ಪ್ರಿಯಾಂಕ ಚೋಪ್ರಾ-ನಿಕ್ ಜೋನ್ಸ್ ಮದುವೆ ಫಿಕ್ಸ್

Public TV
1 Min Read

-ಜೋಧ್‍ಪುರನಲ್ಲಿ ಮದ್ವೆ ಫಿಕ್ಸ್ ಆಗಿದ್ದೇಕೆ?

ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ನವೆಂಬರ್ 30ರಂದು ಇಂದೋರ್‍ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಅಮೆರಿಕದ ಸಿಂಗರ್ ನಿಕ್ ಜೋನ್ಸ್ ಜೊತೆ ಪ್ರಿಯಾಂಕ ಮದುವೆ ನಡೆಯಲಿದ್ದು, ಸಮಾರಂಭಕ್ಕೆ ಕೇವಲ 200 ಅತಿಥಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಆಗಸ್ಟ್ 18ಕ್ಕೆ ಪ್ರಿಯಾಂಕ ಮತ್ತು ನಿಕ್ ಮುಂಬೈನ ನಿವಾಸದಲ್ಲಿ ಹಿಂದೂ ಸಂಪ್ರದಾಯದಂತೆ ಉಂಗುರ ಬದಲಿಸಿಕೊಂಡಿದ್ದರು. ನಿಶ್ಚಿತಾರ್ಥಕ್ಕೂ ಮೊದಲು ಎಲ್ಲರಂತೆ ಪ್ರಿಯಾಂಕ ಮತ್ತು ನಿಕ್ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿಕೊಂಡಿದ್ದರು.

ಜೋಧ್‍ಪುರನಲ್ಲಿಯೇ ಮದ್ವೆ ಏಕೆ?
ಇತ್ತೀಚೆಗೆ ಸೆಲೆಬ್ರೆಟಿಗಳು ತಮ್ಮ ಮದುವೆಯನ್ನು ವಿದೇಶದಲ್ಲಿ ಆಗಲು ಪ್ಲಾನ್ ಮಾಡುತ್ತಿದ್ದಾರೆ. ಆದ್ರೆ ಪ್ರಿಯಾಂಕ ಮತ್ತು ನಿಕ್ ಜೋಧಪುರ ನಗರದ ಉಮೈದ್ ಭವನದಲ್ಲಿ ಮದುವೆ ಆಗಲಿದ್ದಾರೆ. ನವೆಂಬರ್ 20ರಿಂದ ಡಿಸೆಂಬರ್ 2ರವರೆಗೆ ಮೂರು ದಿನಗಳವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ನಿಶ್ಚಿತಾರ್ಥಕ್ಕೂ ಮುನ್ನ ಜೋಧ್‍ಪುರ ನಗರಕ್ಕೆ ಭೇಟಿ ನೀಡಿದ್ದಾಗ ನಿಕ್ ಸ್ಥಳವನ್ನು ಮೆಚ್ಚಿಕೊಂಡಿದ್ದರು. ಹಾಗಾಗಿ ನಿಕ್ ಅಂದೇ ತಮ್ಮ ಮದುವೆ ಜೋಧ್‍ಪುರದಲ್ಲಿಯೇ ನಡೆಯಬೇಕೆಂದು ನಿರ್ಧರಿಸಿದ್ದರಂತೆ.

ನವೆಂಬರ್ 30ರಂದು ಅದ್ಧೂರಿಯಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ವಿಧಿವಿಧಾನಗಳು ನಡೆಯಲಿವೆ. ಮದುವೆ ಬಳಿಕ ನ್ಯೂಯಾರ್ಕ್ ನಲ್ಲಿ ಪ್ರಿಯಾಂಕ ಮತ್ತು ನಿಕ್ ಔತಣಕೂಟವನ್ನು ಏರ್ಪಡಿಸಲಿದ್ದಾರೆ. ನಿಕ್ ಅಪಾರ ಕುಟುಂಬಸ್ಥರು ಮತ್ತು ಸ್ನೇಹಿತರ ಬಳಗ, ಪ್ರಿಯಾಂಕ ಸಿನಿಮಾ ಸ್ನೇಹಿತರಿಗಾಗಿಯೇ ಈ ವಿಶೇಷ ಔತಣಕೂಟ ಆಯೋಜಿಸಲಾಗಿದೆ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *