ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

Public TV
2 Min Read

ಬಾಲಿವುಡ್, ಹಾಲಿವುಡ್ ಸಿನಿಮಾ ಅಂತಾ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸದ್ದು ಮಾಡುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra), ಇದೀಗ ಮೂರು ವರ್ಷಗಳ ನಂತರ ಅಮೆರಿಕಾದಿಂದ ಭಾರತಕ್ಕೆ ಮರಳಿದ್ದಾರೆ. ಈ ಬೆನ್ನಲ್ಲೇ ಪ್ರಿಯಾಂಕಾ, 22 ವರ್ಷಗಳ ಹಿಂದಿನ ಮಿಸ್ ವರ್ಲ್ಡ್ ಮುಡಿಗೇರಿಸಿಕೊಂಡಿರುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. `ಮಿಸ್ ವರ್ಲ್ಡ್ 2000′(Miss World 2000) ಪ್ರಿಯಾಂಕಾ ಚೋಪ್ರಾ ಗೆದ್ದಿದ್ದು ಪಕ್ಷಪಾತದಿಂದ ಎಂದು ಸಹಸ್ಪರ್ಧಿ ಗಂಭೀರ ಆರೋಪ ಮಾಡಿದ್ದಾರೆ.

ಬಾಲಿವುಡ್‌ನಲ್ಲಿ ಮಿಂಚಿ, ನಿಕ್ ಜೊತೆ ಅಮೆರಿಕಾದಲ್ಲಿ ಸೆಟೆಲ್ ಆದ ಮೇಲೆ ಹಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಪ್ರಿಯಾಂಕಾ, ಮೂರು ವರ್ಷಗಳ ಗ್ಯಾಪ್ ನಂತರ ಇದೀಗ ಭಾರತಕ್ಕೆ ಮರಳಿದ್ದಾರೆ. ಮುಂಬೈ ಮಹಾನಗರಿಯಲ್ಲಿ ಎಂಜಾಯ್ ಮಾಡುತ್ತಿರುವ ಪಿಗ್ಗಿಗೆ ಹೊಸ ವಿವಾದವೊಂದು ಸುತ್ತಿಕೊಂಡಿದೆ. ಫ್ಯಾಷನ್ ಲೋಕದಲ್ಲಿ ಈಗ ಮಿಸ್ ಯುಎಸ್‌ಎ 2022 ಸ್ಪರ್ಧೆಯಲ್ಲಿ ಪಕ್ಷಪಾತ ಮಾಡಲಾಗಿದೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಲೆಲಾನಿ ಮೆಕೊನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿದ್ದು 2000ನೇ ಇಸವಿಯ ಮಿಸ್ ವರ್ಲ್ಡ್ ಸ್ಪರ್ಧೆಯ ಬಗ್ಗೆಯೂ ಟೀಕೆ ಮಾಡಿದ್ದಾರೆ. ಪ್ರಿಯಾಂಕ ವಿರುದ್ಧ ಮಾತನಾಡಿದ್ದಾರೆ.

`ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ಲೆಲಾನಿ ಮೆಕೊನಿ ಕೂಡ ಭಾಗವಹಿಸಿದ್ದರು. ಆದರೆ ಪ್ರಿಯಾಂಕಾ ಚೋಪ್ರಾ ಅವರು ಆ ವರ್ಷ ಕಿರೀಟ ಗೆದ್ದಿದ್ದು ಪಕ್ಷಪಾತದಿಂದ ಎಂದು ಹೇಳಿದ್ದಾರೆ. ಹೇಗೆ ಮೋಸ ನಡೆದಿದೆ, ಪ್ರಿಯಾಂಕಾ ಪರ ಹೇಗಿತ್ತು ಎನ್ನುವ ಬಗ್ಗೆ ಲೆಲಾನಿ ಮೆಕೊನಿ ಅವರು ಮಾತನಾಡಿದ್ದಾರೆ. ಅಂದಿನ ದಿನದಂದು ಪ್ರಿಯಾಂಕಾ ಅವರ ಗೌನ್‌ಗಳನ್ನು ಚೆನ್ನಾಗಿ ವಿನ್ಯಾಸ ಮಾಡಲಾಗಿತ್ತು. ಅವರಿಗೆ ವಿಶೇಷ ಸೌಕರ್ಯಗಳನ್ನು ನೀಡಲಾಗಿತ್ತು. ಪತ್ರಿಕೆಯಲ್ಲಿ ಪ್ರಿಯಾಂಕಾ ಪಬ್ಲಿಸಿಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಇನ್ನುಳಿದ ಸ್ಪರ್ಧಿಗಳ ಗ್ರೂಪ್ ಫೋಟೋ ಹಾಕಲಾಗಿತ್ತು. ಜೊತೆಗೆ 2000 ಇಸವಿಯ ಮಿಸ್ ವರ್ಲ್ಡ್ ಪ್ರಯೋಜಕರು ಭಾರತದವರೇ ಆಗಿದ್ದರು ಎಂದು ಲೆಲಾನಿ ಮೆಕೊನಿ ಆರೋಪ ಮಾಡಿದ್ದಾರೆ. ಇದನ್ನೂ ಓದಿ:`ಅವತಾರ್ 2′ ಟ್ರೈಲರ್‌ ಟ್ರೆಂಡಿಂಗ್‌ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಕನ್ನಡಿಗರು ಗರಂ

22 ವರ್ಷಗಳ ಹಿಂದಿನ ಮಿಸ್ ವರ್ಲ್ಡ್ ಕಿರೀಟದ ಬಗ್ಗೆ ಇದೀಗ ಸಾಕಷ್ಟು ಚರ್ಚೆ ಆಗುತ್ತಿದೆ. ಪಿಗ್ಗಿ ವಿರುದ್ಧ ಸಹಸ್ಪರ್ಧಿಯ ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ. ಇದಕ್ಕೆಲ್ಲ ಪ್ರಿಯಾಂಕಾ ಚೋಪ್ರಾ, ಉತ್ತರ ನೀಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ. ಸದ್ಯ ನಟಿ ಕೂಡ ಮದುವೆ, ಮಗಳು, ಸಿನಿಮಾಗಳು ಅಂತಾ ಬ್ಯುಸಿಯಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article