3 ವರ್ಷದಲ್ಲಿ 85 ಅನಾಥ ಶವಗಳಿಗೆ ಚನ್ನಪಟ್ಟಣದ ಆಶ್ರಯ ಚಾರಿಟಬಲ್ ಟ್ರಸ್ಟ್ ಮುಕ್ತಿ..!

Public TV
1 Min Read

ರಾಮನಗರ: ಅನಾಥ ಶವಗಳಿಗೆ ಶಾಸ್ತ್ರೋಕ್ತವಾಗಿ ಅಂತಿಮ ಸಂಸ್ಕಾರ ಮಾಡೋ ಇಬ್ಬರು ಯುವಕರು ಇಂದಿನ ಪಬ್ಲಿಕ್ ಹೀರೋಗಳು. ಚನ್ನಪಟ್ಟಣದ ಅರುಣ್ ಹಾಗೂ ರವಿ ಇದೂವರೆಗೆ 85 ಅನಾಥ ಶವಗಳಿಗೆ ಮುಕ್ತಿ ಕೊಟ್ಟಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಎಲ್ಲೇ ಅನಾಥ ಶವಗಳ ಬಗ್ಗೆ ಮಾಹಿತಿ ಸಿಕ್ಕರೂ ಸಂಪ್ರದಾಯ ಬದ್ಧವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಹೀಗೆ, 3 ವರ್ಷದಲ್ಲಿ ಇಲ್ಲಿವರಗೆ 85 ಅನಾಥ ಶವಗಳನ್ನು ಸಮಾಧಿ ಮಾಡಿದ್ದಾರೆ. ಆಶ್ರಯ ಚಾರಿಟಬಲ್ ಟ್ರಸ್ಟ್ ಎಂಬ ಸಂಸ್ಥೆಯಡಿ 6 ಜನ ಯುವಕರೂ ಇದಕ್ಕೆ ಕೈ ಜೋಡಿಸಿದ್ದಾರೆ.

ಚನ್ನಪಟ್ಟಣ ತಾಲೂಕಿನ ಬೇರೆ ಬೇರೆ ಗ್ರಾಮದವರಾದ ಈ ಯುವಕರು ಟೀ ಕುಡಿಯುತ್ತಾ ಸೇರಿದ್ದ ವೇಳೆ ಇಂತಹದೊಂದು ಕಾರ್ಯ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಚಕ್ಕರೆ ಅರುಣ್, ರಾಜೇಶ್, ರವಿ, ಅಪ್ಪು, ಹಾಗೂ ಅಂಬುಲೆನ್ಸ್ ಡ್ರೈವರ್ ಅರುಣ್ ಎಲ್ಲರೂ ಸೇರಿ ಚರ್ಚೆ ನಡೆಸಿ ಟ್ರಸ್ಟ್ ನಿರ್ಮಿಸಿದ್ದಾರೆ.

ಶವ ಯಾವುದೇ ರೀತಿಯಲ್ಲಿದ್ರೂ ಸಹ ಯುವಕರು ಶವವನ್ನು ತಾವೇ ತೆಗೆದುಕೊಂಡು ಹೋಗಿ ಸಂಸ್ಕಾರ ನಡೆಸ್ತಾರೆ. ಅನಾಥ ಶವ ಅಂದ್ರೆ ದೂರ ನಿಲ್ಲುವ ಜನರ ಮಧ್ಯೆ ಅರುಣ್-ರವಿ ತಂಡ ವಿಭಿನ್ನವಾಗಿದೆ.

https://www.youtube.com/watch?v=I1JIBk9zX0w

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *