ಚಾಮರಾಜನಗರ: ಸೋಲಿಗ ಬಾಲಕಿ ಚೈತ್ರಗೆ 12 ವರ್ಷವಾದರೂ ಕೂಡ ಇಲ್ಲಿಯವರೆಗೂ ಕೂಡ ಆಧಾರ್ ಕಾರ್ಡ್ (Aadhar Card) ಇಲ್ಲದೇ ಸರ್ಕಾರದ ಯಾವುದೇ ಸೌಲಭ್ಯ ಸಿಕ್ಕಿರಲಿಲ್ಲ. ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಪ್ರಸಾರದ ಬಳಿಕ ಕೆಲವೇ ಘಂಟೆಗಳಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಬಾಲಕಿ ಚೈತ್ರಗೆ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಟ್ಟಿದ್ದಾರೆ.
ಚೈತ್ರ ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು (Hanur) ತಾಲೂಕಿನ ಕೌಳೇಹಳ್ಳ ನಿವಾಸಿಯಾಗಿದ್ದು, ದಿನನಿತ್ಯ ಲೊಕ್ಕನಹಳ್ಳಿಗೆ ಕರ್ನಾಟಕ ಪಬ್ಲಿಕ್ ಶಾಲೆಯ ವ್ಯಾಸಂಗಕ್ಕಾಗಿ ಹೋಗುತ್ತಿದ್ದಳು. ದಿನಾ 30 ರೂ. ಬಸ್ ಚಾರ್ಜ್ ಕೊಟ್ಟು ಓಡಾಡುವ ಪರಿಸ್ಥಿತಿ ಇತ್ತು. ಅಲ್ಲದೇ ಸರ್ಕಾರದ ಬಹುತೇಕ ಎಲ್ಲಾ ಸೌಲಭ್ಯದಿಂದ ವಂಚಿತಳಾಗಿದ್ದಳು. ಇದನ್ನೂ ಓದಿ: ಮತ್ತೆ ಉದ್ಯೋಗಕ್ಕೆ ಮರಳಿದ ರಿಷಿ ಸುನಕ್ – 70 ಗಂಟೆ ಕೆಲ್ಸ ಮಾಡಿ ಎಂದು ನೆಟ್ಟಿಗರ ಅಪಹಾಸ್ಯ
ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿಗೆ ಜಿಲ್ಲಾಡಳಿತ ಸ್ಪಂದಿಸಿದ್ದು, ಬಾಲಕಿ ಚೈತ್ರಗೆ ತೊಡಕಾಗಿದ್ದ ಆಧಾರ್ ಕಾರ್ಡ್ ನೋಂದಣಿಯನ್ನು ಮಾಡಿಸಲಾಗಿದೆ. ಅಲ್ಲದೇ ಶೀಘ್ರದಲ್ಲೇ ಬಾಲಕಿ ಮನೆಗೆ ಆಧಾರ್ ಕಾರ್ಡ್ ತಲುಪುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಈ ಹಿನ್ನಲೆ ಪಬ್ಲಿಕ್ ಟಿವಿಗೆ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಸಿಸಿ ರೋಡ್ ಕಮಿಷನ್ ವಿಚಾರ – ಇಬ್ಬರು ಅಧಿಕಾರಿಗಳ ಅಮಾನತು: ಪ್ರಿಯಾಂಕ್ ಖರ್ಗೆ