ಒಂದೇ ವಿಮಾನದಲ್ಲಿ ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ – ಇದರ ಹಿಂದಿನ ರಹಸ್ಯವೇನು?

Public TV
2 Min Read

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ದೆಹಲಿಯಿಂದ ಲಕ್ನೋಗೆ ವಿಮಾನದಲ್ಲಿ ತೆರಳುವ ವೇಳೆ ಅಚನಾಕ್ ಆಗಿ ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಯಾವುದೇ ರೀತಿಯ ರಾಜಕೀಯ ಕುರಿತ ವಿಚಾರಗಳ ಚರ್ಚೆ ನಡೆದಿಲ್ಲ ಎಂದು ಸಮಾಜವಾದಿ ಪಕ್ಷ ತಿಳಿಸಿದೆ. ಆದರೂ ಈ ವಿಚಾರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

2022ರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷವು ಅಂಗೀಕರಿಸಿರುವ ವಿವಿಧ ನಿರ್ಣಯಗಳನ್ನು ಜನರಿಗೆ ತಿಳಿಸಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಬರಬಂಕಿಯಲ್ಲಿ ಮೂರು ಪ್ರತಿಜ್ಞಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಮತ್ತು ಚುನಾವಣಾ ಪ್ರಣಾಳಿಕೆ ಹೊರತು ಪಡಿಸಿ ಉತ್ತರ ಪ್ರದೇಶದ ಜನತೆಗೆ ನೀಡಿರುವ 7 ಭರವಸೆಗಳ ಕುರಿತು ಮಾತನಾಡಲಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬೈ ಎಲೆಕ್ಷನ್ ದಂಗಲ್ – ಇದು ಕೌರವರು, ಪಾಂಡವರ ಕದನ ಎಂದ ಸಿದ್ದರಾಮಯ್ಯ

ಈ ಮಧ್ಯೆ ದೆಹಲಿಗೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ ಒಂದೇ ವಿಮಾನದಲ್ಲಿ ಅಖಿಲೇಶ್ ಯಾದವ್ ಹಾಗೂ ಪ್ರಿಯಾಂಕಾ ಗಾಂಧಿ ಅವರು ಭೇಟಿಯಾಗಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಫೋಟೋದಲ್ಲಿ ಅಖಿಲೇಶ್ ಮಾಸ್ಕ್ ಧರಿಸಿಕೊಂಡು ಪ್ರಿಯಾಂಕಾ ಅವರನ್ನು ನೋಡುತ್ತಾ ನಗುತ್ತಿರುವುದನ್ನು ಕಾಣಬಹುದಾಗಿದೆ.

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪ್ರಿಯಾಂಕಾ ಹಾಗೂ ಅಖಿಲೇಶ್ ಯಾದವ್ ಆಡಳಿತ ಪಕ್ಷದ ವಿರುದ್ಧ ತಮ್ಮ ದಾಳಿಯನ್ನು ತೀವ್ರಗೊಳಿಸಿದ್ದಾರೆ. ಅಖಿಲೇಶ್ ಯಾದವ್ ಯಾದವೇತರ ಹಿಂದೂಳಿದ ಜಾತಿಗಳ ಕಡೆಗೆ ಗಮನ ಹರಿಸುತ್ತಿದ್ದರೆ, ಪ್ರಿಯಾಂಕಾ ಗಾಂಧಿ ಮಹಿಳೆ ಅಭ್ಯರ್ಥಿಗಳಿಗೆ ಪಕ್ಷದಲ್ಲಿ ಶೇಕಡಾ 40ರಷ್ಟು ಟಿಕೆಟ್ ಹಂಚಿಕೆ ಘೋಷಣೆ ಮಾಡುವ ಮೂಲಕ ಮಹಿಳಾ ಸಬಲೀಕರಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಇದ್ದಾಗ ಕೆಲ ಡೈಲಾಗ್ ಫಿಕ್ಸ್: ಬೊಮ್ಮಾಯಿ

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಿ ಜಯ ಸಾಧಿಸುತ್ತದೆಯೋ ಅಥವಾ ಇತರ ಪಕ್ಷಗಳೊಂದಿಗೆ ದೋಸ್ತಿ ಸರ್ಕಾರ ರಚಿಸಲಿದ್ಯಾ ಎಂದು ಕಾದುನೋಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *