ಸರ್ಕಾರಕ್ಕೂ ಮುನ್ನವೇ ಶಾಲೆಯಲ್ಲಿ LKG, UKG ಅನುಷ್ಠಾನಗೊಳಿಸಿದ್ರು ಹರಿದಾಸ್

Public TV
1 Min Read

ರಾಮನಗರ: ಸರ್ಕಾರಿ ಶಾಲೆಯಲ್ಲೂ ಎಲ್‍ಕೆಜಿ, ಯುಕೆಜಿ ಓಪನ್ ಮಾಡ್ತೇವೆ. ಇಂಗ್ಲೀಷನ್ನೂ ಕಲಿಸ್ತೇವೆ ಅಂತ ಸರ್ಕಾರ ಹೇಳಿದೆ. ಆದರೆ, ಇದಕ್ಕೂ ಮುಂಚೆಯೇ ಇದನ್ನ ಕಾರ್ಯಗತಗೊಳಿಸಿದ್ದಾರೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಪಬ್ಲಿಕ್ ಹೀರೋ.

ಹೌದು. ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜೊತೆ ಮಗುವಾಗಿ ಆಟವಾಡುತ್ತಾ ಕಲಿಸುತ್ತಿರುವ ಮುಖ್ಯಶಿಕ್ಷಕ ಹರಿದಾಸ್ ಈ ಕೆಲಸ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ಚಕ್ಕೆರೆ ಗ್ರಾಮಕ್ಕೆ ಹರಿದಾಸ್ ಅವರು ಬಂದಾಗ 1 ರಿಂದ 7ನೇ ತರಗತಿವರೆಗೆ ಕೇವಲ 93 ವಿದ್ಯಾರ್ಥಿಗಳು ಇದ್ರು. ಸರ್ಕಾರಿ ಶಾಲೆಯಲ್ಲೇ ಯುಕೆಜಿ, ಎಲ್‍ಕೆಜಿ ತೆರೆದು ಮೂರು ವರ್ಷದಲ್ಲಿ 40 ಮಕ್ಕಳ ಸಂಖ್ಯೆ ಹೆಚ್ಚಿಸಿ, ಈಗ 134 ವಿದ್ಯಾರ್ಥಿಗಳಿದ್ದಾರೆ.

ಕಾನ್ವೆಂಟ್‍ಗಳ ಅಬ್ಬರ ಅರಿತ ಹರಿದಾಸರು, ಬೇಸಿಗೆ ರಜೆಯಲ್ಲಿ ಸಹೋದ್ಯೋಗಿ ಶಿಕ್ಷಕರ ಜೊತೆ ಮನೆಮನೆಗೆ ತೆರಳಿ ನಾವೂ ಗುಣಮಟ್ಟದ ಎಲ್‍ಕೆಜಿ, ಯುಕೆಜಿ ಶಿಕ್ಷಣ ಕೊಡ್ತೇವೆ ಅಂತ ಗ್ರಾಮಸ್ಥರ ಮನವೊಲಿಸಿದ್ರು. ಪರಿಣಾಮವಾಗಿ ಎಲ್‍ಕೆಜಿ-ಯುಕೆಜಿಯಲ್ಲಿ ಈಗ 25 ಮಕ್ಕಳಿದ್ದಾರೆ. ದಾನಿಗಳ ಸಹಾಯದಿಂದ ಶಿಕ್ಷಕಿಯೊಬ್ಬರನ್ನ ಇದಕ್ಕಾಗಿ ನೇಮಿಸಿಕೊಳ್ಳಲಾಗಿದೆ.

‘ಮಕ್ಕಳ ಸಂಖ್ಯೆ ಕಡಿಮೆ ಆಗ್ತಿದೆ ಅಂತ ಸರ್ಕಾರಿ ಶಾಲೆಗಳನ್ನ ಮುಚ್ತಿರೋ ಸುದ್ದಿಯನ್ನೇ ಕೇಳ್ತಿರೋ ಜನರಿಗೆಲ್ಲಾ ನಮ್ಮ ಪಬ್ಲಿಕ್ ಹೀರೋ ಹರಿದಾಸರು ಸಂತಸದ ಸುದ್ದಿ ನೀಡಿದ್ದಾರೆ.

https://www.youtube.com/watch?v=OPJjNLeFNPE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *