ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ಬೆಂಗ್ಳೂರಲ್ಲಿ ಪಬ್ಲಿಕ್ ರಥ ಸಂಚಾರ

Public TV
2 Min Read

ಬೆಂಗಳೂರು: ಪಬ್ಲಿಕ್ ಟಿವಿಗೆ ದಶಮನೋತ್ಸವದ ಸಂಭ್ರಮ. ಈ ಸಾರ್ಥಕ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಲು ಪಬ್ಲಿಕ್ ದಶರಥ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಪಬ್ಲಿಕ್ ದಶರಥ ಸಂಚರಿಸಿ ಸಿಲಿಕಾನ್ ಸಿಟಿ ಜನರಿಗೆ ಕೃತಜ್ಞತೆ ಸಲ್ಲಿಸಿದೆ. ಬೆಂಗಳೂರಿನ ಜನ ಕೂಡ ಪಬ್ಲಿಕ್ ಟಿವಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಹರಸಿ ಹಾರೈಸಿದ್ದಾರೆ.

ನಿಮ್ಮ ಪ್ರೀತಿಯ ಕೂಸು ಪಬ್ಲಿಕ್ ಟಿವಿಗೆ 10 ವರ್ಷದ ಸಂಭ್ರಮ. ಹತ್ತು ವರ್ಷ ಪೂರೈಸಲು ಕಾರಣದ ನಿಮಗೆ ಅಂದ್ರೆ ರಾಜ್ಯದ ಜನತೆಗೆ ಧನ್ಯವಾದ, ಕೃತಜ್ಞತೆ ಸಲ್ಲಿಸುವ ಸಲುವಾಗಿ, ಪಬ್ಲಿಕ್ ಟಿವಿ ನಿನ್ನೆ ಪಬ್ಲಿಕ್ ದಶ ರಥಗೆ ಚಾಲನೆ ನೀಡಿತ್ತು. ಪಬ್ಲಿಕ್ ದಶರಥಗೆ ಚಾಲನೆ ಸಿಕ್ಕ ಹಿನ್ನೆಲೆ ಇಂದು ಪಬ್ಲಿಕ್ ಟಿವಿ ತೇರು ಬೆಂಗಳೂರಿನಲ್ಲಿ ಸಂಚರಿಸ್ತು.

ಪಬ್ಲಿಕ್ ಟಿವಿಯ ಕಚೇರಿ ಯಶವಂತಪುರದಿಂದ ಹೊರಟ ಪಬ್ಲಿಕ್ ರಥ ಮಲ್ಲೇಶ್ವರಂ ಮಾರ್ಗವಾಗಿ ಸಂಚರಿಸ್ತು. ಮಲ್ಲೇಶ್ವರಂನ 18 ನೇ ಕ್ರಾಸ್‌ನಲ್ಲಿ ಎಲ್ ಇಡಿ ಹೊಂದಿರುವ ಪಬ್ಲಿಕ್ ರಥದಲ್ಲಿ ಪಬ್ಲಿಕ್ ಟಿವಿ ನಡೆದು ಬಂದ ಹಾದಿ, ಜನರು ಬೆಳೆಸಿರುವ ರೀತಿ ಬಗ್ಗೆ ವಿವರಣೆ ನೀಡ್ತಾ ಜನರಿಗೆ ಧನ್ಯವಾದ ತಿಳಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಜನ ಪಬ್ಲಿಕ್ ಟಿವಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ರು.

ಬೆಂಗಳೂರಿನ ಹೃದಯ ಭಾಗ ಆಗಿರೋ ಮೆಜೆಸ್ಟಿಕ್‌ನಲ್ಲಿ ರಂಗನಾಥ್ ಸರ್ ಧ್ವನಿ ಕೇಳಿದ ತಕ್ಷಣವೇ ಜನ ನಿಂತು ನೋಡಿದ್ರು. ಪಬ್ಲಿಕ್ ಟಿವಿಗೆ ಶುಭಕೋರಿದ್ರು. ಇನ್ನು ಜಯನಗರ ಮತ್ತು ಕೆ.ಆರ್ ಮಾರ್ಕೆಟ್ ನಲ್ಲಿ ಕೂಡ ಪಬ್ಲಿಕ್ ದಶರಥ ಧನ್ಯವಾದ ಆಲಿಸಿದ ಜನ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ನೇರವಾಗಿ ಮಾತಾಡ್ತಾರೆ ಅದು ನಮಗೆ ಇಷ್ಟ ಅಂದ್ರು. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

ಒಟ್ಟಾರೆ ಪಬ್ಲಿಕ್ ಟಿವಿಯ ದಶಮಾನೋತ್ಸವ ಹಿನ್ನೆಲೆ ಜನರಿಗೆ ಕೃತಜ್ಞತೆ ಸಲ್ಲಿಸಲು ಪಬ್ಲಿಕ್ ತೇರು ಬೆಂಗಳೂರು ಸಂಚರಿಸಿದೆ. ನಾಳೆಯಿಂದ ಎಲ್ಲಾ ಜಿಲ್ಲೆಗಳಿಗೂ ಪ್ರಯಾಣ ಬೆಳೆಸಲಿದೆ. ಪಬ್ಲಿಕ್ ರಥದ ಕೃತಜ್ಞತೆಯನ್ನ ಜನ ಸ್ವೀಕರಿಸಿ ಪಬ್ಲಿಕ್ ಟಿವಿ ಮೇಲೆ ಇದೇ ರೀತಿ ಪ್ರೀತಿ ವಿಶ್ವಾಸ ಇರಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ. ಇದನ್ನೂ ಓದಿ: ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ – ಎಸ್‍ಪಿಗೆ ಎಚ್‍ಡಿಕೆ ವಾರ್ನಿಂಗ್

Share This Article
Leave a Comment

Leave a Reply

Your email address will not be published. Required fields are marked *