ಪಿಪಿಪಿ ಮೆಡಿಕಲ್ ಕಾಲೇಜು ವಿರೋಧದ ಹೋರಾಟ – PSI, ಇಬ್ಬರು ಪೇದೆಗೆ ಸ್ವಾಮೀಜಿಯಿಂದ ಕಪಾಳಮೋಕ್ಷ

1 Min Read

ವಿಜಯಪುರ: ಜಿಲ್ಲೆಯಲ್ಲಿ ಪಿಪಿಪಿ ಮೆಡಿಕಲ್ ಕಾಲೇಜು ವಿರೋಧಿಸಿ ನಡೆಯುತ್ತಿರುವ ಹೋರಾಟದ ವೇಳೆ ಹೈಡ್ರಾಮಾ ನಡೆದಿದೆ. ಮೊಬೈಲ್ ಕಸಿಯಲು ಮುಂದಾಗಿದ್ದ ಪಿಎಸ್‌ಐ ಹಾಗೂ ಇಬ್ಬರು ಪೇದೆಗೆ ಪಿ ಜಿ ಹುಣಶ್ಯಾಳ ಗ್ರಾಮದ ಶ್ರೀಮಠದ ಸಂಗನಬಸವೇಶ್ವರ ಸ್ವಾಮೀಜಿ ಕಪಾಳಮೋಕ್ಷ ಮಾಡಿದ್ದಾರೆ.

ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮೆಡಿಕಲ್ ಕಾಲೇಜು ವಿರೋಧಿಸಿ ನಡೆಯುತ್ತಿರುವ ಹೋರಾಟ 106 ದಿನಕ್ಕೆ ಕಾಲಿಟ್ಟಿದೆ. ಗುರುವಾರ (ಜ.1) ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಮನೆಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲು ಹೋರಾಟಗಾರರು ಕರೆ ನೀಡಿದ್ದರು. ಹೋರಾಟದ ವೇಳೆ ಪೊಲೀಸರು ಸಂಗನಬಸವೇಶ್ವರ ಸ್ವಾಮೀಜಿ ಮೊಬೈಲ್ ಕಸಿದುಕೊಂಡಿದ್ದು, ತಳ್ಳಾಟ ನೂಕಾಟ ನಡೆದಿದೆ. ಆಗ ಸಿಟ್ಟಿಗೆದ್ದ ಸ್ವಾಮೀಜಿ ಆದರ್ಶನಗರ ಪಿಎಸ್‌ಐ ಸೀತಾರಾಮ ಲಮಾಣಿ ಹಾಗೂ ಇಬ್ಬರು ಪೇದೆಗಳಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದನ್ನೂ ಓದಿ:ಪುಣೆ ಬಾಂಬ್ ಸ್ಫೋಟದ ಆರೋಪಿಗೆ ಗುಂಡೇಟು – ನಡುರಸ್ತೆಯಲ್ಲಿ ಅನಾಮಿಕರಿಂದ ಹತ್ಯೆ

ಪ್ರತಿಭಟನಾ ಮೆರವಣಿಗೆ ಸಚಿವ ಎಂ.ಬಿ ಪಾಟೀಲ್ ಮನೆಯ ದೂರಳತೆಯಲ್ಲಿ ಪ್ರಾರಂಭಿಸಲಾಗಿತ್ತು. ಈ ವೇಳೆ, ಬಸವನಬಾಗೇವಾಡಿ ತಾಲೂಕಿನ ಪಿ ಜಿ ಹುಣಶ್ಯಾಳ ಗ್ರಾಮದ ಶ್ರೀಮಠದ ಸಂಗನಬಸವೇಶ್ವರ ಸ್ವಾಮೀಜಿಗಳು ಪ್ರತಿಭಟಿಸಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಹೈಡ್ರಾಮಾ ನಡೆದಿದೆ.

ಸ್ವಾಮೀಜಿಯನ್ನು ವಶಕ್ಕೆ ಪಡೆದು ಜೀಪ್‌ನಲ್ಲಿ ಕೂರಿಸಿದ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಬಳಿಕ ಸಮಾಧಾನಗೊಂಡ ಪೊಲೀಸರು ಸ್ವಾಮೀಜಿಗಳನ್ನು ಬಿಟ್ಟರು. ಬಳಿಕ ಸ್ವಾಮೀಜಿ ಜೊತೆ ಪ್ರತಿಭಟನೆ ನಡೆಸಿದವರನ್ನು ವಶಕ್ಕೆ ಪಡೆದರು.ಇದನ್ನೂ ಓದಿ: ಕೋಗಿಲು ಪ್ರಕರಣದಲ್ಲಿ ಮನೆ ಕೊಟ್ಟರೆ ನ್ಯಾಯಾಲಯದಲ್ಲಿ ಪ್ರಶ್ನೆ, ರಾಜ್ಯಪಾಲರಿಗೆ ದೂರು – ಎಸ್.ಆರ್.ವಿಶ್ವನಾಥ್

Share This Article