PUBLiC TV Impact – ಯುವತಿ ಮೇಲೆ ಬಸ್ ಹತ್ತಿಸಲು ಯತ್ನಿಸಿದ್ದ BMTC ಬಸ್ ಡ್ರೈವರ್ ಅಮಾನತು

By
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬಸ್ ಅಡ್ಡಗಟ್ಟಿದ ಯುವತಿ ಮೇಲೆ ಬಸ್ ನುಗ್ಗಿಸಲು ಪ್ರಯತ್ನಿಸಿದ ಬಸ್ ಚಾಲಕನನ್ನು (Bus Driver) ಅಮಾನತುಗೊಳಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಆದೇಶಿಸಿದ್ದಾರೆ.

ಪ್ರಶಾಂತ್‌ ಅಮಾನತಾದ ಚಾಲಕ. ಬಿಎಂಟಿಸಿ ಬಸ್ ಪಕ್ಕ ಕಾರಿನಲ್ಲಿದ್ದ ಯುವತಿ ಕಾರಿನಿಂದ ಇಳಿದು ಬಸ್ ಚಾಲಕನನ್ನು ಪ್ರಶ್ನೆ ಮಾಡಿದ್ದಾಳೆ. ಯಾವ ವಿಚಾರವಾಗಿ ಯುವತಿ ಪ್ರಶ್ನೆ ಮಾಡಿದ್ದಾಳೆ ಎಂಬ ಕುರಿತು ಸ್ಪಷ್ಟತೆ ದೊರೆತಿಲ್ಲ. ಬಳಿಕ ಬಸ್ ಚಾಲಕ ಮತ್ತು ಯುವತಿ ನಡುವೆ ಜಗಳ ನಡೆದು ಬಸ್ ಚಾಲಕನನ್ನು ಪ್ರಶ್ನೆ ಮಾಡಲು ಯುವತಿ ಸಿಗ್ನಲ್‌ನಲ್ಲಿ ಬಸ್ ಅಡ್ಡಗಟ್ಟಿದ್ದಳು. ಆದರೆ, ಯುವತಿಯನ್ನು ಲೆಕ್ಕಿಸದೇ ಚಾಲಕ ಬಸ್ ನುಗ್ಗಿಸಲು ಮುಂದಾಗಿದ್ದಾನೆ. ಸ್ವಲ್ಪದರಲ್ಲೇ ಯುವತಿ ಪಾರಾಗಿದ್ದು, ಚಾಲಕನ ಕೃತ್ಯದಿಂದ ಜನ ಬೆಚ್ಚಿಬಿದ್ದಿದ್ದಾರೆ. ಡಿಪೋ ನಂಬರ್ 17, ಚಂದ್ರಾಲೇಔಟ್ ಡಿಪೋಗೆ ಸೇರಿದ ಬಸ್ ಇದಾಗಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೊರೊನಾ ಸೋಂಕು – ಮಂಡ್ಯದಲ್ಲೂ ಮೊದಲ ಕೇಸ್‌ ಪತ್ತೆ

ಮೇ 23ರಂದು ಸಂಜೆ 5:40ಕ್ಕೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏಕಾಏಕಿ ಯುವತಿಯ ಮೇಲೆ ಬಸ್ ಹತ್ತಿಸಲು ಹೊರಟಿದ್ದ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ನಿಮ್ಮ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿ ಬಿತ್ತರಿಸಿತ್ತು. ಘಟನೆ ಬಗ್ಗೆ ವರದಿ ಬಿತ್ತರಿಸಿದ 10 ನಿಮಿಷದಲ್ಲೇ ಚಾಲಕನನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಭೂಕುಸಿತ; 3 ತಿಂಗಳಲ್ಲಿ ಪಶ್ಚಿಮಘಟ್ಟ ಧಾರಣಾ ಸಾಮರ್ಥ್ಯದ ವರದಿ ಕೇಳಿದ ಈಶ್ವರ್ ಖಂಡ್ರೆ

Share This Article