ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ (Kogilu Layout) ವಾಸವಾಗಿದ್ದವರು ಅಕ್ರಮ ವಾಸಿಗಳು ಎಂಬ ಬಗ್ಗೆ `ಪಬ್ಲಿಕ್ ಟಿವಿ’ ನಿರಂತರ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಹಣ ಪಡೆದು ಸರ್ಕಾರಿ ಜಾಗ ಕೊಟ್ಟ ನಾಲ್ವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಯಲಹಂಕ ಪೊಲೀಸ್ ಠಾಣೆಯಲ್ಲಿ (Yalahanka Police Station) ಸ್ಥಳೀಯರಿಂದ ಹಣ ಪಡೆದು ಮನೆ ನೀಡಿದ ಆರೋಪದಡಿ ಎ1 ವಿಜಯ್, ಎ2 ವಸೀಂ, ಎ3 ಮುನಿ ಆಂಜನಪ್ಪ, ಎ4 ರಾಬೀನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಕೋಗಿಲು ಲೇಔಟ್ ನಿರಾಶ್ರಿತರಿಗೆ ಪುನರ್ವಸತಿ ಭಾಗ್ಯ – ನಾಳೆ ಅರ್ಹರಿಗೆ ಸಿಗಲಿದೆ ಮನೆ!
ಘನತ್ಯಾಜ್ಯ ನಿರ್ವಹಣಾ ನಿಗಮ ಅಧಿಕಾರಿ ಸಂತೋಷ್ ಕಡಾಡಿ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದ್ದು, ಮಂಗಳವಾರ (ಜ.7) ಸಂಜೆಯೇ ಎ1 ವಿಜಯ್, ಎ2 ವಸೀಂನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಂದೆಡೆ ಕೋಗಿಲು ಲೇಔಟ್‌ನಲ್ಲಿ ಎರಡನೇ ದಿನವೂ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆದಿದೆ. ಕೋಗಿಲು ಲೇಔಟ್ ನಿವಾಸಿಗಳನ್ನು ಯಲಹಂಕ ಠಾಣೆಗೆ ಕರೆಸಿ ಪೊಲೀಸರು ದಾಖಲೆ ಪರಿಶೀಲನೆ ನಡೆಸಿದ್ದಾರೆ. 2 ತಂಡಗಳಿಂದ ತಲಾ 5 ಮಂದಿಯಂತೆ ದಾಖಲೆ ಪರಿಶೀಲನೆ ಮಾಡಿದ್ದಾರೆ..
ಇನ್ನೂ ಕೋಗಿಲು ಲೇಔಟ್ ನಿರಾಶ್ರಿತರಿಗೆ ಮನೆ ಹಂಚಿಕೆ ವಿಳಂಬ ಆಗುವ ಸಾಧ್ಯತೆಯಿದೆ. ಗುರುವಾರ (ಡಿ.8) ಸಚಿವ ಸಂಪುಟ ಸಭೆಯಲ್ಲಿ ವಸ್ತುಸ್ಥಿತಿ ಬಗ್ಗೆ ಚರ್ಚೆ ಮಾಡಿ, ಮನೆ ನೀಡೋ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ. ಸರ್ಕಾರಿ ಜಾಗದಲ್ಲಿ ಶೆಡ್ ಹಾಕಿದವರಿಗೆ ಮನೆ ಕೊಡೋದ್ರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಆದ್ರೆ ಈಗಾಗಲೇ ವಸತಿ ಇಲಾಖೆ ಅಧಿಕಾರಿಗಳು ಬೈಯಪ್ಪನಹಳ್ಳಿಯ ಅಪಾರ್ಟ್ಮೆಂಟ್ ಬಳಿ ವಿದ್ಯುತ್, ನೀರಿನ ಪೂರೈಕೆ ಮಾಡಿದ್ದಾರೆ. ಸಿಎಂ ಗ್ರೀನ್ ಸಿಗ್ನಲ್ ಕೊಟ್ಟ ತಕ್ಷಣ ಮನೆ ಪ್ರವೇಶಕ್ಕೆ ರೆಡಿಯಾಗಿವೆ. ಇದನ್ನೂ ಓದಿ:ಕೋಗಿಲು ಲೇಔಟ್‌ನಲ್ಲಿ ಇರೋರು ಎಲ್ಲರೂ ಬಾಂಗ್ಲಾದೇಶದವರೇ: ಅಶ್ವಥ್ ನಾರಾಯಣ

