ಎಸ್‍ಎಸ್‍ಎಲ್‍ಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಮಾರ್ಚ್ 21 ರಿಂದ ಪರೀಕ್ಷೆ ಆರಂಭ

Public TV
2 Min Read

ಬೆಂಗಳುರು: 2018-19 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.

2019ರ ಮಾರ್ಚ್ 21 ರಿಂದ ಪ್ರಾರಂಭವಾಗಿ ಏಪ್ರಿಲ್ 4ಕ್ಕೆ ಎಲ್ಲಾ ವಿಷಯಗಳ ಪರೀಕ್ಷೆ ಪೂರ್ಣಗೊಳ್ಳಲಿದೆ. ಅಲ್ಲದೇ ಮಂಡಳಿ ಬಿಡುಗಡೆ ಮಾಡಿರುವ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸುವವರು ಇದೇ ನವೆಂಬರ್ 26ರ ಒಳಗಡೆ ಸಲ್ಲಿಸಬೇಕು ಎಂದು ಹೇಳಿದೆ. ವಿದ್ಯಾರ್ಥಿಗಳು ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಬೇಕಾದರೆ, ನೇರವಾಗಿ ಕರ್ನಾಟಕ ಶಿಕ್ಷಣಾ ಮಂಡಳಿ ಇಲಾಖೆಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಬಹುದು.

ತಾತ್ಕಾಲಿಕ ವೇಳಾಪಟ್ಟಿಯ ವಿವರ:
ಮಾರ್ಚ್ 21 – ಪ್ರಥಮ ಭಾಷೆ, ಮಾರ್ಚ್ 23 – ಕೋರ್ ಸಬ್ಜೆಕ್ಟ್, ಮಾರ್ಚ್ 25 – ಗಣಿತ, ಮಾರ್ಚ್ 27 – ದ್ವಿತೀಯ ಭಾಷೆ, ಮಾರ್ಚ್ 29 – ವಿಜ್ಞಾನ, ಏಪ್ರಿಲ್ 2 – ಸಮಾಜ ವಿಜ್ಞಾನ ಹಾಗೂ ಏಪ್ರಿಲ್ 4 – ತೃತೀಯ ಭಾಷೆ.

ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ. ಮಾರ್ಚ್ 1 ರಿಂದ 18ರ ವರೆಗೆ ಪರೀಕ್ಷೆಗಳು ನಡೆಯಲಿವೆ. ವೇಳಾಪಟ್ಟಿಯಲ್ಲಿ ತಕರಾರು ಇದ್ದರೆ, ಮನವಿ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆಯನ್ನು ಸಹ ಮಂಡಳಿ ನೀಡಿದೆ. ಅಲ್ಲದೇ ನವೆಂಬರ್ 28ರ ಒಳಗೆ ತಕರಾರು ಅರ್ಜಿ ಸಲ್ಲಿಸಲು ಸಮಯ ನೀಡಿದೆ. ತಕರಾರು ಪಟ್ಟಿ ಪರಿಶೀಲನೆ ಬಳಿಕ ಅಂತಿಮ ವೇಳಾಪಟ್ಟಿಯನ್ನು ಪಿಯು ಬೋರ್ಡ್ ಪ್ರಕಟ ಮಾಡಲಿದೆ.

ತಾತ್ಕಾಲಿಕ ವೇಳಾಪಟ್ಟಿ ವಿವರ
ಮಾರ್ಚ್ 1 – ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್, ಮಾರ್ಚ್ 2 – ಇತರೆ ವಿಷಯಗಳು, ಮಾರ್ಚ್ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್, ಮಾರ್ಚ್ 6 – ಲಾಜಿಕ್, ಪ್ರಾಣಿಶಾಸ್ತ್ರ, ಎಜುಕೇಷನ್, ಹೋಂ ಸೈನ್ಸ್, ಮಾರ್ಚ್ 7 – ಐಚ್ಛಿಕ ಕನ್ನಡ, ಅಕೌಂಟ್ಸ್, ಗಣಿತ, ಮಾರ್ಚ್ 8 – ಉರ್ದು, ಸಂಸ್ಕೃತ,

ಮಾರ್ಚ್ 9 – ರಾಜ್ಯಶಾಸ್ತ್ರ, ಲೆಕ್ಕಶಾಸ್ತ್ರ, ಮಾರ್ಚ್ 11 – ಬಿಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನಶಾಸ್ತ್ರ, ಮಾರ್ಚ್ 12 – ಭೂಗೋಳ, ಕರ್ನಾಟಕ ಮ್ಯೂಸಿಕ್, ಹಿಂದುಸ್ಥಾನಿ ಮ್ಯೂಸಿಕ್‍, ಮಾರ್ಚ್ 13 – ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕಶಾಸ್ತ್ರ, ಮಾರ್ಚ್ 14 – ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 15 – ಹಿಂದಿ, ಮಾರ್ಚ್ 16 – ಕನ್ನಡ, ಮಾರ್ಚ್ 18 – ಇಂಗ್ಲೀಷ್.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *