ಸೈಕೋ ಥ್ರಿಲ್ಲರ್ ಕಥಾಹಂದರದ ‘ಮೋಕ್ಷ’ ಇಂದು ಥಿಯೇಟರ್ ಅಂಗಳಕ್ಕೆ

Public TV
2 Min Read

ಸಾಕಷ್ಟು ಸಸ್ಪೆನ್ಸ್, ಥ್ರಿಲ್ಲರ್, ಸೈಕೋ ಥ್ರಿಲ್ಲರ್ ಸಿನಿಮಾಗಳು ಬಂದು ಹೋಗಿವೆ, ಬರುತ್ತಲೇ ಇವೆ. ಇವೆಲ್ಲ ಸಿನಿಮಾಗಳಿಗಿಂತ ನಾವು ಭಿನ್ನ. ಸಿನಿಮಾದ ಕಾನ್ಸೆಪ್ಟ್ ಕೂಡ ಅಷ್ಟೇ ವಿಭಿನ್ನ ಎಂದು ಹೇಳುತ್ತಿರುವ ಚಿತ್ರತಂಡವೊಂದು ಚಿತ್ರದ ಸ್ಯಾಂಪಲ್‌ಗಳ ಮೂಲಕವೇ ಸೌಂಡ್ ಮಾಡುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌ಗೆ ಸ್ಯಾಂಡಲ್‌ವುಡ್ ಬಾದ್ ಶಾ ಕಿಚ್ಚ ಸುದೀಪನ ಮೆಚ್ಚುಗೆಯೂ ಸಿಕ್ಕಿದೆ. ಚಿತ್ರಮಂದಿರದ ಅಂಗಳದಲ್ಲಿ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸಿ ಕ್ಷಣ ಕ್ಷಣಕ್ಕೂ ಥ್ರಿಲ್ ಕೊಡೋದಕ್ಕೆ ರೆಡಿಯಾಗಿರೋ ಈ ಚಿತ್ರವೇ ‘ಮೋಕ್ಷ’.

‘ಮೋಕ್ಷ’ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ವಿಚಾರಗಳು ಗಮನಕ್ಕೆ ಬಂದಿವೆ. ಸೈಕೋ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಸಿನಿಮಾ ಅದಕ್ಕೆ ತಕ್ಕ ಹಾಗೆ ತಾಂತ್ರಿಕವಾಗಿಯೂ ಶ್ರೀಮಂತವಾಗಿ ಮೂಡಿ ಬಂದಿದೆ. ಪ್ರತಿ ಸೀನ್‌ಗಳು ಕೂಡ ರಿಚ್ ಆಗಿ ಹೈ ಕ್ವಾಲಿಟಿಯಲ್ಲಿ ಮೂಡಿ ಬಂದಿದ್ದು, ಟ್ರೇಲರ್, ಸಾಂಗ್ಸ್ ನೋಡಿದವರಿಗೆ ಸಿನಿಮಾ ನೋಡುವ ಆಸೆ ಚಿಗುರೊಡೆದಿದೆ. ಅಂದ್ಹಾಗೆ ಈ ಚಿತ್ರದ ನಿರ್ದೇಶಕ ಸಮರ್ಥ್ ನಾಯಕ್. ಚಿತ್ರದ ಕಥೆ, ಚಿತ್ರಕಥೆಯ ರೂವಾರಿ ಕೂಡ ಇವರೇನೆ. ಚಿತ್ರದಲ್ಲಿ ನಾಯಕ ನಟನಾಗಿ ಮೋಹನ್ ಧನರಾಜ್, ನಾಯಕಿಯಾಗಿ ಆರಾಧ್ಯ ಲಕ್ಷಣ್ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ, ಪ್ರಶಾಂತ್ ನಟನ ಚಿತ್ರದ ತಾರಬಳಗದಲ್ಲಿದ್ದಾರೆ.

ಥ್ರಿಲ್ಲಿಂಗ್ ಎಳೆ ಒಳಗೊಂಡ ಈ ಚಿತ್ರದಲ್ಲಿ ಮಾಸ್ಕ್ ಮ್ಯಾನ್ ಪಾತ್ರ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ಆತ ಯಾರು, ಯಾಕೆ ತೊಂದರೆ ಕೊಡುತ್ತಾನೆ, ಸಿನಿಮಾದಲ್ಲಿ ಯಾವ ರೀತಿ ಟ್ವಿಸ್ಟ್ ನೀಡಲಿದ್ದಾನೆ ಅನ್ನೋದಕ್ಕೆ ನಾಳೆ ಉತ್ತರ ಸಿಗಲಿದೆ. ಸೈಕೋ ಥ್ರಿಲ್ಲರ್ ಜೊತೆ, ಲವ್, ಫ್ಯಾಮಿಲಿ ಸೆಂಟಿಮೆಂಟ್ ಕೂಡ ಮೋಕ್ಷ ಚಿತ್ರದಲ್ಲಿದೆ. ನೋಡುಗರನ್ನು ಸೀಟಿನಂಚಿನಲ್ಲಿ ಕೂರಿಸಿ ಕಾಡುವ ಕಂಟೆಂಟ್ ಸಿನಿಮಾದಲ್ಲಿದ್ದು ಪಕ್ಕಾ ಎಂಟರ್‌ಟೈನ್ ಮಾಡಲಿದೆ ಎನ್ನುವುದು ಸಿನಿಮಾ ತಂಡದ ಭರವಸೆಯ ಮಾತುಗಳು. ಇದನ್ನೂ ಓದಿ:  ಹೆಣ್ಣು ಮಗುವಿನ ತಂದೆಯಾದ ರಿಶಬ್ ಶೆಟ್ಟಿ

ಎಸ್‌ಜಿಎನ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಕಿಶನ್ ಮೋಹನ್, ಸಚಿನ್ ಬಾಲು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಗುರು ಪ್ರಶಾಂತ್ ರಾಜ್, ಜೋಮ್ ಜೋಸೆಫ್ ಮತ್ತು ಕಿರಣ್ ಹಂಪಾಪುರ ಅವರ ಸಿನಿಮಾಟೋಗ್ರಫಿ ಮೋಕ್ಷ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ಮೋಕ್ಷ’ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು ಪ್ರೇಕ್ಷಕ ಪ್ರಭುಗಳು ಸಿನಿಮಾ ನೋಡಿ ಏನ್ ಹೇಳುತ್ತಾರೆ ಕಾದು ನೋಡಬೇಕು. ಇದನ್ನೂ ಓದಿ: ನಟಿ ಸಂಜನಾಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪ- ಯುವಕ ಪೊಲೀಸ್ ವಶಕ್ಕೆ

Share This Article
Leave a Comment

Leave a Reply

Your email address will not be published. Required fields are marked *