ತುಮಕೂರು| ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ಹೋರಾಟ – ಗೃಹ ಸಚಿವರ ಮನೆಗೆ ಮುತ್ತಿಗೆ

Public TV
1 Min Read

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ (Hemavathi Express Canal) ವಿರೋಧಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಎರಡನೇ ದಿನವಾದ ಇಂದು (ಭಾನುವಾರ) ತುಮಕೂರಿನ (Tumakuru) ಮಲ್ಲಸಂದ್ರದಿಂದ ಪಾದಯಾತ್ರೆ ಆರಂಭಗೊಂಡಿದ್ದು, ಪಾದಯಾತ್ರೆಯ ದಾರಿ ಮಧ್ಯೆ ಹೆಗ್ಗೆರೆಯ ಗೊಲ್ಲಳ್ಳಿಯಲ್ಲಿ ಇರುವ ಗೃಹ ಸಚಿವ ಜಿ.ಪರಮೇಶ್ವರ್ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.

ಹೇಮಾವತಿ ನೀರನ್ನು ದೌರ್ಜನ್ಯ ಎಸಗಿ ಡಿಕೆ ಶಿವಕುಮಾರ್ (DK Shivakumar) ರಾಮನಗರಕ್ಕೆ ಕೊಂಡೊಯ್ಯುತ್ತಿದ್ದರೂ ಮೌನ ವಹಿಸಿರುವ ಗೃಹ ಸಚಿವ ಜಿ.ಪರಮೇಶ್ವರ್‌ಗೆ (G Parameshwar) ಧಿಕ್ಕಾರ ಎಂದು ಕೂಗಿ ಮುತ್ತಿಗೆ ಹಾಕಿದ್ದಾರೆ. ಪೊಲೀಸರು ತಡೆದರೂ ಓಡಿ ಬಂದು ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಸುರೇಶ್ ಗೌಡರನ್ನು ಪೊಲೀಸರು ಎತ್ತಿಕೊಂಡು ಹೋಗಿದ್ದರು. ಮುತ್ತಿಗೆ ವೇಳೆ ಪೊಲೀಸರು ಹಾಗೂ ಪಾದಯಾತ್ರಿಗಳ ನಡುವೆ ಲಘು ಪ್ರಮಾಣದಲ್ಲಿ ಘರ್ಷಣೆ ನಡೆಯಿತು. ಇದನ್ನೂ ಓದಿ: 2 ಸಾವಿರ ಬೇಡ 10 ಸಾವಿರ ಕೊಡಿ – ಹೊಸ ಬಟ್ಟೆ ಅಂಗಡಿ ಮುಂದೆ ಮಂಗಳಮುಖಿಯರ ಕಿರಿಕ್‌

 

ಬಳಿಕ ಶಾಂತಗೊಂಡ ಪಾದಯಾತ್ರಿಗಳು ಹೆಗ್ಗೆರೆ ಭೀಮಸಂದ್ರ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯಲಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ – ಇತಿಹಾಸ ಸೃಷ್ಟಿಸಿದ ರಾಜೇಂದರ್‌ ಮೇಘಾವರ್‌

ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ, ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ, ಮಾಜಿ ಶಾಸಕ ಮಸಲಾ ಜಯರಾಮ್, ಜೆಡಿಎಸ್ ಮುಖಂಡರಾದ ಬಿಎಸ್ ನಾಗರಾಜು, ಕೆಟಿ ಶಾಂತಕುಮಾರ್, ದಿಲಿಪ್ ಕುಮಾರ್ ಭಾಗವಹಿಸಿದ್ದರು. ಇದನ್ನೂ ಓದಿ: ಮಂಗಳೂರಲ್ಲಿ ಅನ್ಯಮತೀಯ ಯುವಕನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ – ಸಹಾಯಕ್ಕೆ ಬಂದು ಪ್ರಜ್ಞೆ ತಪ್ಪಿಸಿ ಕೃತ್ಯ

Share This Article