ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ – ಒಂದೇ ಸೂರಿನಲ್ಲಿ ಶಾಲೆಗಳ ಮಾಹಿತಿ

Public TV
1 Min Read

ಬೆಂಗಳೂರು: ಮೊದಲ ವರ್ಷದ “ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋ -2018” ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು ಪಬ್ಲಿಕ್ ಟಿವಿ ಈಗ 2ನೇ ವರ್ಷದ ಎಕ್ಸ್‌ಪೋವನ್ನು ಆಯೋಜಿಸುತ್ತಿದೆ.

ಶಾಲೆಗಳ ಬಗ್ಗೆ ಸಂಪೂರ್ಣ ಮಾಹಿತಿಗಳು ಪೋಷಕರಿಗೆ ಒಂದೇ ಸೂರಿನಲ್ಲಿ ಸುಲಭವಾಗಿ ಸಿಗಲೆಂದು ಈ ಶನಿವಾರ ಮತ್ತು ಭಾನುವಾರ ಎಕ್ಸ್‍ಪೋವನ್ನು ಆಯೋಜಿಸಲಾಗಿದೆ. ಎಂ.ಸಿ. ಲೇಔಟ್, ವಿಜಯನಗರದಲ್ಲಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಪ್ರಿಸ್ಕೂಲ್, ಇಂಟರ್‌ನ್ಯಾಷನಲ್‌ ಮತ್ತು ರೆಸಿಡೆನ್ಶಿಯಲ್ ಸ್ಕೂಲ್ ಬಗ್ಗೆ ಸ್ಪಷ್ಟವಾದ ಮಾಹಿತಿ ಡ್ರೀಮ್ಸ್ ಸ್ಕೂಲ್‍ನಲ್ಲಿ ಸಿಗಲಿದೆ.

ವಿದ್ಯಾರ್ಥಿಗಳಿಗೆ ನೀಡುತ್ತಿರುವ ಗುಣಾತ್ಮಕ ಶಿಕ್ಷಣ, ಪಾಠ ಮತ್ತು ಪಠ್ಯೇತರ ಚಟುವಟಿಕೆಯ ಆಧಾರದ ಮೇಲೆ ಶಾಲೆಗಳನ್ನು ವಿಂಗಡಿಸಿದ್ದು ಮಗುವನ್ನು ಎಲ್ಲಿ ಸೇರಿಸಿದರೆ ಭವಿಷ್ಯ ಉಜ್ವಲವಾಗಬಹುದು ಎಂಬ ಪೋಷಕರ ಪ್ರಶ್ನೆಗೆ ಎಕ್ಸ್‌ಪೋದಲ್ಲಿ ಸುಲಭವಾಗಿ ಉತ್ತರ ಸಿಗಲಿದೆ. ಉಚಿತ ಪ್ರವೇಶದ ಕಾರ್ಯಕ್ರಮ ಇದಾಗಿದ್ದು ಪೋಷಕರು ಆಗಮಿಸಿ ಶಾಲೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಏನು ಇರುತ್ತೆ?
– ಒಂದೇ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು
– ಮಾಹಿತಿಪೂರ್ಣ ಸಂವಾದಗಳು
– ಡ್ರಾಯಿಂಗ್ ಸ್ಪರ್ಧೆ
– ಕ್ವಿಜ್ ಸ್ಪರ್ಧೆ
– ಮ್ಯಾಜಿಕ್ ಶೋ
– ಸ್ಪರ್ಧಿಗಳಿಗೆ ಉಚಿತ ಗಿಫ್ಟ್
– ಸ್ಥಳದಲ್ಲೇ ಅಡ್ಮಿಶನ್ ವ್ಯವಸ್ಥೆ

ದಿನಾಂಕ:
ಡಿಸೆಂಬರ್ 14, ಶನಿವಾರ
ಡಿಸೆಂಬರ್ 15, ಭಾನುವಾರ

ಸ್ಥಳ:
ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ
ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು -560040

Share This Article
Leave a Comment

Leave a Reply

Your email address will not be published. Required fields are marked *