ನನಗೆ ಬಹಳ ಮಕ್ಕಳನ್ನು ಪಡೆಯುವ ಆಸೆ-ಇದರಲ್ಲಿ ಸಮಸ್ಯೆ ಇದೆ ಅಂದ್ರು ಪ್ರಿಯಾಂಕಾ ಚೋಪ್ರಾ

Public TV
1 Min Read

ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಹಾಲಿವುಡ್‍ನ ‘ಕ್ವಾಂಟಿಕೋ ಸೀಸನ್-3’ ಪ್ರೊಜೆಕ್ಟ್ ನಲ್ಲಿ ಬ್ಯೂಸಿ ಆಗಿದ್ದಾರೆ. ಕ್ವಾಂಟಿಕೋ ಶೂಟಿಂಗ್‍ನ ಫೋಟೋಗಳು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇತ್ತೀಚೆಗೆ ಅಂತರಾಷ್ಟೀಯ ಮ್ಯಾಗಜಿನ್‍ಗೆ ನೀಡಿದ ಸಂದರ್ಶನ ವೇಳೆ ಪ್ರಿಯಾಂಕಾ ತಮ್ಮ ಖಾಸಗಿ ಜೀವನ ಮತ್ತು ಮದುವೆ ಬಗ್ಗೆ ಮಾತನಾಡಿದ್ದಾರೆ.

ನನಗೆ ರೊಮ್ಯಾನ್ಸ್ ಮಾಡೋದು ಅಂದ್ರೆ ತುಂಬಾ ಇಷ್ಟವಾಗುತ್ತದೆ. ರೊಮ್ಯಾನ್ಸ್ ವಿಚಾರದಲ್ಲಿ ನಾನು ಸಿಕ್ಕಾಪಟ್ಟೆ ಶಿಸ್ತು ಕಾಪಾಡಿಕೊಂಡಿದ್ದೇನೆ. ತುಂಬಾ ವರ್ಷಗಳಿಂದ ಸಿಂಗಲ್ ಆಗಿರುವದರಿಂದ ನನ್ನ ಖಾಸಗಿ ಜೀವನದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೆನೆ ಅಂತಾ ಸಂದರ್ಶನದಲ್ಲಿ ಹೇಳಿದ್ದಾರೆ.

ಜಾಣ, ಬುದ್ಧಿವಂತ ಮತ್ತು ಸ್ಮಾರ್ಟ್ ಆಗಿರದ ಹುಡುಗ ನನ್ನನ್ನು ಇಂಪ್ರೆಸ್ ಮಾಡಲು ಸಾಧ್ಯವಿಲ್ಲ. ಈ ಎಲ್ಲ ಗುಣಗಳು ನನ್ನ ಹುಡುಗನಲ್ಲಿ ಮಹತ್ವಪೂರ್ಣತೆ ಪಡೆದುಕೊಳ್ಳುತ್ತವೆ. ನಾನು ತುಂಬಾ ರೊಮ್ಯಾಂಟಿಕ್ ಮತ್ತು ಇಮೋಶನಲ್ ಆಗಿದ್ದೇನೆ ಅಂತಾ ಉತ್ತರಿಸಿದರು.

ಮದುವೆ ಮತ್ತು ಮಕ್ಕಳು ನನ್ನ ಜೀವನದ ಪ್ರಮುಖವಾದ ಘಟ್ಟಗಳು. ಮದುವೆ, ಮಕ್ಕಳು ಮತ್ತು ಸಂಸಾರದಲ್ಲಿ ಅತಿಯಾದ ನಂಬಿಕೆಯನ್ನು ಹೊಂದಿದ್ದೇನೆ. ನನಗೆ ಬಹಳ ಮಕ್ಕಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದಿದ್ದೇನೆ, ಆದ್ರೆ ಮಕ್ಕಳನ್ನು ನಾನು ಯಾರಿಂದ ಪಡೆಯಲಿ ಎಂಬ ಸಮಸ್ಯೆ ನನ್ನಲ್ಲಿ ಕಾಡುತ್ತದೆ. ನನ್ನನ್ನು ಮದುವೆ ಆಗುವ ಹುಡುಗನಿಗೆ ಹೆಚ್ಚು ಮಕ್ಕಳು ಇಷ್ಟವಾಗದೇ ಹೋದ್ರೆ ನಾನೇನು ಮಾಡಬೇಕು ಎಂಬ ಚಿಂತೆ ನನ್ನಲಿದೆ ಅಂತಾ ತಿಳಿಸಿದರು.

ಪೋಷಕರಿಂದ ಮದುವೆಯ ವಿಚಾರವಾಗಿ ಯಾವುದೇ ಒತ್ತಾಯಗಳಿಲ್ಲ. ನಾನು 21ನೇ ಶತಮಾನದಲ್ಲಿ ಹುಟ್ಟಿದ್ದಕ್ಕೆ ತುಂಬಾ ಖುಷಿ ಪಡುತ್ತೇನೆ. ಭವಿಷ್ಯದ ನನ್ನ ಜೀವನವನ್ನು ಸುಂದರ ಮತ್ತು ಗುಣವಂತನೊಂದಿಗೆ ಕಳೆಯಲು ಇಷ್ಟಪಡುತ್ತೇನೆ ಎಂದು ಭವಿಷ್ಯದ ಕನಸುಗಳನ್ನು ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *