ಇನ್ಮುಂದೆ ದೀಪಾವಳಿಗೆ ನ್ಯೂಯಾರ್ಕ್‌ನಲ್ಲೂ ಶಾಲೆಗಳಿಗೆ ಸಾರ್ವಜನಿಕ ರಜೆ

Public TV
2 Min Read

ವಾಷಿಂಗ್ಟನ್: ದಕ್ಷಿಣ ಏಷ್ಯಾ ಹಾಗೂ ಇಂಡೋ-ಕೆರಿಬಿಯನ್ ಸಮುದಾಯಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ದೊಡ್ಡ ನಗರವಾದ ನ್ಯೂಯಾರ್ಕ್‌ನಲ್ಲಿ (New York) ಬೆಳಕಿನ ಹಬ್ಬ ದೀಪಾವಳಿಗೆ (Diwali) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಹಿಂದೂ, ಸಿಖ್, ಜೈನರು ಹಾಗೂ ಬೌದ್ಧರು ಆಚರಿಸೋ ಈ ದೀಪಾವಳಿ ಹಬ್ಬವನ್ನು ನ್ಯೂಯಾರ್ಕ್‌ನ ಸುಮಾರು 2 ಲಕ್ಷ ನಗರವಾಸಿಗಳು ಆಚರಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ಗುರುತಿಸಿಕೊಂಡು ನ್ಯೂಯಾರ್ಕ್ ನಗರದಲ್ಲಿ ಶಾಲಾ ರಜಾ ದಿನಗಳ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರಿಸಲಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ಸೋಮವಾರ ತಿಳಿಸಿದ್ದಾರೆ.

ಹೆಚ್ಚಾಗಿ ದೀಪಾವಳಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ದೀಪಾವಳಿ ಹಬ್ಬ ನವೆಂಬರ್ 12 ರಂದು ಇದ್ದು ಆ ದಿನ ಭಾನುವಾರದ ರಜೆ ಇದೆ. ಹೀಗಾಗಿ ಇದರ ಲಾಭ 2024ರ ದೀಪಾವಳಿಗೆ ಅಲ್ಲಿನ ಜನರಿಗೆ ಲಭಿಸಲಿದೆ. ಇದನ್ನೂ ಓದಿ: ಧಾರವಾಡ-ಬೆಂಗಳೂರು ನಡುವೆ ಸಂಚರಿಸೋ ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ

2021ರಲ್ಲಿ ಮೇಯರ್ ಹುದ್ದೆಗೆ ಸ್ಪರ್ಧಿಸಿದಾಗ ಆಡಮ್ಸ್ ದೀಪಾವಳಿಯನ್ನು ಶಾಲಾ ರಜೆಯನ್ನಾಗಿ ಮಾಡುವ ಭರವಸೆ ನೀಡಿದ್ದರು. ನ್ಯೂಯಾರ್ಕ್ ರಾಜ್ಯ ಶಾಸಕಾಂಗ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ಶಾಲಾ ರಜೆಯನ್ನಾಗಿ ಮಾಡುವ ಮಸೂದೆಗೆ ಸಹಿ ಹಾಕಿದರೆ ಇದು ಅಧಿಕೃತವಾಗಲಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆಡಮ್ಸ್, ಇದು ನಿರಂತರವಾಗಿ ಬದಲಾಗುತ್ತಿರುವ ನಗರವಾಗಿದ್ದು, ಪ್ರಪಂಚದಾದ್ಯಂತ ಎಲ್ಲಾ ಸಮುದಾಯಗಳನ್ನು ನಿರಂತರವಾಗಿ ಸ್ವಾಗತಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: PSI scam – ಇಂದು ಹೈಕೋರ್ಟ್‍ನಲ್ಲಿ ಮರುಪರೀಕ್ಷೆ ಅರ್ಜಿ ವಿಚಾರಣೆ

Share This Article
ಹೊಸ ಲುಕ್‌ನಲ್ಲಿ ಹಾಟ್ ಆಗಿ ಮಿಂಚಿದ ಮಿಲ್ಕಿ ಬ್ಯೂಟಿ ಹೊಸ ಫೋಟೋಶೂಟ್‌ನಲ್ಲಿ ಹರ್ಷಿಕಾ ಹಾಟ್ ಪೋಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಕೆಜಿಎಫ್ ನಟಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಶಿಕಾ ರಂಗನಾಥ್‌ ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ ಹಾಟ್‌ ಲುಕ್‌ ಬೆಡಗಿ ಸಾನ್ಯಾ ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್ ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ ಹಾಟ್ ಆಗಿ ಕಾಣಿಸಿಕೊಂಡ ಸ್ಯಾಮ್..! ಹಾಟ್ ಅವತಾರದಲ್ಲಿ ಮಾನ್ವಿತಾ