ಪಿಎಸ್‌ಐ ಪರೀಕ್ಷೆ ಮುಂದೂಡಿಕೆ – ಶೀಘ್ರವೇ ಪರೀಕ್ಷಾ ದಿನ ನಿಗದಿ: ಗೃಹ ಸಚಿವ

Public TV
1 Min Read

ಬೆಂಗಳೂರು: ಪಿಎಸ್‌ಐ 402 (PSI) ಹುದ್ದೆಗಳಿಗೆ ನೇಮಕಾತಿಗೆ ಕೆಇಎ ನಿಗದಿಪಡಿಸಿದ್ದ ಪರೀಕ್ಷೆ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಎಸ್‌ಐ ನೇಮಕಾತಿಗೆ ಸೆ.22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಪಡಿಸಿತ್ತು. ಇಂದು ಬೆಳಗ್ಗೆ ಪರೀಕ್ಷೆಯನ್ನು ಸೆ.28 ಕ್ಕೆ ಮುಂದೂಡಲಾಗಿದೆ ಎಂದು ಸಚಿವರು ತಿಳಿಸಿದ್ದರು. ಆದರೆ, ಆ ದಿನ ಕೂಡ ಯುಪಿಎಸ್‌ಸಿ ಪರೀಕ್ಷೆ ಇದೆ. ಹೀಗಾಗಿ ಮತ್ತೊಂದು ದಿನ ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

ಸೆ.22 ರಂದು ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಇತ್ತು. ಹೀಗಾಗಿ ಸೆ.28 ಕ್ಕೆ ಪಿಎಸ್‌ಐ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ 28 ರಂದು ಕೂಡ ಯುಪಿಎಸ್‌ಸಿ ಇಂಗ್ಲಿಷ್ ಪರೀಕ್ಷೆ ಇದೆ. ಕಾರಣದಿಂದಾಗಿ ಮತ್ತೆ ಪರೀಕ್ಷೆ ಮುಂದೂಡಲು ನಿರ್ಧರಿಸಲಾಗಿದೆ.

Share This Article