ಹುಕ್ಕೇರಿ ಹಿರೇಮಠದ ವತಿಯಿಂದ ಪಬ್ಲಿಕ್ ಟಿವಿ ದಶಮಾನೋತ್ಸವ ಆಚರಣೆ

Public TV
1 Min Read

ಚಿಕ್ಕೋಡಿ(ಬೆಳಗಾವಿ): ಪಬ್ಲಿಕ್ ಟಿವಿ ದಶಮಾನೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ವೇದಪಟುಗಳು ಮಂತ್ರಘೋಷಗಳೊಂದಿಗೆ ಪಬ್ಲಿಕ್ ಟಿವಿಗೆ ಶುಭಾಶಯ ಕೋರಿದರು.

ಹುಕ್ಕೇರಿ ಪಟ್ಟಣದ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವದಲ್ಲಿ ಗುರುಶಾಂತೇಶ್ವರ ಶಾಲೆಯ ಆವರಣದಲ್ಲಿ ವೇದಪಟುಗಳು ಗಣಪತಿ ಸ್ತೋತದ ಮೂಲಕ ಪಬ್ಲಿಕ್ ಟಿವಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಜ್ಞಾನದೀವಿಗೆ 2ನೇ ಆವೃತ್ತಿಗೆ ಬೊಮ್ಮಾಯಿ, ಸಿದ್ದರಾಮಯ್ಯ ಚಾಲನೆ

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪಬ್ಲಿಕ್ ಟಿವಿ ಜನರಿಂದ ಜನರಿಗೋಸ್ಕರ ಹುಟ್ಟಿಕೊಂಡಿರುವ ಅಪರೂಪದ ವಾಹಿನಿ. ಪಬ್ಲಿಕ್ ಹಿರೋ ಮೂಲಕ ಎಲೆಮರೆ ಕಾಯಿಯ ಸಾಧಕರಿಗೆ ಪದ್ಮ ಶ್ರೀ ಪ್ರಶಸ್ತಿಗೆ ಕೊಡಿಸಿದ್ದು ಹೆಮ್ಮೆಯ ಸಂಗತಿ. ಪಬ್ಲಿಕ್ ಟಿವಿ ಶತಮಾನೋತ್ಸವ ಆಚರಣೆಯ ಜೊತೆಗೆ ಇನ್ನಷ್ಟು ಜನರಿಗೆ ನ್ಯಾಯ ಕೊಡಿಸಲಿ. ಅಲ್ಲದೇ ಬಜೆಟ್ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಕೊಡಿಸಲು ಪಬ್ಲಿಕ್ ಟಿವಿ ಪ್ರಯತ್ನಿಸಲಿ. ಪಬ್ಲಿಕ್ ಟಿವಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ವಧು-ಕಣ್ಣು, ಹೃದಯ, ಕಿಡ್ನಿ ದಾನ

Share This Article
Leave a Comment

Leave a Reply

Your email address will not be published. Required fields are marked *