ರೈಲ್ವೆ ನಿಲ್ದಾಣದಲ್ಲಿ ಪ್ರೊಫೆಸರ್‌ಗೆ ಚಾಕುವಿನಿಂದ ಇರಿದು ಕೊಲೆ; ಆರೋಪಿ ಅರೆಸ್ಟ್‌

1 Min Read

ಮುಂಬೈ: ಮಲಾಡ್‌ ರೈಲ್ವೆ ನಿಲ್ದಾಣದಲ್ಲಿ ಕಾಲೇಜು ಪ್ರಾಧ್ಯಾಪಕರೊಬ್ಬರ (Professor Murder) ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

27 ವರ್ಷದ ಓಂಕಾರ್ ಶಿಂಧೆ ಬಂಧಿತ ಆರೋಪಿ. ಪ್ರೊ. ಅಲೋಕ್ ಸಿಂಗ್ ಅವರು ವಿಲೇ ಪಾರ್ಲೆಯ ಪ್ರಮುಖ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಇದನ್ನೂ ಓದಿ: ʻಧಮ್ಕಿʼ ರಾಜೀವ್‌ ಗೌಡಗೆ ಬಂಧನ ಭೀತಿ – ಮಂಗಳೂರಿನಿಂದ ಪೊಲೀಸರ ಕಣ್ತಪ್ಪಿಸಿ ಪರಾರಿ!

ಸಿಂಗ್‌ ಮತ್ತು ಆರೋಪಿ ಶಿಂಧೆ ಇಬ್ಬರೂ ಒಂದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸಣ್ಣ ವಿಚಾರವೊಂದಕ್ಕೆ ಇಬ್ಬರ ನಡುವೆ ಜಗಳವಾಯಿತು. ಮಾತಿನ ಚಕಮಕಿ ಮಾರಕ ತಿರುವು ಪಡೆದುಕೊಂಡಿತು. ತಾಳ್ಮೆ ಕಳೆದುಕೊಂಡು ಹರಿತವಾದ ಚಾಕುವನ್ನು ಹೊರತೆಗೆದು, ಪ್ರೊಫೆಸರ್‌ಗೆ ಸಿಂಗ್ ಹೊಟ್ಟೆಗೆ ಹಲವು ಬಾರಿ ಇರಿದಿದ್ದಾರೆ. ಗಂಭೀರ ಗಾಯಗೊಂಡಿದ್ದ ಪ್ರೊಫೆಸರ್‌ ಮೃತಪಟ್ಟಿದ್ದಾರೆ.

ಬೊರಿವಲಿ ಜಿಆರ್‌ಪಿ ಠಾಣೆ ಪೊಲೀಸರು ತನಿಖೆ ನಡೆಸಿದರು. ದಾಳಿಯ ಸ್ವಲ್ಪ ಸಮಯದ ನಂತರ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ ವ್ಯಕ್ತಿಯೊಬ್ಬರು ಪಾದಚಾರಿ ಸೇತುವೆ (ಎಫ್‌ಒಬಿ) ದಾಟಿ ಪರಾರಿಯಾಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಸಿಂಗ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಆರೋಪ

Share This Article