ಅದ್ಧೂರಿಯಾಗಿ ನಡೆದ ಪಬ್ಲಿಕ್ ಮ್ಯೂಸಿಕ್ ನವ ಸಂಭ್ರಮ

Public TV
2 Min Read

ಬೆಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ, ಸಂಗೀತ ಕೇಳದ ಹೃದಯವಿಲ್ಲ. ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲೂ ಬೆರೆತುಕೊಂಡಿರುವ ಸಂಗೀತ ನಮ್ಮೊಳಗೆ ಜೀವಾಮೃತದಂತೆ ಕೆಲಸ ಮಾಡುತ್ತದೆ. ಪಕ್ಷಗಳ ಚಿಲಿಪಿಲಿ ಗಾನಕ್ಕೆ ಮರಗಿಡಗಳು ತಲೆದೂಗುವಂತೆ, ಪ್ರಕೃತಿಯ ರಾಗವನ್ನು ವನ್ಯ ಜೀವಿಗಳು ಆಲಿಸುತ್ತ ತಮ್ಮದೇ ಲೋಕದಲ್ಲಿ ಎಂಜಾಯ್ ಮಾಡುತ್ತವೆ. ನೆಮ್ಮದಿ ನೀಡುವ ಸಾಧನದಂತಿರುವ ಮ್ಯೂಸಿಕ್, ಕೇಳುಗರನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ ಅಂದರೆ ತಪ್ಪಾಗಲಾರದು. ಯಾವುದಕ್ಕೆ ಕಟ್ಟುಬೀಳದೇ ಸಂಗೀತವನ್ನು ಸತತ ಒಂಭತ್ತು ವರ್ಷಗಳಿಂದ ಪಬ್ಲಿಕ್ ಮ್ಯೂಸಿಕ್ ಕನ್ನಡಿಗರಿಗೆ ಉಣಬಡಿಸುತ್ತಿರೋದು ಹೆಮ್ಮೆಯ ಸಂಗತಿ.

ಪಬ್ಲಿಕ್ ಮ್ಯೂಸಿಕ್‌ನ (Public Music) ನವ ಸಂಭ್ರಮವನ್ನು ದೀಪ ಬೆಳಗಿಸುವ ಮೂಲಕ ಪಬ್ಲಿಕ್ ಟಿವಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್, ಲಹರಿ ಮ್ಯೂಸಿಕ್ ಮುಖ್ಯಸ್ಥ ಮನೋಹರ್ ನಾಯ್ಡು ಮತ್ತತು ಲಹರಿ ವೇಲು, ಆನಂದ್ ಆಡಿಯೋಸ್ ಮುಖ್ಯಸ್ಥ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿ ಮುಖ್ಯಸ್ಥ ಅಶ್ವಿನಿ ರಾಮ್‌ಪ್ರಸಾದ್, ಝೇಂಕಾರ್ ಮ್ಯೂಸಿಕ್ ಮಾಲೀಕ ಭರತ್ ಜೈನ್ ಉಪಸ್ಥಿತರಿದ್ದರು. ಇದನ್ನೂ ಓದಿ: `ನವ ಸಂಭ್ರಮ’ಕ್ಕೆ ಹೊಸ ಸ್ಟಾರ್ಸ್

ಸಿನಿಮಾ ತಾರೆಗಳಾದ ವಿಕ್ರಂ ರವಿಚಂದ್ರನ್, ಗಾನವಿ ಲಕ್ಷ್ಮಣ್, ಸಿದ್ದು ಮೂಲಿಮನಿ, ಅಮೃತ ಪ್ರೇಮ್, ಚೈತ್ರಾ ಜೆ. ಆಚಾರ್ ಹಾಗೂ ಬೃಂದಾ ಆಚಾರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಬ್ಲಿಕ್ ಮ್ಯೂಸಿಕ್‌ಗೆ ಶುಭಹಾರೈಸಿ, ಸಂಗೀತದೊಂದಿಗಿನ ತಮ್ಮ ನಂಟು ಹಾಗೂ ನೆನಪನ್ನು ಹಂಚಿಕೊಂಡರು.

ಈ ಸಂದರ್ಭ ಮಾತನಾಡಿದ ಪಬ್ಲಿಕ್ ಟಿವಿ (Public TV) ಮುಖ್ಯಸ್ಥ ಹೆಚ್‌ಆರ್ ರಂಗನಾಥ್ (H.R.Ranganath), ನಾವು ಮಾಡುವ ಕೆಲಸವನ್ನು ಪ್ರೀತಿಸಿದಾಗ ಮಾತ್ರ ನಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಜೀವನದಲ್ಲಿ ಸೋಲುಗಳು ಸಹಜ. ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಅದರ ವಿರುದ್ಧ ಹೋರಾಡಿ. ಸಮಸ್ಯೆಗಳನ್ನು ಎದುರಿಸದೇ ಇದ್ದರೇ ಗೆಲ್ಲಲು ನಾಳೆಗಳೇ ಇರುವುದಿಲ್ಲ ಎಂದರು.

ನಮ್ಮ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಇರುವುದು ಸಂಗೀತಕ್ಕೆ (Music) ಮಾತ್ರ. ಸಂಗೀತಕ್ಕೆ ಅನೇಕ ಶಕ್ತಿಯಿದೆ. ಇದು ನಮ್ಮ ನೆನಪನ್ನು ಮೆಲುಕು ಹಾಕುವಂತೆ ಮಾಡುತ್ತದೆ ಎಂದು ಈ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣೀಕರ್ತರಾದವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಇದನ್ನೂ ಓದಿ: ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್