ಬಿಹಾರ ಮೂಲದ ವ್ಯಕ್ತಿಗಳಿಂದ ಪ್ರಿಯಾಂಕಾ ಉಪೇಂದ್ರ ಮೊಬೈಲ್‌ ಹ್ಯಾಕ್‌!

Public TV
1 Min Read

ಬೆಂಗಳೂರು: ನಟ ಉಪೇಂದ್ರ (Upendra) ಮತ್ತು ಪತ್ನಿ ಪ್ರಿಯಾಂಕಾ (Priyanka Upendra) ಮೊಬೈಲ್ ಹ್ಯಾಕ್ ಪ್ರಕರಣದ ತನಿಖೆ ನಡೆಸುತ್ತಿರುವ ಸದಾಶಿವನಗರ ಪೊಲೀಸರು ಹ್ಯಾಕರ್‌ಗಳ (Hack) ಮೂಲ ಪತ್ತೆ ಮಾಡಿದ್ದಾರೆ.

ಮೊಬೈಲ್ ಹ್ಯಾಕ್ ಮಾಡಿರುವ ವಂಚಕರು ಬಿಹಾರ (Bihar) ಮೂಲದವರು ಎನ್ನುವುದು ಗೊತ್ತಾಗಿದೆ. ಬಿಹಾರದಿಂದಲೇ ನಾಲ್ಕೈದು ಜನರಿಂದ ಉಪೇಂದ್ರ ದಂಪತಿಯ ಮೊಬೈಲ್ ನಂಬರ್ ಹ್ಯಾಕ್ ಮಾಡಿ, ಹಣ ಕೇಳಿದ್ದಾರೆ. ಇದನ್ನೂ ಓದಿ:  ಉಪೇಂದ್ರ ದಂಪತಿ ಫೋನ್ ಹ್ಯಾಕ್ – ಸೈಬರ್ ವಂಚಕರು ದೋಚಿದ್ದೆಷ್ಟು ಹಣ?

 

ಸುಮಾರು 1.65 ಲಕ್ಷ ರೂ. ಹಣ ಪಡೆದುಕೊಂಡು, ನಾಲ್ಕು ಅಕೌಂಟ್ ಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ನಾಲ್ಕು ಅಕೌಂಟ್ ಗಳು ಕೂಡ ನಕಲಿ ಆಗಿರುವುದು ಗೊತ್ತಾಗಿದೆ.

ಅದೇ ನಂಬರ್ ಬಳಸಿ, ಅದೇ ದಿನ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಕೆಲವರ ಮೊಬೈಲ್ ಗಳನ್ನು ಹ್ಯಾಕ್ ಮಾಡಲಾಗಿದೆ. ಸದ್ಯ ಸದಾಶಿವನಗರ ಪೊಲೀಸರು, ಹ್ಯಾಕರ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಬಿಹಾರಕ್ಕೆ ವಿಶೇಷ ತಂಡ ಕಳುಹಿಸಲು ಸಿದ್ದತೆ ನಡೆದಿದೆ.

Share This Article