ಮೆಟ್ರೋ ನಿಲ್ದಾಣದ ಪಿಲ್ಲರ್‌ಗಳಲ್ಲಿ ಖಲಿಸ್ತಾನಿ ಪರ, ಮೋದಿ ವಿರುದ್ಧ ಬರಹ

Public TV
1 Min Read

ನವದೆಹಲಿ: ದೆಹಲಿಯ ಮೆಟ್ರೋ ನಿಲ್ದಾಣಗಳ (Delhi Metro Station) ಪಿಲ್ಲರ್‌ಗಳಲ್ಲಿ ಖಲಿಸ್ತಾನ್ ಪರ ಮತ್ತು ಪ್ರಧಾನಿ ನರೇಂದ್ರ ಮೋದಿ (Naredra Modi) ಅವರನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಬರೆದಿರುವುದು ಭಾನುವಾರ ಪತ್ತೆಯಾಗಿದೆ.

ಕರೋಲ್ ಬಾಗ್ ಮತ್ತು ಝಾಂಡೇವಾಲನ್ ಮೆಟ್ರೋ ನಿಲ್ದಾಣಗಳಲ್ಲಿ ಈ ಘೋಷಣೆಗಳನ್ನು ಬರೆದಿರುವುದು ಕಂಡುಬಂದಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ವರದಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಮೂಲದ ನಿಷೇಧಿತ ಸಿಖ್ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್ (SFJ) ಬೆಂಬಲಿಗರು ಈ ಘೋಷಣೆಗಳನ್ನು ಬರೆದಿದ್ದಾರೆ.

ತನಿಖೆ ಆರಂಭ: ಬರಹ ಸಂಬಂಧ ದೆಹಲಿ ಪೊಲೀಸರು ಈಗಾಗಲೇ ದೆಹಲಿ ಮೆಟ್ರೋ ಅಧಿಕಾರಿಗಳಿಂದ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣಗೆ ಇಂದು ಸಿಗುತ್ತಾ ರಿಲೀಫ್?

ಈ ಸಂಬಂಧ ತನಿಖೆ ನಡೆಸಲು ಈಗಾಗಲೇ ತಂಡಗಳನ್ನು ರಚಿಸಿದ್ದೇವೆ. ಆರೋಪಿಗಳ ಪತ್ತೆಗೆ ಮೆಟ್ರೋ ನಿಲ್ದಾಣಗಳಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಗೀಚುಬರಹ ಮತ್ತು ಘೋಷಣೆಗಳನ್ನು ಅಳಿಸಲಾಗಿದೆ. ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ಕೂಡ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭದ್ರತಾ ಸಿಬ್ಬಂದಿಯೊಬ್ಬರು ಭಾನುವಾರ ಬೆಳಗ್ಗೆ ಕರ್ತವ್ಯಕ್ಕೆ ಬಂದಾಗ ಮೆಟ್ರೊ ನಿಲ್ದಾಣದ ಪಿಲ್ಲರ್‌ಗಳ ಮೇಲೆ ಕಪ್ಪು ಬಣ್ಣದಲ್ಲಿ ಬರೆದಿರುವ ಘೋಷಣೆಗಳನ್ನು ಗಮನಿಸಿದ್ದಾರೆ. ಹೀಗಾಗಿ ಅವರು ಪ್ರತಿಕ್ರಿಯಿಸಿ, ನಾನು ಬೆಳಗ್ಗೆ 8 ಗಂಟೆಗೆ ಡ್ಯೂಟಿಗೆ ಬಂದಿದ್ದೇನೆ. ಈ ವೇಳೆ ಮೆಟ್ರೋ ನಿಲ್ದಾಣದ ಪಿಲ್ಲರ್‌ಗಳ ಮೇಲೆ ಕಪ್ಪು ಬಣ್ಣದಲ್ಲಿ ಏನೋ ಬರೆದಿರುವುದನ್ನು ಗಮನಿಸಿದ್ದೇನೆ. ಈ ವೇಳೆ ಅಲ್ಲಿ ಸಾಕಷ್ಟು ಜನ ಸೇರಿದ್ದು, ಗೋಡೆ ಬರಹಗಳನ್ನು ಓದುತ್ತಿದ್ದರು ಎಂದು ತಿಳಿಸಿದರು.

ರಾತ್ರಿ ಹೊತ್ತು ಈ ಘೋಷಣೆಗಳನ್ನು ಬರೆಯಲಾಗಿದೆ. ಯಾಕೆಂದರೆ ಆ ಸಮಯದಲ್ಲಿ ಯಾರೂ ಇರುವುದಿಲ್ಲ. ಈ ಘೋಷಣೆಗಳನ್ನು ಯಾರು ಬರೆದಿದ್ದಾರೆ ಎಂಬುದು ತಿಳಿದಿಲ್ಲ ಎಂದು ಅವರು ಹೇಳಿದರು.

Share This Article