ಬೆಂಗಳೂರಿನ ಸರ್ಕಾರಿ ಶಾಲೆಗೆ ‘ಪಬ್ಲಿಕ್’ ಬೆಳಕು ಕಾಯಕಲ್ಪ

Public TV
2 Min Read

ಬೆಂಗಳೂರು: ಸರ್ಕಾರಿ ಶಾಲೆ (Govt School) ಬೆಳೆಯಬೇಕು, ಸರ್ಕಾರಿ ಶಾಲೆ ಉಳಿಬೇಕು ಅಂತಾ ಹೇಳೋ ಸರ್ಕಾರ, ಅದೇ ಸರ್ಕಾರಿ ಶಾಲೆಗಳ ನಿರ್ವಹಣೆ ಬಗ್ಗೆ ಮಾತ್ರ ಗಮನ ಇಲ್ಲ. ಇಂತಹದ್ದೆ ಪರಿಸ್ಥಿತಿ ನಡುವೆ, ಜೀವ ಭಯದಿ ಪಾಠ ಕಲಿಯುವ ಸ್ಥಿತಿಯಲ್ಲಿದ್ದ ಮಕ್ಕಳಿಗೆ ಪಬ್ಲಿಕ್ ಟಿವಿ ಮುಕ್ತಿ ನೀಡಿದ್ದು, ಈ ಮೂಲಕ ಸರ್ಕಾರಿ ಶಾಲೆಗೆ ಹೊಸ ರೂಪ ಸಿಕ್ಕಂತಾಗಿದೆ.

ಹೌದು. ಸರ್ಕಾರದಿಂದ ಪ್ರತಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲೂ ಮಕ್ಕಳಿಗೆ ಕ್ವಾಲಿಟಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಗ್ಲೀಷ್ ಮಾಧ್ಯಮದ ಪಬ್ಲಿಕ್ ಶಾಲೆಗಳನ್ನ ಆರಂಭ ಮಾಡಲಾಗಿದೆ. ಅದೇ ರೀತಿ ಈ ಶಾಲೆ ಕೂಡ. ಅತ್ತಿಗುಪ್ಪೆ ಸರ್ಕಾರಿ ಶಾಲೆಯಾಗಿದ್ದು, 350ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗೆ ನಿತ್ಯ ಪೋಷಕರು ಜೀವವನ್ನ ಕೈಯಲ್ಲಿಡಿದೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ ಸ್ಥಿತಿ ಇತ್ತು. ಕಾರಣ ಬೀಳುವ ಹಂತದಲ್ಲಿದ್ದ ಕಾಂಪೌಂಡ್, ಸ್ವಚ್ಛತೆ ಇಲ್ಲದ ಶೌಚಾಲಯ, ಒಣಗಿ ನಿಂತ ಮರ ಈ ಎಲ್ಲಾದರ ನಡುವೆಗೂ ಮಕ್ಕಳು ಪಾಠ ಕಲಿಯುವ ಸ್ಥಿತಿ ಇತ್ತು.

ಈ ಬಗ್ಗೆ ಬೆಳಕು ಕಾರ್ಯಕ್ರಮದ ಮೂಲಕ ಸುದ್ದಿ ಪ್ರಸಾರ ಮಾಡಿದ್ದ ಪಬ್ಲಿಕ್ ಟಿವಿ ಶಿಕ್ಷಣ ಇಲಾಖೆ ಗಮನಕ್ಕೆ ತಂದು ಇದನ್ನ ಸರಿಪಡಿಸುವಂತೆ ಒತ್ತಾಯ ಮಾಡಲಾಗಿತ್ತು. ಜೊತೆಗೆ ಸ್ಥಳೀಯ ಶಾಸಕ ಕೃಷ್ಣಪ್ಪರ ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಸುದ್ದಿ ಪ್ರಸಾರವಾದ ಎರಡೇ ತಿಂಗಳಲ್ಲಿ ಕಾಂಪೌಂಡ್ ಕಾಮಗಾರಿ ಮುಕ್ತಾಯಗೊಳಿಸಿ, ಶೌಚಾಲಯ ದುರಸ್ತಿ ಕಾರ್ಯಕೂಡ ಆರಂಭವಾಗಿದೆ. ಇನ್ನೂ ಮಕ್ಕಳನ್ನ ಶಾಲೆಗೆ ಕಳುಹಿಸಿ ದುಗುಡದಲ್ಲೇ ಕಾಲ ಕಳೆಯುತ್ತಿದ್ದ ಪೋಷಕರು, ಸದ್ಯ ಪಬ್ಲಿಕ್ ಟಿವಿ ಇಂಪ್ಯಾಕ್ಟ್ ಗೆ (Public TV Impact) ಧನ್ಯವಾದ ತಿಳಿಸುತ್ತಿದ್ದು, ಪಬ್ಲಿಕ್ ಟಿವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈ ಮುಗಿದು ಕೇಳಿಕೊಳ್ತೀನಿ, ಸಿಎಂ ಹೇಳಿಕೆ ನೀಡುವುದನ್ನು ನಿಲ್ಲಿಸಿ: ನೇಹಾ ತಂದೆ ನಿರಂಜನ್‌ ಕಿಡಿ

ಒಟ್ಟಾರೆ ಸರ್ಕಾರಿ ಶಾಲೆ ಅಂದ ತಕ್ಷಣ ಮೂಗುಮುರಿಯೋ ಸಿಟಿ ಮಂದಿ ಮಧ್ಯೆ ಒಳ್ಳೆಯ ಶಿಕ್ಷಣ ಸಿಗಲಿ ಅಂತಾ ಇಲ್ಲಿಗೆ ಮಕ್ಕಳನ್ನ ಕಳಿಸೋ ಪೆÇೀಷಕರಿಗೆ ಇನ್ಮುಂದೆಯೂ ಯಾವುದೇ ಆತಂಕ ಇಲ್ಲದೇ ತಮ್ಮ ಮಕ್ಕಳನ್ನ ಈ ಸರ್ಕಾರಿ ಶಾಲೆಗೆ ಕಳುಹಿಸಬಹದಾಗಿದ್ದು, ಸರ್ಜಾರ ಕೂಡ ಉಳಿದ ಶಾಲೆಗಳ ವಿಚಾರವಾಗಿ ಹೀಗೆ ಎಚ್ಚೆತ್ತುಕೊಂಡರೆ ಸರ್ಕಾರಿ ಶಾಲೆಗಳು ಕೂಡ ಮಕ್ಕಳ ಅಭಾವ ಎದುರಿಸೋದು ತಪ್ಪಲಿದೆ.

Share This Article