ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡವರಿಗೆ ಫ್ರೀಯಾಗಿ ಟೀ ಕೊಡ್ತಾರೆ ಹಾವೇರಿಯ ಮಹೇಂದ್ರ

Public TV
1 Min Read

ಹಾವೇರಿ: ಪೆಟ್ರೋಲ್ ಬಂಕ್ ಅಂದ್ರೆ ಅಲ್ಲಿ ಪೆಟ್ರೋಲ್, ಡಿಸೇಲ್ ಮಾತ್ರ ಸಿಗುತ್ತೆ. ಆದ್ರೆ ಇಲ್ಲೊಂದು ಬಂಕ್ ನಲ್ಲಿ ಪೆಟ್ರೋಲ್ ಡಿಸೇಲ್ ಜೊತೆಗೆ ಕೆಲವು ಉಚಿತ ಸೌಲಭ್ಯಗಳು ಸಿಗುತ್ತವೆ. ಪೆಟ್ರೋಲ್ ಹಾಗೂ ಡಿಸೇಲ್ ಹಾಕಿಸಿಕೊಂಡರೆ ಉಚಿತವಾಗಿ ಟೀ ಸಿಗುತ್ತೆ.

ಹೌದು. ಹಾವೇರಿ ಹೊರವಲಯದ ಎನ್‍ಹೆಚ್-4 ನಲ್ಲಿರೋ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡ್ರೆ ಉಚಿತವಾಗಿ ಟೀ ಸಿಗುತ್ತೆ. ಪೆಟ್ರೋಲ್ ಬಂಕ್‍ನಲ್ಲಿ ಉಚಿತವಾಗಿ ಟೀ ಲಭ್ಯವಾಗಲು ಕಾರಣ ಇದೆ. 3 ವರ್ಷದ ಹಿಂದೆ ಶುಗರ್ ಲೆವೆಲ್ ಕಮ್ಮಿಯಾದ ವೃದ್ಧರೊಬ್ಬರು ಬಂಕ್ ಬಳಿ ಬಂದು ಟೀ ಇದ್ಯಾ ಅಂತಾ ಕೇಳಿದ್ರಂತೆ. ಸುತ್ತಮುತ್ತ ಟೀ ಅಂಗಡಿ ಇರ್ಲಿಲ್ಲ. ಹೀಗಾಗಿ ಬಂಕ್ ಮಾಲೀಕ ತಿಪ್ಪನಗೌಡ್ರು ತಾವೇ ಉಚಿತವಾಗಿ ಟೀ ವಿತರಣೆ ಶುರು ಮಾಡಿದ್ರು. ಅದನ್ನು ಇದೀಗ ತಿಪ್ಪನಗೌಡ್ರ ಪುತ್ರ ಮಹೇಂದ್ರ ಮುಂದುವರೆಸಿಕೊಂಡು ಹೋಗ್ತಿದ್ದಾರೆ.

ಉಚಿತವಾಗಿ ಟೀ ಹಂಚ್ತಿರೋ ಮಹೇಂದ್ರ ದಿನಕ್ಕೆ ಏನಿಲ್ಲ ಅಂದ್ರೂ ಐನೂರರಿಂದ ಏಳು ನೂರು ರುಪಾಯಿ ಖರ್ಚು ಮಾಡ್ತಾರೆ. ಟೀ ವಿತರಿಸೋಕೆ ಅಂತಾನೆ ಓರ್ವನನ್ನ ನೇಮಿಸಿದ್ದಾರೆ. ಬೆಳಗ್ಗೆಯಿಂದ ರಾತ್ರಿ 10 ಗಂಟೆವರೆಗೆ ಇಲ್ಲಿ ಫ್ರೀ ಟೀ ಸಿಗುತ್ತೆ. ಇದು ರಾತ್ರಿ ಹೊತ್ತಲ್ಲಿ ಅಪಘಾತಗಳು ಕಡಿಮೆ ಆಗೋಕೆ ಕಾರಣವಾಗಿದೆ.

ಚಹಾ ನೀಡಿ ಕೊಂಚ ಆಕ್ಟೀವ್ ಆಗಿರುವಂತೆ ಮಾಡ್ತಿರೋ ಪೆಟ್ರೋಲ್ ಬಂಕ್ ಮಾಲೀಕ ಮಹೇಂದ್ರ ತಿಪ್ಪನಗೌಡ ಇತರರಿಗೆ ಮಾದರಿಯಾಗಿದ್ದಾರೆ.

https://www.youtube.com/watch?v=Df2fTrlnqX8

 

Share This Article
Leave a Comment

Leave a Reply

Your email address will not be published. Required fields are marked *