ಪಬ್ಲಿಕ್ ಮ್ಯೂಸಿಕ್‍ಗೆ 5ನೇ ವರ್ಷದ ಸಂಭ್ರಮ

Public TV
2 Min Read

ಬೆಂಗಳೂರು: ಸೆಪ್ಟೆಂಬರ್ 28, 2014 ರಂದು ಆ ದಿನವನ್ನ ಖಂಡಿತಾ ಮರೆಯಲು ಸಾಧ್ಯವೇ ಇಲ್ಲ. ಪಬ್ಲಿಕ್ ಟಿವಿಯ ಒಂದು ಕುಡಿ ‘ಪಬ್ಲಿಕ್ ಮ್ಯೂಸಿಕ್’ ನಿಮ್ಮೆಲ್ಲರ ಸಮ್ಮುಖದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರ ಮೂಲಕ ಕನ್ನಡಿಗರಿಗೆ ಅರ್ಪಣೆಯಾದ ವರ್ಷವದು. ಆ ಮಧುರ ನೆನಪಿಗೆ ಹಾಗೂ ಆ ಕೂಸಿಗೆ ಇವತ್ತು ಐದರ ವಸಂತ.

ಈ ಐದು ವರ್ಷದ ಮ್ಯೂಸಿಕಲ್ ಜರ್ನಿ ನಮಗೆಲ್ಲ ಅತ್ಯದ್ಭುತ ಅನುಭವದ ಜೊತೆಗೆ ಏಳುಬೀಳುಗಳನ್ನು ತೋರಿಸಿಕೊಟ್ಟಿದೆ. ಆದರೂ ಅದ್ಯಾವುದಕ್ಕು ನಾವು ಅಂಜದೆ ಅಳುಕದೆ ಮಾಧ್ಯಮ ಕ್ಷೇತ್ರದಲ್ಲಿ ಮುನ್ನುಗ್ಗಲು ಕಾರಣರಾದವರು ನೀವು. ಆರಂಭದಿಂದಲು ಪಬ್ಲಿಕ್ ಮ್ಯೂಸಿಕ್ ವಿಭಿನ್ನ ರೀತಿಯ ಪ್ರಯತ್ನಕ್ಕೆ ಸಾಕ್ಷಿಯಾಗುವ ಮೂಲಕ ಬೆಂಬಲ ನೀಡಿ ನಮ್ಮ ಏಳಿಗೆಗೆ ಸಾಕ್ಷಿಯಾಗಿದ್ದೀರಿ.

ನಿಮ್ಮ ನಮ್ಮ ನಡುವಿನ ಭಾಂದವ್ಯ ಈ ಐದು ವರ್ಷಗಳಲ್ಲೂ ಮುಂದುವರಿಯಲು ಕಾರಣ ಅಂದ್ರೆ ಅದು ಪ್ರತಿ ದಿನ ಪ್ರಸಾರವಾಗುವ ಪಬ್ಲಿಕ್ ಮ್ಯೂಸಿಕ್‍ನ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಕಾರ್ಯಕ್ರಮಗಳು. ಪ್ರತಿ ದಿನ ಪ್ರಸಾರವಾಗುವ ಲೈವ್ ಶೋಗಳಾದ ಕಿಕ್ ಸ್ಟಾರ್ಟ್ ಹಾಗೂ ಚುರುಮುರಿ ಕಾರ್ಯಕ್ರಮಗಳು. ಇವುಗಳ ಜೊತೆಗೆ ಈ ಹಿಂದೆ ಪ್ರಸಾರವಾಗುತ್ತಿದ್ದ ಪಬ್ಲಿಕ್ ಮ್ಯೂಸಿಕ್‍ನ ಶೋಗಳಾದ, ಜಾಲಿ ರೈಡ್, ಹೈ ಫೈ ಶೋಗಳು ನಿಮ್ಮೆಲ್ಲರ ಮೆಚ್ಚುಗೆ ಪಡೆದಿರುವ ಜೊತೆಗೆ ಅಭೂತಪೂರ್ವ ಯಶಸ್ಸು ತಂದು ಕೊಡುವ ಮೂಲಕ ಹೊಸ ಹೊಸ ಕಾರ್ಯಕ್ರಮಗಳಿಗೆ ಸ್ಪೂರ್ತಿದಾಯಕವಾದವು.

ಇವುಗಳ ಜೊತೆಗೆ ಹೊಸ ಹಾಡುಗಳ ಮೂಲಕ ನಿಮ್ಮ ಮನಸಿಗೆ ಹತ್ತಿರವಾದ ಸ್ಯಾಂಡಲ್‍ವುಡ್ ನಾನ್ ಸ್ಟಾಪ್, ಎವರ್‍ಗ್ರೀನ್ ಸಾಂಗ್ಸ್, ನಿಮ್ಮನ್ನು ಕುಳಿತಲ್ಲಿಯೇ ಹಾಡುಗಳ ಜರ್ನಿಗೆ ಕರೆದುಕೊಂಡುವ ಹೋಗುವ ಮ್ಯೂಸಿಕ್ ಸಫಾರಿ, 90ರ ದಶಕದ ಎವರ್ ಗ್ರೀನ್ ಹಾಡುಗಳ ಮ್ಯೂಸಿಕ್ ಬಾಕ್ಸ್, ಅಲ್ಲದೆ ನೀವು ವಾಟ್ಸಪ್ ಮೂಲಕ ಕಳುಹಿಸುವ ನಿಮ್ಮ ಅಚ್ಚುಮೆಚ್ಚಿನ ಹಾರ್ಟ್ ಫೇವರೇಟ್ ಸಾಂಗ್, ಮ್ಯೂಸಿಕ್ ಎಕ್ಸ್‍ಪ್ರೆಸ್, ಸ್ಟಾರ್ ವಾರ್ಸ್, ಜಸ್ಟ್ ಚಿಲ್, ಟಾಪ್ 12 ಹಾಡುಗಳು, ಫಿಲ್ಮ್ ಫ್ಯಾಕ್ಟರಿ ಇವೆಲ್ಲಾ ಜನಮನಗೆದ್ದ ಕಾರ್ಯಕ್ರಮಗಳು. ಇದಕ್ಕೆ ನಿಮ್ಮಿಂದ್ದ ಸಿಕ್ಕಿದ್ದು ಔಟ್ ಆಫ್ ಔಟ್ ಮಾರ್ಕ್.

ಪಬ್ಲಿಕ್ ಮ್ಯೂಸಿಕ್ ಈ ಐದು ವರ್ಷದ ಜರ್ನಿಯಲ್ಲಿ ಪ್ರತಿ ವರ್ಷವು ಹಲವು ಕಾರ್ಯಕ್ರಮಗಳನ್ನ ನೀವು ನೋಡಿ ಮೆಚ್ಚಿದ್ದೀರಿ ಮೊದಲ ವರ್ಷದ ಮ್ಯೂಸಿಕ್ “ದರ್ಬಾರ್” “ಹರುಷ ಎರಡು ವರುಷ”ದ ಜೊತೆಗೆ ಮ್ಯೂಸಿಕ್ ಮ್ಯಾರಥಾನ್, “ಮೂರು ವರ್ಷ ಪ್ಲಸ್” ಜೊತೆಗೆ ಹ್ಯಾಟ್ರಿಕ್ ಹಾಡುಗಳು, “ಮ್ಯೂಸಿಕ್ ಮ್ಯಾಜಿಕ್ ಸೆಲೆಬ್ರೇಷನ್ ನಾಲ್ಕು” ನಂತಹ ವಿಭಿನ್ನ ಪ್ರಯತ್ನಕ್ಕೆ ಬೆನ್ನು ತಟ್ಟಿ ನಮ್ಮನ್ನ ಮುನ್ನಡೆಸಿದ್ದೀರಿ ಕೂಡ. ಇದೇ ಸಂತಸದಲ್ಲಿ ಪಬ್ಲಿಕ್ ಮ್ಯೂಸಿಕ್ ಐದನೇ ವರ್ಷದ ವಾರ್ಷಿಕೋತ್ಸವವನ್ನ ಆಚರಿಸಿಕೊಂಡು ನಿಮಗೊಂದು ವಂದನೆ ಹೇಳಲು ಬಯಸಿದೆ.

ಇಂದು ಇಡೀ ದಿನ ಮಸ್ತ್ ಮಜಾ ನೀಡೋ ಲೈವ್ ಶೋಗಳ ಜೊತೆಗೆ ಸೆಲೆಬ್ರೆಟೀಸ್‍ಗಳ ಜೊತೆಗೆ ಮಾತು ಹರಟೆ ಕಾರ್ಯಕ್ರಮವೂ ಕೂಡ ನಿಮಗಾಗಿ ನಿಮ್ಮ ಮನರಂಜನೆಗಾಗಿ ನೀಡಲಾಗುತ್ತಿದ್ದು ನಿಮ್ಮ ಗೆಲುವನ್ನು ನಿಮಗಾಗಿಯೇ ಅರ್ಪಿಸುತ್ತಿದ್ದೇವೆ. ನಮ್ಮ ಧ್ಯೇಯ ಒಂದೇ “ಅತೀ ಹೆಚ್ಚು ಹಾಡುಗಳು ನಿಮ್ಮ ಇಷ್ಟದ ಹಾಡುಗಳು” ಅದು ನಿಮ್ಮ ಪಬ್ಲಿಕ್ ಮ್ಯೂಸಿಕ್ ನಲ್ಲಿ ಮಾತ್ರ.

ಒಟ್ಟಿನಲ್ಲಿ ಹೇಗೆ ಐದನೇ ವರ್ಷದ ಸಂಗೀತ ಪಯಣದಲ್ಲಿ ಸಾಗಿ ಬಂದೆವೋ ಗೊತ್ತಿಲ್ಲ. ಒಳ್ಳೆಯ ಹಾಡುಗಳನ್ನು ನಿಮಗೆ ಕೇಳಿಸುತ್ತೇವೆ ಅಂತ ನಿಮಗೆ ಕೊಟ್ಟಿರುವ ಆಣೆಯನ್ನು ಉಳಿಸಿಕೊಂಡು ಮುಂದಿನ ದಿನಮಾನಗಳಲ್ಲೂ ನಿಮ್ಮೆಲ್ಲರ ಬೆಂಬಲವನ್ನ ನಿರೀಕ್ಷೆ ಮಾಡುತ್ತ ಮುಂದಿನ ವರ್ಷಕ್ಕೆ ಅಡಿ ಇಡುತ್ತಿದ್ದೇವೆ. ಇದಕ್ಕೆ ಇಡೀ ಪಬ್ಲಿಕ್ ಮ್ಯೂಸಿಕ್ ಟೀಂ ರೆಡಿಯಾಗಿದೆ. ನಮ್ಮನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.

Share This Article
Leave a Comment

Leave a Reply

Your email address will not be published. Required fields are marked *