ಧರ್ಮ, ಜಾತಿ ವಿಭಜನೆ ಬಿಜೆಪಿಗೆ ಲಾಭ, ಜನರಿಗಲ್ಲ: ಪ್ರಿಯಾಂಕಾ ಗಾಂಧಿ

Public TV
2 Min Read

ಕಾರವಾರ : ಧರ್ಮ ಸಂಘರ್ಷದಲ್ಲಿ ಬಿಜೆಪಿಗೆ (BJP) ಸಹಾಯವಾಗಿದೆ. ಜನರಿಗೆ ಯಾವುದೇ ಸಹಾಯ ಆಗಿಲ್ಲ ಎಂದು ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ( Priyanka Gandhi) ಟೀಕಿಸಿದರು.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ DFA ಗ್ರೌಂಡ್‌ನಲ್ಲಿ ಹಳಿಯಾಳ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ ದೇಶಪಾಂಡೆ ಪರ ಮತ ಪ್ರಚಾರ ಸಭೆಗೆ ಆಗಮಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ 40% ಸರ್ಕಾರ, 2.5 ಲಕ್ಷ ಕೋಟಿ ಹಣ ಲೂಟಿ ಮಾಡಿದೆ. ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲ ಲೂಟಿ ಮಾಡುತ್ತಿದ್ದಾರೆ. ಪ್ರಧಾನಿಯವರು ಹುಲಿ ನೋಡಲು ಇಲ್ಲಿಗೆ ಬರುತ್ತಾರೆ. ಚುನಾವಣೆ ಪ್ರಚಾರಕ್ಕೆ ಇಲ್ಲಿಗೆ ಬರುತ್ತಾರೆ. ಆದರೆ ಜನರ ಸಮಸ್ಯೆ ಕೇಳಲು ಇಲ್ಲಿಗೆ ಬರುವುದಿಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಧೋರಣೆಯನ್ನು ತರಾಟೆ ತೆಗೆದುಕೊಂಡರು.

ರಾಜ್ಯದಲ್ಲಿ ಲೂಟ್, ಲಾಲಜ್, ಅಧಿಕಾರದ ಸರ್ಕಾರವಿದೆ. ಇದನ್ನು ಸರಿ ಪಡಿಸಲು ಜನ ಒಟ್ಟಾಗಬೇಕು. ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲಾ ಲೂಟಿ ಮಾಡುತ್ತಿದ್ದಾರೆ. ಈ ಹಣ ಸಾರ್ವಜನಿಕರದ್ದು, ಇದನ್ನು ಸರಿಪಡಿಸಲು ಜನ ಒಟ್ಟಾಗಬೇಕು. ಧರ್ಮ ಸಂಘರ್ಷದಲ್ಲಿ ಬಿಜೆಪಿಗೆ ಸಹಾಯವಾಗಿದೆ. ಜನರಿಗೆ ಯಾವುದೇ ಸಹಾಯ ಆಗಿಲ್ಲ ಎಂದು ಕಿಡಿಕಾರಿದರು.

ನಾವು ಭ್ರಷ್ಟಾಚಾರ, ಲೂಟಿಯನ್ನು ಬಹಿರಂಗವಾಗೇ ಮಾಡುತ್ತೇವೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಬಿಜೆಪಿ ಲೂಟಿ ಮಾಡಿದ ಹಣದಿಂದ ಉತ್ತಮ ರಸ್ತೆ, ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ನಿರ್ಮಾಣ ಮಾಡಬಹುದಿತ್ತು. ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ 24 ಯೋಜನೆಗಳ ಆಶ್ವಾಸನೆ ನೀಡಿ 2 ಯೋಜನೆ ಮಾತ್ರ ಈಡೇರಿಸಿದ್ದಾರೆ. ಯುವಕರಿಗೆ ಉದ್ಯೋಗ ಕೂಡ ಸಿಗುತ್ತಿಲ್ಲ. 2 ಲಕ್ಷ ಹುದ್ದೆಗಳು ಖಾಲಿ ಇವೆ. ಇವುಗಳನ್ನು ತುಂಬಿ ಯುವಕರಿಗೆ ಉದ್ಯೋಗ ನೀಡಬಹುದಿತ್ತು. ಇದು ಸಹ ಆಗಲಿಲ್ಲ. ನಮ್ಮ ಸರ್ಕಾರ ಬಂದರೆ 2 ಲಕ್ಷ ಸರ್ಕಾರಿ ಹುದ್ದೆಗಳನ್ನು ತುಂಬುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಭರ್ಜರಿ ರೋಡ್ ಶೋ – ಸಿಲಿಕಾನ್ ಸಿಟಿ ಜನರ ಪ್ರೀತಿಗೆ ಪ್ರಧಾನಿ ಫಿದಾ

ಕರ್ನಾಟಕವನ್ನು ಸದೃಢಗೊಳಿಸಲು, ನಿಮ್ಮ ಭವಿಷ್ಯ ಗಟ್ಟಿಯಾಗಿಸಲು, ಲೂಟಿ ಬಂದ್ ಮಾಡಿಸಿ. ನಿಮ್ಮ ಸಂಪತ್ತು ನಿಮಗೆ ಸಿಗುವಂತಾಗಬೇಕು. ಈ ಬಾರಿ ಯಾವ ಪಕ್ಷ ಜನಪರವಾಗಿದೆ. ಯಾವುದು ವಿರುದ್ಧವಾಗಿದೆ ಎಂದು ನೋಡಿಕೊಂಡು ಮತಹಾಕಿ ಎಂದರು.

ಪ್ರಿಯಾಂಕಾ ಗಾಂಧಿಯವರು ಭಾಷಣದ ಪ್ರಾರಂಭದಲ್ಲಿ ಕನ್ನಡದಲ್ಲೇ ನಮಸ್ಕಾರ ಎಂದು ಹೇಳಿ ಮುಂದೆ ಬರುವಾಗ ಕನ್ನಡ ಕಲಿತು ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದರು. ಇದನ್ನೂ ಓದಿ: ಒಂದು ಕೊಡ್ರಯ್ಯ ಅಂದ್ರೆ 2 ಕೊಟ್ಟವ್ರೆ; ಚಾಮರಾಜನಗರ ವೋಲ್ಟೇಜ್ ಆದ್ರೆ, ವರುಣಾ ಹೈವೋಲ್ಟೇಜ್: ಸೋಮಣ್ಣ

Share This Article