ಕೆಲವರ ಸಂಬಂಧ ಹೆಚ್ಚು ಕಾಲ ಉಳಿಯಲ್ಲ ಯಾಕೆ ಗೊತ್ತಾ? ಇಲ್ಲಿದೆ ಕಾರಣಗಳು..

Public TV
2 Min Read

ನುಷ್ಯ ಜೀವನದಲ್ಲಿ ಸಂಬಂಧಗಳಿಗೆ (Relationship) ಅದರದ್ದೇ ಆದ ಮೌಲ್ಯವಿದೆ. ಸಂಬಂಧ ಬೆಳೆಸುವುದು ಸುಲಭ. ಆದರೆ ಆ ಸಂಬಂಧ ಮುರಿದು ಹೋಗದಂತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗಲೂ ನಾವು ಮುರಿದುಹೋದ ನಮ್ಮ ಹಿಂದಿನ ಸಂಬಂಧದಲ್ಲಿ ಏನು ತಪ್ಪಾಗಿದೆ ಎಂದು ಆಗಾಗ್ಗೆ ಯೋಚಿಸುತ್ತೇವೆ, ಆ ಬಗ್ಗೆ ಆಶ್ಚರ್ಯ ಪಡುತ್ತೇವೆ.

ಇದು ಸಣ್ಣ ವಿಚಾರ, ಅನವಶ್ಯಕ ಎಂದು ನಾವು ಭಾವಿಸುವ ಎಷ್ಟೋ ವಿಷಯಗಳೇ ಸಂಬಂಧ ಮುರಿಯಲು ಪ್ರಮುಖ ಕಾರಣಗಳಾಗಿರುತ್ತವೆ ಎಂಬುದು ಕೆಲವೊಮ್ಮೆ ನಮಗೆ ತಿಳಿದಿರುವುದಿಲ್ಲ. ಕೆಲವು ಸಂಬಂಧಗಳು ಯಾಕೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದಕ್ಕೆ 5 ಕಾರಣಗಳು ಹೀಗಿವೆ ನೋಡಿ. ಇದನ್ನೂ ಓದಿ: ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!

ನಿಮಗೆ ಬೇಕಾದುದ್ದನ್ನು ನೀವು ಕೇಳುವುದಿಲ್ಲ
ಅನೇಕರು ತಾವು ಮಾಡಬಹುದು ಎಂದುಕೊಳ್ಳುವ ಕೆಲವು ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಆದರೆ ಅದನ್ನು ತಮ್ಮ ಸಂಗಾತಿ ಜೊತೆ ಹೇಳಿಕೊಳ್ಳುವುದಿಲ್ಲ. ಈ ವಿಷಯ ಹೇಳಿಕೊಂಡರೆ ಸಂಗಾತಿಯಿಂದ ಏನು ಪ್ರತಿಕ್ರಿಯೆ ಬರಬಹುದು ಎಂಬ ಬಗ್ಗೆ ಭಯ, ಮುಜುಗರ ಪಡುತ್ತಾರೆ. ನೀವು ಸುಮ್ಮನೇ ಇದ್ದು, ಯೋಚನೆಯನ್ನಷ್ಟೇ ಮಾಡಿದರೆ ಹತಾಶೆ ದಿನಗಳು ಬರುತ್ತವೆ. ಆಗ ಸಂಗಾತಿಯಿಂದ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಹೀಗಾದಾಗ ಸಂಬಂಧ ಹೇಗೆ ಉಳಿಯುತ್ತದೆ?

ʼನೋʼ ಎಂದು ಹೇಳದಿರುವುದು
ʻNOʼ ಎಂದು ಹೇಳುವುದು ಎಷ್ಟು ಮುಖ್ಯ ಎಂಬುದನ್ನು ನೀವು ಅರಿಯಬೇಕು. ಇದು ದೈಹಿಕ ಸುರಕ್ಷತೆಗೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯಕ್ಕೂ ಒಳಿತು. ಜನರನ್ನು ಮೆಚ್ಚಿಸಲು ʼಹೌದುʼ ಎಂದು ಹೇಳುವ ಸಂದರ್ಭಗಳುಂಟು. ನಿಮಗೆ ಇಷ್ಟವಿಲ್ಲದ್ದನ್ನು ಮಾಡಲು ಇಲ್ಲ ಎಂದು ಹೇಳಲು ಸಾಧ್ಯವಾಗದಿದ್ದರೆ, ಅದು ನಿಮ್ಮನ್ನು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಅನಾವಶ್ಯಕವಾದ ಆಹಾರ ಸೇವನೆ, ನಿಮಗೆ ಬೇಡದ ಲೈಂಗಿಕತೆಗಾಗಿ ನಿಮ್ಮ ಸಂಗಾತಿಗೆ ಬೇಡ ಎಂದು ಹೇಳುವುದು, ನಿಮ್ಮ ಸಂಗಾತಿ ಅತಿಯಾದ ಕೆಲಸ ಮಾಡಲು ಬಯಸಿದಾಗ ಬೇಡ ಎಂದು ಹೇಳುವುದು ಬಹಳ ಮುಖ್ಯ. ಸಂಬಂಧದಲ್ಲಿ ಇದನ್ನು ಹೇಳಲು ನಿಮಗೆ ಸಾಧ್ಯವಾಗದಿದ್ದರೆ, ನೀವು ತುಂಬಾ ಟೊಳ್ಳಾದ ಬಂಧವನ್ನು ಹೊಂದಿದ್ದೀರಿ. ಅದು ಸಂಬಂಧ ಮುರಿಯುವ ಹಂತಕ್ಕೆ ಕೊಂಡೊಯ್ಯುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

ಸಂಗಾತಿಯ ಸುತ್ತವೇ ನಿಮ್ಮ ಪ್ರಪಂಚ
ಈ ಮನೋಭಾವ ನಿಮ್ಮ ವ್ಯಕ್ತಿತ್ವದ ಅಭದ್ರತೆ ಮತ್ತು ಅವಿಶ್ವಾಸವಲ್ಲದೇ ಬೇರೇನೂ ಅಲ್ಲ. ಎಲ್ಲದಕ್ಕೂ ಸಂಗಾತಿಯ ಉಪಸ್ಥಿತಿಯನ್ನು ಬಯಸುವುದು, ಅವಲಂಬಿಸುವುದು ಸರಿಯಾದ ಕ್ರಮವಲ್ಲ. ಹೀಗೆ ಮಾಡುವುದರಿಂದ ಅವರ ಮೇಲೂ ಭಾರ ಎತ್ತಿಹಾಕಿ ಉಸಿರುಗಟ್ಟಿಸಿದಂತಾಗುತ್ತದೆ. ಕೆಲವೊಮ್ಮೆ ನಿಮ್ಮ ಭಾವನೆ, ಕಾರ್ಯಗಳ ಜವಾಬ್ದಾರಿಯನ್ನು ನೀವೇ ಹೊರಬೇಕು. ಸಂಗಾತಿ ಮೇಲೆ ಹೇರುವುದಲ್ಲ.

ಭಾವನೆ ಇಲ್ಲದಿದ್ರೆ
ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಭಾವನೆಗಳಿರಬೇಕು. ಕಾರ್ಯ ಕ್ಷೇತ್ರಗಳಲ್ಲಿ ಎಷ್ಟೇ ಯಶಸ್ಸು ಗಳಿಸಿದ್ದರೂ, ಭಾವನಾತ್ಮಕವಾಗಿ ಅಪಕ್ವವಾಗಿದ್ದರೆ ಅವರ ಸಂಬಂಧವು ಯಾವಾಗಲೂ ಅತೃಪ್ತಿಕರವಾಗಿರುತ್ತದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *