ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

Public TV
1 Min Read

ನಿರ್ಮಾಪಕ ದಿಲ್ ರಾಜು (Dil Raju) ಅವರು ‘ವಾರಿಸು’ (Varisu) ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈ ನಡುವೆ ಯಶ್ (Actor Yash) ಜೊತೆ ಸಿನಿಮಾ ಮಾಡೋದಾಗಿ ಬಿಗ್ ಅಪ್‌ಡೇಟ್ ನೀಡಿದ್ದಾರೆ.

ಸೌತ್ ಸಿನಿರಂಗದ ನಿರ್ಮಾಪಕ ದಿಲ್ ರಾಜು ಸಾಕಷ್ಟು ಸಿನಿಮಾಗಳಿಗೆ ನಿರ್ಮಾಣ ಮಾಡುವ ಮೂಲಕ ಯಶಸ್ಸು ಗಳಿಸಿದ್ದಾರೆ. ವಿಜಯ್- ರಶ್ಮಿಕಾ ನಟನೆಯ ‘ವಾರಿಸು’ ಸಿನಿಮಾ ನಿರ್ಮಾಣ ಮಾಡಿ ಭರ್ಜರಿ ಲಾಭ ಗಿಟ್ಟಿಸಿಕೊಂಡಿದ್ದಾರೆ. 300 ಕೋಟಿ ರೂಪಾಯಿಗೂ ಅಧಿಕ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಕಲೆಕ್ಷನ್ ಮಾಡಿದೆ.

‘ಕೆಜಿಎಫ್ 2’ (KGF 2) ಸಿನಿಮಾ ಸಕ್ಸಸ್ ನಂತರ ಯಶ್ (Yash) ತಮ್ಮ ಮುಂದಿನ ಸಿನಿಮಾಗೆ ತೆರೆಮರೆಯಲ್ಲಿ ತಯಾರಿ ಮಾಡ್ತಿದ್ದಾರೆ. ಮುಂದಿನ ನಡೆ ಬಗ್ಗೆ ಎಲ್ಲೂ ಬಿಟ್ಟು ಕೊಡದೇ ಸೈಲೆಂಟ್ ಆಗಿ ವರ್ಕೌಟ್ ಮಾಡ್ತಿದ್ದಾರೆ. ದಿಲ್ ರಾಜ್, ಯಶ್ ಜೊತೆ ಸಿನಿಮಾ ಮಾಡುವ ಬಗ್ಗೆ ಹಿಂಟ್ ಕೊಟ್ಟಿರೋದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಪ್ರಭಾಸ್‌ ನಟನೆಯ ‘ಸಲಾರ್‌ʼ ರಿಲೀಸ್‌ ಡೇಟ್‌ ಫಿಕ್ಸ್‌

ಇತ್ತೀಚೆಗೆ ಟ್ವಿಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಲಾಯಿತು. ಈ ವೇಳೆ ಯಶ್ ಅಭಿಮಾನಿಯೊಬ್ಬರು ದಿಲ್ ರಾಜುಗೆ ಪ್ರಶ್ನೆ ಕೇಳಿದರು. ಯಶ್ ಜೊತೆ ಸಿನಿಮಾ ನಿರೀಕ್ಷಿಸಬಹುದೇ ಎಂದು ಕೇಳಲಾಯಿತು. ಇದಕ್ಕೆ ದಿಲ್ ರಾಜು ಪರವಾಗಿ ಉತ್ತರಿಸಿರುವ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ಹೌದು ಎನ್ನುವ ಉತ್ತರ ನೀಡಿದೆ.

ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಯಶ್ ಮುಂದಿನ ಸಿನಿಮಾಗೆ ದಿಲ್ ರಾಜು ನಿರ್ಮಾಣ ಮಾಡುತ್ತಾರಾ? ಅಥವಾ ಅಭಿಮಾನಿ ಪ್ರಶ್ನೆಗೆ ಸಹಜವಾಗಿ ದಿಲ್ ರಾಜು ಟೀಂ ಉತ್ತರಿಸಿದ್ರಾ ಎಂದು ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾದುನೋಡಬೇಕಿದೆ.

Share This Article