ರಾಜಕೀಯ ಚರಿತ್ರೆಯ ವಿಶ್ಲೇಷಕ – ನಾಲಿಗೆಯಲ್ಲೇ ಇರುತ್ತೆ ಜನಪ್ರತಿನಿಧಿಗಳ ಡಿಟೇಲ್ಸ್

Public TV
1 Min Read

ಕೊಪ್ಪಳ: ಕೆಲವರು ತಮಗೆ ಪರಿಚಯ ಇರುವವರ ಹೆಸರು ಹೇಳಿ ಅಂದರೆ ಮರೆತೋಗಿದೆ ನೆನಪಿಸಿಕೊಳ್ಳಬೇಕು ಎನ್ನುತ್ತಾರೆ. ಆದರೆ ಇಲ್ಲೊಬ್ಬರು 1952 ರಿಂದ ಇಲ್ಲಿವರೆಗೆ ಆಯ್ಕೆಯಾದ ಎಂಎಲ್‍ಎ, ಎಂಎಲ್‍ಸಿ ಮತ್ತು ಎಂಪಿಗಳ ಸಂಪೂರ್ಣ ಮಾಹಿತಿಯನ್ನು ಕೊಡುತ್ತಾರೆ. ಅದೇ ರೀತಿ ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ ಇರುತ್ತೆ. ಇವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ ಆಗಿದ್ದಾರೆ.

ದುರಗಪ್ಪ ಮ್ಯಾದನೇರಿ ಇವರು ಕೊಪ್ಪಳದ ಗಂಗಾವತಿ ತಾಲೂಕಿನ ಹಂಪಸದುರ್ಗಾದವರು. ದುರಗಪ್ಪ ಓದಿದ್ದು ನಾಲ್ಕನೇ ತರಗತಿ ನಂತರ ವಯಸ್ಕರ ಶಿಕ್ಷಣದ ಮೂಲಕ ಕಲಿತು ದಿನಪತ್ರಿಕೆ ಓದುವ ಹವ್ಯಾಸ ಬೆಳಸಿಕೊಂಡಿದ್ದರು. ಇಂದಿಗೂ ಮ್ಯಾದನೇರಿಗೆ ದಿನಪತ್ರಿಕೆಗಳು ಬರುತ್ತಿರಲಿಲ್ಲ. ಆದರೆ ಇವರು ಪಕ್ಕದ ಗ್ರಾಮಗಳಿಗೆ ಹೋಗಿ ದಿನಪತ್ರಿಕೆ ಓದುತ್ತಿದ್ದರು. ಇವರು ಹೆಚ್ಚಾಗಿ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ.

ಪ್ರತಿದಿನ ಪತ್ರಿಕೆಗಳಲ್ಲಿ ಬರುವ ರಾಜಕೀಯ ವಿಷಯಗಳ ಬಗ್ಗೆ ಓದುತ್ತಾ ಓದುತ್ತಾ ರಾಜಕೀಯ ರಂಗದ ಕಡೆ ಆಸಕ್ತಿ ಬೆಳೆಸಿಕೊಂಡೆ. ರಾಜ್ಯದ ಯಾವುದೇ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಬಗ್ಗೆ ಮಾಹಿತಿ ಕೇಳಿದರೂ ಥಟ್ ಅಂತ ಉತ್ತರ ಹೇಳುತ್ತೇನೆ. 1952 ರಿಂದ ಇಲ್ಲಿವರೆಗೆ ನಡೆದ ಎಂಎಲ್‍ಎ, ಎಂಎಲ್‍ಸಿ ಮತ್ತು ಎಂಪಿಗಳ ಚುನಾವಣೆಗಳ ಬಗ್ಗೆ ಮಾಹಿತಿ ಕೊಡುತ್ತೇನೆ. ನನಗೆ ರಾಜಕೀಯದ ಬಗ್ಗೆ ಪ್ರೇರಣೆ ನೀಡಿದ ರಾಮಣ್ಣ ಸಾಲಭಾವಿ ಮತ್ತು ಆರ್.ಎಸ್.ಜೋಶಿ ಅವರನ್ನು ಇಂದಿಗೂ ನೆನೆಸಿಕೊಳ್ಳುತ್ತೇನೆ ಎಂದು ದುರಗಪ್ಪ ಅವರು ಹೇಳಿದರು.

ಒಬ್ಬ ಜನಪ್ರತಿನಿಧಿ ಎಷ್ಟು ಬಾರಿ ಆಯ್ಕೆಯಾಗಿದ್ದಾರೆ, ಎಷ್ಟು ಬಾರಿ ಸೋಲುಂಡಿದ್ದಾರೆ. ಅಭ್ಯರ್ಥಿಯ ಪೂರ್ಣ ಹೆಸರು ಏನು ಅಂತ ಹೇಳ್ತಾರೆ. ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಬಂದರೆ ರಾಜಕೀಯದ ಬಗ್ಗೆ ಮಾಹಿತಿ ಕೇಳಿ ಇವರಿಗೆ ಬಾರಿ ಕರೆಗಳು ಬರುತ್ತಾವೆ. ಅಭ್ಯರ್ಥಿ ಜೊತೆಗೆ ಪಕ್ಷ ಮತ್ತು ಜಾತಿಗಳ ಬಗ್ಗೆಯೂ ಮಾಹಿತಿ ಕೊಡುತ್ತಾರೆ ಎಂದು ದುರಗಪ್ಪ ಅವರ ಸ್ನೇಹಿತ ಈಶಪ್ಪ ತಿಳಿಸಿದರು.

ಒಂದು ರೀತಿ ರಾಜಕೀಯ ಭಂಡಾರ ಅಂತಲೇ ಕರೆಯಿಸಿಕೊಂಡಿರುವ ದುರಗಪ್ಪ ಅವರು ಗಂಗಾವತಿ ತಾಲೂಕಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *