PUBLiC TV Exclusive | ಕೋಗಿಲು ಲೇಔಟ್ ನಿರಾಶ್ರಿತರ ಲಿಸ್ಟ್ ಔಟ್; 76 ಕುಟುಂಬಗಳಿರೋದು 6 ತಿಂಗಳಿಂದಷ್ಟೇ

1 Min Read

– 37 ಕುಟುಂಬಗಳಷ್ಟೇ ಮನೆ ಪಡೆಯಲು ಅರ್ಹ

ಬೆಂಗಳೂರು: ಕೋಗಿಲು ಲೇಔಟ್‌ನ (Kogilu Layout) ಭೂಕಬಳಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನ ಪೊಲೀಸರು (Police) ಬಂಧಿಸಿದ್ದಾರೆ. ಈ ಮಧ್ಯೆ ಅಧಿಕಾರಿಗಳ ಸಮೀಕ್ಷೆಯಲ್ಲಿ ಮತ್ತೊಂದು ಶಾಂಕಿಗ್‌ ವಿಚಾರ ಬಯಲಾಗಿದೆ.

ಕೋಗಿಲು ಬಡಾವಣೆಯಲ್ಲಿ ನಿರಾಶ್ರಿತರ ಪಟ್ಟಿ ಬಿಡುಗಡೆಯಾಗಿದ್ದು, 76 ಕುಟುಂಬಗಳು ವಾಸ ಮಾಡ್ತಿರೋದು ಕಳೆದ 6 ತಿಂಗಳಿನಿಂದಷ್ಟೇ ಅನ್ನೋದು ಬೆಂಕಿಗೆ ಬಂದಿದೆ. ಇದನ್ನ ಕಂಡು ಅಧಿಕಾರಿಗಳೇ ಕಕ್ಕಾಬಿಕ್ಕಿಯಾಗಿದ್ದಾರೆ. ಇದನ್ನೂ ಓದಿ: PUBLiC TV Impact | ಕೋಗಿಲು ಲೇಔಟ್ ಮನೆ ತೆರವು ಪ್ರಕರಣ – ಹಣ ಪಡೆದು ಸರ್ಕಾರಿ ಜಾಗ ಕೊಟ್ಟ ನಾಲ್ವರ ವಿರುದ್ಧ FIR

ಹೌದು. ಕೋಗಿಲು ಬಡಾವಣೆಯಲ್ಲಿರುವ ಒಟ್ಟು 119 ಕುಟುಂಬಗಳ ಪೈಕಿ 76 ಕುಟುಂಬಗಳು ವಾಸ ಮಾಡ್ತಿರೋದು ಕಳೆದ 6 ತಿಂಗಳಿನಿಂದ. ಉಳಿದ 43 ಕುಟುಂಬಗಳಲ್ಲಿ 37 ಕುಟುಂಬಗಳು ಬೆಂಗಳೂರು ಮೂಲದವರೇ, ಇನ್ನುಳಿದ 6 ಕುಟುಂಬಗಳು ಕೆಲ ವರ್ಷಗಳ ಹಿಂದೆ ಕೋಗಿಲು ಲೇಔಟ್‌ಗೆ ಬಂದು ನೆಲೆಸಿದ್ದಾರೆ. ಹೀಗಾಗಿ 37 ಕುಟುಂಬಗಳು ಹೊರತುಪಡಿಸಿದ್ರೆ, ಉಳಿದೆಲ್ಲರು ವಲಸಿಗರು ಎಂದು ಪರಿಗಣಿಸಲಾಗಿದೆ.

ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಇಂದು ಸಣ್ಣ ಲಿಸ್ಟ್ ಸಲ್ಲಿಕೆ ಆಗಲಿದೆ. ಸಚಿವ ಸಂಪುಟ ಸಭೆಯಲ್ಲೂ ಕೂಡ 37 ಅರ್ಹರ ಬಗ್ಗೆ ಚರ್ಚೆ ಆಗುವ ಸಾಧ್ಯತೆಯಿದೆ. 37 ಮಂದಿ ಅರ್ಹರಾಗಿದ್ದು, ದಾಖಲಾತಿಗಳನ್ನ ಪರಿಶೀಲಿಸಲಾಗುತ್ತಿದೆ. ಪೊಲೀಸ್‌ ವೆರಿಫಿಕೇಷನ್ ಆಗಿರುವ ಅರ್ಹರಿಗೆ ಮನೆ ಸಿಗಲಿದೆ. ಇದನ್ನೂ ಓದಿ: ಪುರುಷರ ಮನಸ್ಸನ್ನು ಅರ್ಥ ಮಾಡ್ಕೊಳ್ಳಕ್ಕೆ ಆಗಲ್ಲ, ಹಾಗಾದ್ರೆ ಎಲ್ಲರನ್ನೂ ಜೈಲಿಗೆ ಹಾಕ್ಬೇಕಾ? – ರಮ್ಯಾ ವಿವಾದಾತ್ಮಕ ಪೋಸ್ಟ್

Share This Article