ಡಬಲ್ ಡಿಗ್ರಿ ಓದಿದರೂ ಬಾಣಸಿಗ ಕಾರ್ಯ-ಬಿಡುವಿನ ವೇಳೆ ಮಕ್ಕಳಿಗೆ ಪಾಠ ಬೋಧನೆ

Public TV
1 Min Read

ದಾವಣಗೆರೆ: ಪದವೀಧರರು ಅಂದಾಗ ದೊಡ್ಡ ಕೆಲಸಕ್ಕೆ ಸೇರಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಈಗಿನ ಪರಿಸ್ಥಿತಿಯೋ ಅಥವಾ ಇವರ ಮನಸ್ಥಿತಿಯೋ ಡಬಲ್ ಡಿಗ್ರಿ ಪಡೆದರೂ ಹಾಸ್ಟೆಲ್‍ನಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯ ಯುವಕರು ಇವತ್ತಿನ ನಮ್ಮ ಪಬ್ಲಿಕ್ ಹೀರೋ.

ಹರಪನಹಳ್ಳಿ ಪಟ್ಟಣದ ಬಾಲಕರ ಬಿಸಿಎಂ ಹಾಸ್ಟೆಲ್ ನಲ್ಲಿ ಡಬಲ್ ಡಿಗ್ರಿ ಪಡೆದುಕೊಂಡಿರುವ ಕೆಲ ಯುವಕರು ಅಡುಗೆ ಮಾಡಿಕೊಂಡಿದ್ದಾರೆ. ಇವರಾರೂ ಅನಕ್ಷರಸ್ಥರಲ್ಲ ಬದಲಿಗೆ ಡಬಲ್ ಡಿಗ್ರಿ ಮಾಡಿರುವ ಪದವೀಧರರು. 2016-17ರಲ್ಲಿ ಬಾಣಸಿಗರ ಹುದ್ದೆಗೆ ಅರ್ಜಿ ಹಾಕಿ ಆಯ್ಕೆಯಾಗಿದ್ದಾರೆ. ಉತ್ತಮ ಶ್ರೇಣಿಯಲ್ಲಿ ಪದವಿ ಮುಗಿಸಿದ್ದರೂ ಯಾವುದೇ ಅಂಜಿಕೆ ಅಳುಕಿಲ್ಲದೆ ಮಕ್ಕಳಿಗೆ ರುಚಿಕಟ್ಟಾದ ಅಡುಗೆ ಮಾಡಿ ಹಾಕುತ್ತಿದ್ದಾರೆ. ಸಮಯ ಸಿಕ್ಕಾಗ ಹಾಗೂ ಸಂಜೆ ಬಿಡುವು ಮಾಡಿಕೊಂಡು ಮಕ್ಕಳಿಗೆ ಶಿಕ್ಷಣವನ್ನೂ ಹೇಳಿಕೊಡ್ತಿದ್ದಾರೆ.

ಈ ಯುವಕರು ಮಾತ್ರವಲ್ಲದೇ ಪಟ್ಟಣದ ಎಂಎಸ್‍ಸಿ, ಇಂಜಿನಿಯರಿಂಗ್ ಮಾಡಿರುವ ಯುವಕರು ಸಂಜೆ ವೇಳೆ ವಸತಿ ನಿಲಯಕ್ಕೆ ಬಂದು ಪಾಠ ಮಾಡುತ್ತಾರೆ. ಈ ಎಲ್ಲ ಯುವಕರಿಗೆ ಇಲ್ಲಿನ ವಾರ್ಡನ್ ಗಳು ಅವಕಾಶ ಕಲ್ಪಿಸಿದ್ದಾರೆ. ಒಂದ್ಕಡೆ ಬಾಣಸಿಗ ಪದವೀಧರರು, ಮತ್ತೊಂದು ಕಡೆ ಊರಿನ ಯುವಕರು ಸಹ ಬೋಧನೆ ಮಾಡ್ತಿರೋದು ಮಕ್ಕಳ ಶಿಕ್ಷಣಕ್ಕೆ ಉಪಯುಕ್ತವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *