕೆಲವರಿಗೆ ಕ್ಯಾಂಟೀನ್ ಓಪನ್ ಆಗಿರುವ ಬಗ್ಗೆ ಮಾಹಿತಿ ಇಲ್ಲದ ಹಿನ್ನೆಲೆ ಕಡಿಮೆ ಸಂಖ್ಯೆಯಲ್ಲಿ ಜನ ಊಟಕ್ಕೆ ಬರ್ತಿದ್ದಾರೆ.

Share This Article