ವಿಜಯನಗರ/ಬೆಂಗಳೂರು: ವಿಜಯನಗರ ಜಿಲ್ಲೆಯ (Vijayanagar) ದೇವದಾಸಿ ಮಹಿಳೆಯೊಬ್ಬರು (Devadasi Woman) ತಮ್ಮ ಮಗಳಿಗೆ ಮೊರಾರ್ಜಿ ದೇಸಾಯಿ ಶಾಲೆಗೆ (Morarji Desai School) ಸೇರಿಸಲು ಒಂದು ವರ್ಷದಿಂದ ಪರದಾಡುತ್ತಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ತಾಯಿಯ ಪರದಾಟದ ವರದಿ ಪ್ರಸಾರವಾಗಿತ್ತು. ಇದೀಗ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ ವೈಷ್ಣವಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜ್ ಸ್ಪಂದಿಸಿ, ಶಾಲೆಯಲ್ಲಿ ಸೀಟು ದೊರಕಿಸಿ ಕೊಟ್ಟಿದ್ದಾರೆ.
ತನ್ನ ಮಕ್ಕಳಿಗೂ ಶಿಕ್ಷಣ ಕೊಟ್ಟು, ತಾನು ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣ ವನ್ನು ದೇವದಾಸಿ ಮಹಿಳೆ ಮುಂದುವರೆಸುತ್ತಿದ್ದರು. ತನ್ನ ಮಗಳಿಗೆ ಏಳನೇ ತರಗತಿಗೆ ಸೀಟು ಸಿಗದೇ ವರ್ಷದಿಂದ ಅಲೆದಾಡುತ್ತಿದ್ದರು. ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ವೈಷ್ಣವಿ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಕಾಂತರಾಜ್ ತಕ್ಷಣ ಸ್ಪಂದಿಸಿದರು. ತಕ್ಷಣವೇ ದೇವದಾಸಿ ಮಹಿಳೆಯನ್ನು ಮೊರಾರ್ಜಿ ದೇಸಾಯಿ ಶಾಲೆಗೆ ಕರೆದು ಮಗಳಿಗೆ ದಾಖಲಾತಿಗೆ ಸಂಬಂಧಪಟ್ಟಂತಹ ದಾಖಲಾತಿ ನೀಡಲಾಯ್ತು. ಇದನ್ನೂ ಓದಿ: PUBLiC TV Impact | ಕೊನೆಗೂ ದೇವದಾಸಿ ಮಹಿಳೆಯ ಮಗಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸೀಟು ಹಂಚಿಕೆ
ಇದು ಇಲಾಖೆಯ ಗಮನಕ್ಕೆ ಬಾರದ ತಪ್ಪು. ಆಕೆಯ ಮಗುವಿಗೆ ಯಾವುದೇ ರೀತಿ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಲೋಕದ ಕಣ್ಣಿಗೆ ಈ ‘ದೇವದಾಸಿ’ಯೂ ಕೂಡ ಎಲ್ಲರಂತೆ ಹೆಣ್ಣಾಗಿ ಯಾಕೆ ಕಾಣಲಿಲ್ಲ..!?