ಟ್ವಿಟ್ಟರ್ ಅಂಗಳಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ

Public TV
2 Min Read

– ಯಾರನ್ನ ಫಾಲೋ ಮಾಡ್ತಿದ್ದಾರೆ?

ನವದೆಹಲಿ: ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಸಂಪರ್ಕಕ್ಕೆ ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಮವಾರ ಪ್ರಿಯಾಂಕ ಗಾಂಧಿ ವಾದ್ರಾ ಹೆಸರಿನಲ್ಲಿ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ. ಈ ಕುರಿತು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

ಇಂದು ಬೆಳಗ್ಗೆ 11.49ರ ಸಮಯದಲ್ಲಿ ಪ್ರಿಯಾಂಕ ಗಾಂಧಿರ ಖಾತೆ ತೆರೆಯಲಾಗಿದ್ದು, 15 ನಿಮಿಷದಿಂದ 1 ಗಂಟೆಯ ಅವಧಿಯಲ್ಲಿ 5 ಸಾವಿರದಿಂದ 25 ಸಾವಿರ ಟ್ವಿಟ್ಟಿಗರು ಪ್ರಿಯಾಂಕ ಅವರ ಖಾತೆಯನ್ನು ಫಾಲೋ ಮಾಡಿದ್ದಾರೆ. ಸದ್ಯ 50 ಸಾವಿರ ಮಂದಿ ಫಾಲೋ ಮಾಡುತ್ತಿದ್ದು, ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಖಾತೆ ತೆರೆದ ಬಳಿಕ ಯಾವುದೇ ಟ್ವೀಟ್ ಮಾಡದಿದ್ದರು ಕೂಡ ಖಾತೆಯನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯ ಪ್ರಿಯಾಂಕ ಅವರು ತಮ್ಮ ಖಾತೆಯಿಂದ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಸೇರಿದಂತೆ 06 ಮಂದಿಯನ್ನು ಫಾಲೋ ಮಾಡುತ್ತಿದ್ದು, ಸಹೋದರ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷ ನಾಯಕರಾದ ಜೋತಿರಾಧಿತ್ಯ ಸಿಂಧ್ಯಾ, ರಣ್‍ದೀಪ್ ಸಿಂಗ್ ಸರ್ಜೆವಾಲಾ, ಅಹ್ಮದ್ ಪಟೇಲ್, ಆಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಪಟ್ಟಿಯಲ್ಲಿದ್ದಾರೆ.

2014 ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಪಕ್ಷದ ಪರವಾಗಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಪ್ರಚಾರ ಬಳಿಕ ಕಾಂಗ್ರೆಸ್ ಈ ಬಗ್ಗೆ ಒತ್ತು ನೀಡಿತ್ತು. ಅಲ್ಲದೇ ರಾಜಕೀವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ಅವರು ಮಾಡುವ ಆರೋಪಗಳು ಹೆಚ್ಚು ಟ್ವಿಟ್ಟರ್ ಖಾತೆಯಿಂದಲೇ ಚರ್ಚಿತವಾಗಿದ ಎಂದೇ ಹೇಳಬಹುದು.

47 ವರ್ಷದ ಪ್ರಿಯಾಂಕ ಗಾಂಧಿ ವಾದ್ರಾ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿ ಸಕ್ರಿಯ ರಾಜಕಾರಣದಿಂದ ದೂರ ಉಳಿದ್ದರು. ಆದರೆ ಈ ಬಾರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಪಡೆಯುವ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಪಡೆದು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *