ನಿನ್ನಿಂದ್ಲೇ ಎಲ್ಲಾ ಆಗಿದ್ದು ನಿನ್ನಿಂದ ಅಪ್ಪ ಜೈಲಿಗೆ ಹೋಗಿದ್ದು – ದಿವ್ಯಾ ಹಾಗರಗಿಯನ್ನು ತರಾಟೆಗೆ ತೆಗೆದುಕೊಂಡ ಪುತ್ರ

Public TV
1 Min Read

ಕಲಬುರಗಿ: ಇಂತಹ ಸ್ಥಿತಿ ಯಾವ ಅಮ್ಮನಿಗೂ ಬರಬಾರದು ಅನಿಸುತ್ತೆ. ನಿನ್ನಿಂದ್ಲೇ ಎಲ್ಲಾ ಆಗಿದ್ದು, ನಿನ್ನಿಂದ್ಲೇ ಅಪ್ಪ ಜೈಲಿಗೆ ಹೋದ್ರು. ನಾನು ಎಲ್ಲವನ್ನು ಟಿವಿಯಲ್ಲಿ ನೋಡಿದ್ದೇನೆ ಎಂದು ಬಂಧಿತೆ ದಿವ್ಯಾ ಹಾಗರಗಿಯನ್ನು ಅವರ ಪುತ್ರ ತರಾಟೆಗೆ ತೆಗೆದುಕೊಂಡಿದ್ದಾನೆ.

ದಿವ್ಯಾ ಹಾಗರಗಿ ವಿರುದ್ಧ ಪುತ್ರ ಕಿಡಿಕಾರುತ್ತಿದ್ದಂತೆ ದಿವ್ಯಾ ಹಾಗರಗಿ ಪಶ್ಚತ್ತಾಪದಿಂದ ಗಳಗಳನೇ ಕಣ್ಣೀರಿಟ್ಟಿದ್ದಾರೆ. ಕಲಬುರಗಿಯನ್ನು ಕೇಂದ್ರವಾಗಿರಿಸಿಕೊಂಡು ಸಿಐಡಿ ತನಿಖೆ ತೀವ್ರಗೊಳಿಸಿದೆ. ಕೋರ್ಟ್ ನೀಡಿದ್ದ ಗಡುವು ನಾಳೆಗೆ ಮುಗಿಯಲಿರೋ ಹಿನ್ನೆಲೆಯಲ್ಲಿ ಪಿಎಸ್‍ಐ ಹಗರಣದ ಮತ್ತೋರ್ವ ಆರೋಪಿ, ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಸಿಐಡಿ ಮುಂದೆ ಇಂದು ಶರಣಾಗಿದ್ದಾರೆ. ಇದನ್ನೂ ಓದಿ: ಸಿಐಡಿ ಕಚೇರಿಗೆ ಹೊಸಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ

ನೀರಾವರಿ ಇಲಾಖೆ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ್ ಮೆಳಕುಂದಿ ನಡೆಸ್ತಿದ್ದ ಡೀಲಿಂಗ್ ಕಂಡು ಸ್ವತಃ ಅವ್ರ ಅಪ್ಪ ವಿಪರೀತವಾಗಿ ಮನನೊಂದಿದ್ರು. ಕೆಟ್ಟ ಕೆಲಸ ಮಾಡಿರೋ ನಿನಗೆ ನಮ್ಮ ಮನೆಯಲ್ಲಿ ಜಾಗ ಇಲ್ಲ. ನೀನು ಸರೆಂಡರ್ ಆಗದಿದ್ರೆ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆತ್ತಪ್ಪ ವಾರ್ನಿಂಗ್ ನೀಡಿದ್ರು ಎನ್ನಲಾಗಿದೆ. ಪರಿಶೀಲನೆಗಾಗಿ ಮನೆಗೆ ಬಂದ ಸಿಐಡಿ ಅಧಿಕಾರಿಗಳಿಗೆ ಮಂಜುನಾಥ್ ತಂದೆ ಶಹಾಬ್ಬಾಶ್‍ಗಿರಿ ಕೊಟ್ಟಿದ್ರು. ನನಗೂ ಇದೇ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸಂತೃಪ್ತಿ ಇದೆ. ನೂರಾರು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನಿಮ್ಮಿಂದ ಉಪಕಾರ ಆಗಲಿ. ನಿಮ್ಮ ಕೆಲಸ ನೀವು ಮಾಡಿ ಎಂದು ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ರು. ಇದನ್ನೂ ಓದಿ: PSI ಟಾಪರ್ಸ್‍ಗಳ ಅಸಲಿ ಮುಖವಾಡ ಬಯಲು – ತಾತ್ಕಾಲಿಕ ಪಟ್ಟಿಯಲ್ಲಿ ಬೆಂಗ್ಳೂರಿನ 172 ಮಂದಿ ಆಯ್ಕೆ!

ನಿನ್ನೆ ಮಂಜುನಾಥ್ ಮೆಳಕುಂದಿ ತಾವಾಗಿಯೇ ಬಂದು ಸಿಐಡಿ ಪೊಲೀಸರಿಗೆ ಶರಣಾಗಿದ್ದಾರೆ. ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಪಿಎಸ್‍ಐ ಹಗರಣದಲ್ಲಿ ಎಫ್‍ಐಆರ್ ದಾಖಲಾದ ಬಳಿಕ ನಾಪತ್ತೆ ಆಗಿದ್ದರು. ಈ ಹಿನ್ನೆಲೆಯಲ್ಲಿ 6 ದಿನಗೊಳಗೆ ಶರಣಾಗಬೇಕು, ಇಲ್ಲದಿದ್ದರೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು. ನಿನ್ನೆ ಆಟೋದಲ್ಲಿ ಒಬ್ಬನೇ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *