ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಸೋಲು

Public TV
1 Min Read

ದೊಡ್ಮನೆ ಸೊಸೆ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivaraj Kumar) ಸೋಲು ಕಂಡಿದ್ದಾರೆ. ಶಿವಮೊಗ್ಗ (Shimoga) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೀತಾ, ಪ್ರತಿ ಸ್ಪರ್ಧಿ ಬಿ.ವೈ ರಾಘವೇಂದ್ರ ಎದುರು ಸೋಲು ಒಪ್ಪಿಕೊಂಡಿದ್ದಾರೆ. ಈ ಬಾರಿ ಗೀತಾ ಗೆಲುವಿಗಾಗಿ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಪ್ರಚಾರ ಮಾಡಿದ್ದರು. ಆದರೆ, ಯಾವ ಪ್ರಚಾರವೂ ಅವರನ್ನು ಕೈ ಹಿಡಿಯಲಿಲ್ಲ.

ಬಾಲಿವುಡ್ ನಟಿ ಕಂಗನಾಗೆ ಗೆಲುವು

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ (Loksabha Election 2024) ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕಂಗನಾ ರಣಾವತ್ (Kangana Ranaut) ಮೊದಲ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ. 70000 ಮತಗಳಿಂದ ನಟಿ ಗೆದ್ದಿದ್ದಾರೆ. ಮೂಲಕ ನಟಿ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕಂಗನಾ ಅವರು ಪಣ ತೊಟ್ಟಂತೆ ಸ್ಪರ್ಧೆ ಮಾಡಿ ಗೆದ್ದು ತೋರಿಸಿದ್ದಾರೆ. ಟಫ್ ಫೈಟ್ ಕೊಟ್ಟು ನಟಿ ಗೆದ್ದಿರೋದಕ್ಕೆ ನಟಿಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.‌

 

ಕಂಗನಾ ಮುತ್ತಜ್ಜ, ಸರ್ಜು ಸಿಂಗ್ ರಣಾವತ್ ಅವರು ಅಂದು ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ ಕಂಗನಾ, ಇದೀಗ ಬಿಜೆಪಿ ಪಕ್ಷದಿಂದ ಕಣಕ್ಕೆ ನಿಂತು ಗೆದ್ದಿದ್ದಾರೆ. ಅಂದಹಾಗೆ, ಲೋಕಸಭಾ ಚುನಾವಣೆ ಗೆದ್ದರೆ ಬಾಲಿವುಡ್ಗೆ ವಿದಾಯ ಹೇಳುತ್ತೇನೆ ಎಂದು ನಟಿ ಹೇಳಿದ್ದರು. ಹಾಗಾದ್ರೆ ನಟಿ ಬಾಲಿವುಡ್ಗೆ ಗುಡ್ ಬೈ ಹೇಳ್ತಾರಾ ಎಂದು ನೆಟ್ಟಿಗರಲ್ಲಿ ಇದೀಗ ಚರ್ಚೆ ಶುರುವಾಗಿದೆ.

Share This Article