ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾ ಘೋಷಿಸಿದ ನಿರ್ಮಾಪಕ ದಿಲ್ ರಾಜು

Public TV
1 Min Read

ತೆಲುಗು ಸಿನಿಮಾ ರಂಗ ಸ್ಟಾರ್ ನಿರ್ಮಾಪಕ ದಿಲ್ ರಾಜು (Dil Raju) ಮೊನ್ನೆಯಷ್ಟೇ ಯಶ್ (Yash) ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದರು. ಇದೀಗ ಕನ್ನಡಿಗರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದು, ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಹೊಸ ಸಿನಿಮಾವನ್ನು ತಾವೇ ನಿರ್ಮಾಣ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಆದರೆ, ಈ ಸಿನಿಮಾ ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಬಂದ ಬಳಿಕ ಬರಲಿದೆ ಎಂದಿದ್ದಾರೆ.

ಯಶ್ ಅವರ 20ನೇ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾದ ನಿರ್ದೇಶಕರು, ಕಥೆ ಬಗ್ಗೆ ಏನೂ ಹೇಳದ ರಾಜು ಕೇವಲ ನಿರ್ಮಾಣದ ಹೊಣೆ ಹೊತ್ತಿರುವ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದರು. ಇನ್ನೂ ಯಶ್ 19ನೇ ಸಿನಿಮಾವನ್ನು ಮಾಡಬೇಕಾಗಿರುವುದರಿಂದ ಹೆಚ್ಚಿನ ಮಾಹಿತಿಯನ್ನು ರಾಜು ಬಿಟ್ಟುಕೊಡಲಿಲ್ಲ. ಆದರೆ, ಪ್ರಶಾಂತ್ ಸಿನಿಮಾ ಬಗ್ಗೆ ಹಲವು ಅಚ್ಚರಿಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದನ್ನೂ ಓದಿ: ರಾಕಿಭಾಯ್ ಹೆಸರಿನಲ್ಲಿ ಸಲ್ಮಾನ್ ಖಾನ್‌ಗೆ ಧಮ್ಕಿ

ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ನಂತರ ಅವರು ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಒಂದು ಸಿನಿಮಾವನ್ನು ಮಾಡಬೇಕಿದೆ. ಈ ಸಿನಿಮಾ ಮುಗಿದ ನಂತರ ಪ್ರಭಾಸ್ (Prabhas) ಜೊತೆ ಮತ್ತೊಂದು ಚಿತ್ರ ಮಾಡಲಿದ್ದು, ಈ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡಲಿದ್ದಾರಂತೆ. ಈ ಚಿತ್ರಕ್ಕೆ ರಾವಣನ್ (Ravanan) ಎಂದು ಸದ್ಯಕ್ಕೆ ಹೆಸರಿಡಲಾಗಿದೆ. ಮುಂದಿನ ದಿನಗಳಲ್ಲಿ ಅದು ಬದಲಾಗಲೂಬಹುದು ಎಂದಿದ್ದಾರೆ.

ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಶ್ರೀಮಂತ ನಿರ್ಮಾಪಕ ಎಂದೆನಿಸಿರುವ ದಿಲ್ ರಾಜು, ಕನ್ನಡಿಗರಿಗೆ ಎರಡು ಸಿನಿಮಾ ಮಾಡುತ್ತಿದ್ದಾರೆ. ಒಂದೊಂದು ಚಿತ್ರಕ್ಕೆ ಐನೂರು ಕೋಟಿಗೂ ಅಧಿಕ ಹಣವನ್ನು ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article