ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮ

Public TV
2 Min Read

ಬೊಬ್ಬೆ ಹಾಕಿ ಅಳುವ ಮಗುವನ್ನು ಮಲಗಿಸುವ ತಾಯಿ, ಚಿನ್ನ, ಮುದ್ದು, ಬಂಗಾರಿ, ಪುಟ್ಟ ಚಿನ್ನುಮರಿ ಅಂತೆಲ್ಲ ಹೆಸರಿಡಿದು ಕರೆಯುವ ಲಾಲಿ ಹಾಡಿಗೆ ಮಗು ಮಲಗುವುದು, ಎಂತಹ ಕಠಿಣ ಮನುಷ್ಯನಾದರೂ ಸಹ ಸಂಗೀತದ ರಾಗಕ್ಕೆ ಒಮ್ಮೆಯಾದ್ರು ತಲೆದೂಗಿಯೇ ಇರುತ್ತಾನೆ. ಒಂದಲ್ಲ ಒಂದು ಹಾಡಿಗೆ ಕೈಕಾಲು ಬೆರಳು, ತಾಳ ಹಾಕಿಯೇ ಇರುತ್ತಾನೆ. ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಈ ಸಂಗೀತದ ಸಪ್ತಸ್ವರಗಳನ್ನು ಪಬ್ಲಿಕ್ ಮ್ಯೂಸಿಕ್ (PUBLIC Music) ಸತತ ಎಂಟು ವರ್ಷಗಳಿಂದ ಕನ್ನಡಿಗರಿಗೆ ನೀಡುತ್ತಲೇ ಬಂದಿದೆ.

ನಿಮ್ಮ ಸಹಕಾರಿಂದ ಈ ಒಂಭತ್ತು ಮೆಟ್ಟಿಲುಗಳನ್ನು ಪಬ್ಲಿಕ್‌ ಮ್ಯೂಸಿಕ್‌ ಸಲೀಸಾಗಿ ದಾಟಿದೆ. ಪ್ರತೀ ಹೆಜ್ಜೆಯಲ್ಲೂ ಜೊತೆಗಿದ್ದು, ಚಿಕ್ಕಪುಟ್ಟ ತಪ್ಪುಗಳನ್ನು ಮಗುವಂತೆ ತಿದ್ದಿ-ತೀಡಿ ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲೂ ಕೈ ಹಿಡಿದು ಮುನ್ನಡೆಸುತ್ತೀರಿ ಎಂಬ ಭರವಸೆಯನ್ನೂ ನಮಗೆ ಕೊಟ್ಟಿದ್ದೀರಿ. ನಿಮ್ಮ ಪಬ್ಲಿಕ್ ಮ್ಯೂಸಿಕ್ 9 ವರ್ಷಗಳನ್ನು (9th Anniversary) ಕಳೆದ ಜರ್ನಿ ಹೇಗಿತ್ತು. ನಡೆದು ಬಂದ ಹಾದಿಯನ್ನೊಮ್ಮೆ ಮೆಲುಕು ಹಾಕೋಣ ಬನ್ನಿ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 8ರ ಸಂಭ್ರಮ – ಇಡೀ ದಿನ ಹಲವು ಕಾರ್ಯಕ್ರಮಗಳ ರಸದೌತಣ

ಪ್ರತೀ ವರ್ಷವೂ ಡಿಫರೆಂಟ್ ಕಾರ್ಯಕ್ರಮಗಳ ಮೂಲಕ ನಿಮ್ಮನ್ನು ಮನರಂಜಿಸಿದ್ದೇವೆ. ಹನಿಯಂತೆ ಶುರುವಾದ ಮೊದಲ ವರ್ಷದ ಮ್ಯೂಸಿಕ್ ದರ್ಬಾರನ್ನು ಮೆಚ್ಚಿಕೊಂಡು ಬೆನ್ನು ತಟ್ಟಿದ್ದೀರಿ. ಎಷ್ಟರ ಮಟ್ಟಿಗೆ ಅಂದರೆ ಎರಡನೇ ವರ್ಷದಲ್ಲಿ ನಮ್ಮ ಹರುಷವನ್ನು ಮುಗಿಲು ಮುಟ್ಟುವಷ್ಟು. ಇನ್ನು ಮೂರನೇ ಮೆಟ್ಟಿಲಿಗೆ ಬಂದಾಗ, ಮೂರು ದಾಟಿ ನಾಲ್ಕಕ್ಕೆ ಬಂದ ಖುಷಿಯಲ್ಲಿ `ಮೂರು ವರುಷ ಪ್ಲಸ್’. ಇನ್ನು ನಾಲ್ಕನೇ ವರ್ಷದ ಪಬ್ಲಿಕ್ ಮ್ಯುಸಿಕ್ ಜರ್ನಿಗೆ ʼಮ್ಯೂಸಿಕ್ ಮ್ಯಾಜಿಕ್ ಸೆಲೆಬ್ರೇಶನ್ ನಾಲ್ಕುʼ. ನಾಲ್ಕನೇ ವರ್ಷದ ವಾರ್ಷಿಕೋತ್ಸವಕ್ಕೆ ನಿಮ್ಮ ರೆಸ್ಪಾನ್ಸ್ ಮ್ಯಾಜಿಕ್ ಥರ ಇತ್ತು. ಇನ್ನು ಐದನೇ ವರ್ಷದ `ಪಬ್ಲಿಕ್ ಸಂಗೀತ ಐದನೇ ವಸಂತ’ ವಂತು ಅರ್ಧ ದಶಕವನ್ನು ಪೂರೈಸಿರುವ ಸಂತಸ ನೀಡಿತ್ತು.

ʼ6ರ ತೇರು ಮ್ಯೂಸಿಕ್ ಜೋರುʼ, 6ನೇ ವರ್ಷದ ವಾರ್ಷಿಕೋತ್ಸವ ಆಚರಣೆಯಂತೂ ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದೆ. ಸೆಪ್ಟೆಂಬರ್ 28ರ ವಾರ್ಷಿಕೋತ್ಸವ ದಿನದಿಂದ ಸತತ ಮೂರು ದಿನಗಳ ಕಾಲ ವಿಶೇಷ ಪ್ರೋಗ್ರಾಮ್ ಮಾಡಿ ನಿಮ್ಮನ್ನು ಮನಂರಜಿಸಿದ್ವಿ. ಏಳನೇ ವರ್ಷದ ʼಸಪ್ತಸ್ವರʼದ ಬಗ್ಗೆ ಕೇಳ್ಬೇಕಾ? ಸಪ್ತಸ್ವರ ಹೆಸರಿಗೆ ತಕ್ಕ ಹಾಗೆ ಕೊರೊನಾ ಸಮಯದಲ್ಲಿ ನೊಂದವರಿಗೆ, ಸಂಕಷ್ಟದಲ್ಲಿರುವವರಿಗೆ ನೆರವಾದ ಏಳು ಜನ ಕೊರೊನಾ ವಾರಿಯರ್ಸ್‌ ಕರೆದು ಮಾತುಕತೆಯ ಜೊತೆಗೆ ಸನ್ಮಾನಿಸಲಾಗಿತ್ತು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ

ಎಂಟನೇ ವರ್ಷದ `ಪಬ್ಲಿಕ್ ಮ್ಯೂಸಿಕೋತ್ಸವ’ವನ್ನು ಉತ್ಸವದಂತೆ ಆಚರಿಸಲಾಗಿತ್ತು. ಕಾಂತಾರ ಸ್ಟಾರ್ ರಿಷಭ್ ಶೆಟ್ಟಿ, ಡೈರೆಕ್ಟರ್ ಜೋಗಿ ಪ್ರೇಮ್, ಕಾಮಿಡಿ ನಟ ಚಿಕ್ಕಣ್ಣ, ಹೆಸರಾಂತ ಚಿತ್ರ ಸಾಹಿತಿ ಕವಿರಾಜ್, ದೊಡ್ಮನೆ ಕುಡಿ ಧನ್ಯಾ ರಾಮ್‌ಕುಮಾರ್, ಯಂಗ್‌ ಹೀರೊ ಶ್ರೇಯಸ್ ಮಂಜು ಹಾಗೂ ಕೆಜಿಎಫ್ ಸಿಂಗರ್ ಸಂತೋಷ್ ವೆಂಕಿ ಅತಿಥಿಗಳಾಗಿ ಬಂದಿದ್ದರು. ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಈ ಎಲ್ಲಾ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಜೊತೆ ಮಾತುಕತೆ ನಡೆಸಿ ಸನ್ಮಾನಿಸಿದ್ರು.

ಈ ವರ್ಷದ ಸೆ.28 ರಂದು (ಗುರುವಾರ) ನಾವು 9ನೇ ವರ್ಷದ ವಾರ್ಷಿಕೋತ್ಸವದ ಸಂತಸದಲ್ಲಿದ್ದೇವೆ. ಈ ಬಾರಿಯ `ನವ ಸಂಭ್ರಮ’, ಕನ್ನಡ ಚಿತ್ರರಂಗದ ಹೊಸ ಪ್ರತಿಭೆಗಳ ಜೊತೆ ಆಚರಿಸುತ್ತಿದ್ದೇವೆ. ಪಬ್ಲಿಕ್‌ ಮ್ಯೂಸಿಕ್‌ ವಾಹಿನಿಯನ್ನು ವೀಕ್ಷಿಸುತ್ತಾ ಜೊತೆಯಾಗಿ `ನವ ಸಂಭ್ರಮ’ವನ್ನು ಆಚರಿಸೋಣ ಬನ್ನಿ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್