ದುಡ್ಡಿದ್ರೆ ಏನಾದರೂ ಮಾಡಬಹುದು ಅನ್ನೋದನ್ನು ನಾನು ಒಪ್ಪಲ್ಲ: ಉಮೇಶ್ ಬಣಕಾರ್

By
2 Min Read

ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ (Darshan) ಅವರ ರಾಜಾತಿಥ್ಯ ವಿವಾದದ ಬಗ್ಗೆ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ರಿಯಾಕ್ಷನ್ ಕೊಟ್ಟಿದ್ದಾರೆ. ಜೈಲಿನಲ್ಲಿ ದರ್ಶನ್ ಸಿಗರೇಟ್ ಸೇದಿದ್ದು ಸರಿ ಅಂತ ಸಮರ್ಥನೆ ಮಾಡಿಕೊಳ್ತಿಲ್ಲ. ಆದರೆ ಮೂಲ ವ್ಯವಸ್ಥೆಯನ್ನೇ ಸರಿ ಮಾಡಬೇಕಿತ್ತು ಎಂದು ಉಮೇಶ್ ಬಣಕಾರ್ ಮಾತನಾಡಿದ್ದಾರೆ. ಇದನ್ನೂ ಓದಿ:ಸುದೀಪ್‌ರನ್ನು ಭೇಟಿಯಾದ ನ್ಯಾಚುರಲ್‌ ಸ್ಟಾರ್‌ ನಾನಿ

ದರ್ಶನ್ ಈಗ ಆರೋಪಿ, ಅಪರಾಧಿಯಲ್ಲ. ಇನ್ನೂ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರಕ್ಕೆ ಬಂದರೆ ಟೀ ಕುಡಿಯುತ್ತಿದ್ದರು. ಸಿಗರೇಟ್ ಸೇದುತ್ತಿದ್ದರು. ರೌಡಿಗಳ ಜೊತೆ ಕುಳಿತಿದ್ದರು ಎನ್ನುವ ಕಾರಣಕ್ಕೆ ಸ್ಥಳಾಂತರ ಮಾಡ್ತಿದ್ದಾರೆ ಅಂದರೆ ಅದು ತಪ್ಪು ಎಂದಿದ್ದಾರೆ. ರಾಜಾತಿಥ್ಯ ಈಗಷ್ಟೇ ಅಲ್ಲ, ಈ ಮೊದಲು ಕೂಡ ಹಲವು ವಿಐಪಿಗಳು ಜೈಲು ಸೇರಿದಾಗ ನಡೆದಿದೆ. ದರ್ಶನ್ ಒಳಗಡೆ ಸಿಗರೇಟ್ ಸೇದಿದ್ದು, ಸರಿ ಅಂತ ಸಮರ್ಥನೆ ಮಾಡಿಕೊಳ್ತಿಲ್ಲ. ಆದರೆ ಮೂಲ ವ್ಯವಸ್ಥೆಯನ್ನೇ ಸರಿ ಮಾಡಬೇಕಿತ್ತು ಎಂದರು.

ಸೆಲೆಬ್ರಿಟಿ ಅಂತಾ ಅಂದಾಗ ಅಲ್ಲಿರೋರು ಬಂದು ಅವರನ್ನು ಮಾತನಾಡಿಸ್ತಾ ಇರುತ್ತಾರೆ. ಆದರೆ ರೌಡಿಗಳ ಜೊತೆ ಲಿಂಕ್ ಮಾಡೋದು ಸರಿಯಲ್ಲ. ದರ್ಶನ್ ಈಗ ಈ ಪರಿಸ್ಥಿತಿಯಲ್ಲಿದ್ದಾಗ ಯಾವ ರೀತಿ ಇರಬೇಕು ಅಂತ ಯೋಚನೆ ಮಾಡಬೇಕಿತ್ತು. ಇದನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದರೆ ದರ್ಶನ್‌ಗೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ. ಇನ್ನೂ ಮನಃ ಪರಿವರ್ತನೆ ಅನ್ನೋದು ಇಂತಿಷ್ಟು ದಿನದಲ್ಲಿ ಆಗುವಂತದ್ದಲ್ಲ. ಅದಕ್ಕೂ ಸಮಯ ಬೇಕಾಗುತ್ತದೆ. ದರ್ಶನ್ ಚಿತ್ರರಂಗದವರು ಅಂತ ವಹಿಸಿಕೊಂಡು ಮಾತನಾಡುತ್ತಿಲ್ಲ. ಪಶ್ಚಾತ್ತಾಪ ಭಾವನೆ ಒಂದು ಫೋಟೋ ನೋಡಿ ಹೇಳೋಕೆ ಆಗಲ್ಲ. ಮಾನಸಿಕವಾಗಿ ಪಶ್ಚಾತ್ತಾಪ ಆಗಿರಬಹುದು. ಬದಲಾವಣೆ ಜಗದ ನಿಯಮ ಕಾದುನೋಡೋಣ ಎಂದಿದ್ದಾರೆ.

ದುಡ್ಡಿದ್ರೆ ಏನಾದರೂ ಮಾಡಬಹುದು ಅನ್ನೋದನ್ನು ನಾನು ಒಪ್ಪಲ್ಲ. ಇನ್ನೂ ದರ್ಶನ್‌ಗೆ ದುಡ್ಡಿಲ್ಲದೇ ಇರುವ ದಿನಗಳನ್ನ ನಾವು ನೋಡಿದ್ದೀವಿ. ಇನ್ನೂ ದೈಹಿಕವಾಗಿ ಸೊರಗಿಲ್ಲ. ಆದರೆ ಕುಗ್ಗಿಲ್ಲ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ದರ್ಶನ್ ಕುರಿತು ಮಾತನಾಡಿದ್ದಾರೆ. ಇನ್ನೂ ರೇಣುಕಾಸ್ವಾಮಿ ಸ್ವಾಮಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಅವರಲ್ಲಿ ಕ್ಷಮೆ ಕೇಳಿ ಬಂದಿದ್ದೇವೆ. ಅವರ ಕುಟುಂಬಸ್ಥರನ್ನ ನೋಡಿದ್ರೆ ಬೇಸರ ಆಗುತ್ತದೆ ಎಂದಿದ್ದಾರೆ. ಇನ್ನೂ ಪವಿತ್ರಾ ಗೌಡ ವಿಚಾರದಲ್ಲಿ ಏನಾಗಿದೆ ಅನ್ನೋದನ್ನು ಕಾನೂನು ನೋಡಿಕೊಳ್ಳುತ್ತದೆ. ಇನ್ನೂ ಕೊಲೆ ಮಾಡಿ ಅಂತಾ ಪವಿತ್ರಾ ಹೇಳುವ ಮಟ್ಟಿಗೆ ಇರೋಲ್ಲ. ಏನೋ ಬುದ್ಧಿ ಕಲಿಸಿ ಅಂತ ಹೇಳಿರಬಹುದು. ಬುದ್ಧಿ ಕಲಿಸುವ ಆತುರದಲ್ಲಿ ಈ ಘಟನೆ ನಡೆದಿರಬಹುದು ಎಂದು ಉಮೇಶ್ ಬಣಕಾರ್ ಹೇಳಿದ್ದಾರೆ.

Share This Article