ಡಿಕೆಶಿ ಬಂಡವಾಳ ಬಿಚ್ಚಿಡ್ತೀನಿ, ಕೊಳಕಿನ ಜಾಲ ಬಿಡಿಸ್ತೀನಿ: ಅಶ್ವಥ್ ನಾರಾಯಣ ಕಿಡಿ

By
1 Min Read

ಬೆಂಗಳೂರು: ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಆರ್ಗನೈಸ್ಡ್ ಕ್ರೈಂ ಇದು. ಡಿಕೆ ಶಿವಕುಮಾರ್ ಬಂಡವಾಳ ಬಿಚ್ಚಿಡ್ತೀನಿ. ಇವತ್ತಿಂದಲೇ ಡಿಕೆಶಿಯ ಕೊಳಕಿನ ಜಾಲ ಬಿಡಿಸ್ತೀನಿ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸಮರ ಸಾರಿದ್ದಾರೆ.

ತಮ್ಮ ಮೇಲಿನ ಆರೋಪದ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಬಾಯಿಯಲ್ಲಿ ಹೇಳಿಕೆ ಬರುತ್ತೆ ಅಂದ್ರೆ ಅದರಲ್ಲಿ ದುರುದ್ದೇಶ ಇದೆ ಎಂದರ್ಥ. ರಾಮನಗರ ಜಿಲ್ಲೆ ಯಾವತ್ತೂ ಡಿಕೆಶಿನ ಸಂಪೂರ್ಣ ಒಪ್ಪಿಲ್ಲ. ಡಿಕೆಶಿ ರಾಮನಗರದಲ್ಲಿ ಸೀಮಿತ ನಾಯಕ ಅಷ್ಟೇ. ನಾನೂ ರಾಮನಗರದವನೇ, ನಮ್ಮ ಪೂರ್ವಜರೂ ಅಲ್ಲಿಯವರೇ. ಡಿಕೆಶಿ ದಿಕ್ಕು ತಪ್ಪಿಸುವ ಹೇಳಿಕೆ ಕೊಟ್ಟಿದ್ದಾರೆ. ಆಧಾರ ರಹಿತ ಹೇಳಿಕೆ ನೀಡಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

ಸತೀಶ್ ಅಂತ ನಮ್ಮಣ್ಣ ಇದ್ದಾರೆ. ಅವರ ಮೇಲೆ ಆರೋಪ ಮಾಡಿದಾರಲ್ಲ, ಸಾಕ್ಷ್ಯ ಕೊಟ್ಟಿದ್ದಾರಾ? ನಾಚಿಕೆ ಆಗಲ್ವಾ ಉಗ್ರಪ್ಪಗೆ. ಭ್ರಷ್ಟಾಚಾರ ಮಾಡಿದ್ರೆ ಹೇಳಲಿ. ಉಗ್ರಪ್ಪ ತಮ್ಮ ರಾಜಕೀಯ ಅನುಭವದಿಂದ ಮಾತನಾಡಲಿ. 80 ಲಕ್ಷ ಕೊಟ್ಟಿರುವುದು ಕಟು ಸುಳ್ಳು. ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮ ಕುಟುಂಬದಲ್ಲಿ ಭ್ರಷ್ಟಾಚಾರ ಪದ್ಧತಿ, ಅಧಿಕಾರ ದುರ್ಬಳಕೆ ಪದ್ಧತಿ ಇಲ್ಲ. ನಮ್ಮದು ಡಿಕೆಶಿ ಕುಟುಂಬ ಅಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು: ಡಿ.ಕೆ.ಶಿವಕುಮಾರ್

ನಮ್ಮಣ್ಣ ಸತೀಶ್‍ಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ನೂರಕ್ಕೆ ನೂರು ಪ್ರತಿಶತ ಸಂಬಂಧ ಇಲ್ಲ. ಇಂತಹ ಸಾವಿರ ಜನ ಪ್ರಯತ್ನ ಮಾಡಿದ್ರೂ ಅಶ್ವಥ್ ನಾರಾಯಣಗೆ ಮಸಿ ಬಳಿಯಲು ಆಗಲ್ಲ ಎಂದು ಗುಡುಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *