ಸರ್ವ ಧರ್ಮಗ್ರಂಥಗಳ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ಸಂಸ್ಕೃತಿ ಕಲಿತಿಲ್ಲ: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

2 Min Read

– ರಾಜೀವ್‌ ಗೌಡ ವಿರುದ್ಧ ಪಕ್ಷದ ಅಧ್ಯಕ್ಷರು ಕ್ರಮ ತಗೋತಾರೆ ಎಂದ ಸಚಿವ

ಬೆಂಗಳೂರು: ಬಿಜೆಪಿ (BJP) ಅವರಿಂದ ನಾವು ಸಂಸ್ಕೃತಿ ಕಲಿಯಬೇಕಾ? ಸರ್ವ ಧರ್ಮ ಗ್ರಂಥಗಳ ಹೆಸರಿನಲ್ಲಿ ರಾಜಕೀಯ ಮಾಡ್ತಾರೆ. ಆದ್ರೆ ಅವರಿಗೆ ಸಂಸ್ಕೃತಿ ಇಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೌರಾಯುಕ್ತೆಗೆ ರಾಜೀವ್‌ ಗೌಡ ದಮ್ಕಿ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ರಾಜೀವ್ ಗೌಡ ಆಗಲಿ, ಯಾರೇ ಆಗಲಿ ಕಾನೂನಿಗಿಂತ ದೊಡ್ಡವರಲ್ಲ. ಅವರು ಮಾತನಾಡಿರೋದು ಸರಿಯಲ್ಲ. ಅದನ್ನು ಸಮರ್ಥನೆ ಮಾಡಿಕೊಳ್ಳುವುದು ಕೂಡ ತಪ್ಪು ಆಗುತ್ತೆ ಯಾರಿಗೂ ಕೂಡ ಕಾನೂನು ಮತ್ತು ಸಂವಿಧಾನದಲ್ಲಿ ಬೇರೆ ಅವರನ್ನ ನಿಂದಿಸುವ ಮತ್ತು ಅವಾಚ್ಯ ಶಬ್ಧದಲ್ಲಿ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಅದು ಏನೇ ಇರಲಿ ಅದು ತಪ್ಪೇ. ಪಾರ್ಟಿ ಅಧ್ಯಕ್ಷರು ಕ್ರಮ ತೆಗೆದುಕೊಳ್ತಾರೆ ಅಂತ ಹೇಳಿದ್ದಾರೆ.

ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಬಿಜೆಪಿ ಆರೋಪಕ್ಕೆ ಉತ್ತರಿಸಿ, ಬಿಜೆಪಿ ಅವರಿಂದ ಸಂಸ್ಕೃತಿ ಕಲಿಯಬೇಕೇನ್ರೀ ನಾವು? ಇದೇ ನಿಮ್ಮ ಮುನಿರತ್ನ, ಸಿಟಿ ರವಿ, ಕೌನ್ಸಿಲ್ ನಲ್ಲಿ ಏನು ಹೇಳಿದ್ದಾರೆ ಅಂತ ಗೊತ್ತು. ವಿರೋಧ ಪಕ್ಷದ ಮೇಲ್ಮನೆ ನಾಯಕ ಚಿತಾಪುರದಲ್ಲಿ ನನಗೆ ನಾಯಿ ಅಂತ ಹೇಳಿ ಹೋಗಿದ್ದಾರೆ. ಇವರ ಹತ್ತಿರ ಸಂಸ್ಕೃತಿ ಕಲಿಬೇಕಾ ನಾವು? ಸರ್ವ ಧರ್ಮ ಗ್ರಂಥಗಳ ಹೆಸರಲ್ಲಿ ರಾಜಕೀಯ ಮಾಡ್ತಾರೆ. ಒಂದು ನಯಾಪೈಸೆ ಸಂಸ್ಕೃತಿ ಇಲ್ಲ ಎಂದಿದ್ದಾರೆ.

ಅಧಿವೇಶನದಲ್ಲಿ ಮಾತನಾಡಲಿ
ಮುಂದುವರಿದು.. ವಿಶೇಷ ಅಧಿವೇಶನ ಕರೆಯಲಾಗಿದೆ. ಸಂಪ್ರದಾಯವಾಗಿ ರಾಜ್ಯಪಾಲರ ಭಾಷಣ ಇದೆ. ಗ್ರಾಮೀಣ ಭಾಗದಲ್ಲಿ ದೊಡ್ಡ ಅನ್ಯಾಯ ನಡೆದಿದೆ ಮನರೇಗಾ ಬಿಲ್ ರದ್ದು ಮಾಡಿದ್ದಾರೆ. ಈ ವಿಚಾರವಾಗಿ ಚರ್ಚೆ ಮಾಡಲು 2 ದಿನ ಕರೆದಿದ್ದೇವೆ. ನನಗೆ ವಿಶೇಷ ಜವಾಬ್ದಾರಿ ಏನು ಇಲ್ಲ. ಅದು ನನ್ನ ಇಲಾಖೆಗೇ ಬರೋದ್ರಿಂದ ನಾವೇ ಮುಂದಾಳತ್ವ ವಹಿಸಿಕೊಳ್ಳಬೇಕಾಗುತ್ತೆ ಎಂದಿದ್ದಾರೆ.

ವಿಬಿ ಜಿ ರಾಮ್ ಜಿ ಮತ್ತೆ ಮನರೇಗಾ ಈ ಎರಡರ ನಡುವೆ ಏನು ವ್ಯತ್ಯಾಸ ಇದೆ ಅನ್ನೋದನ್ನ ಜನರ ಮುಂದೆ ಇಟ್ಟಿದ್ದೇವೆ ಆರ್ಥಿಕ ಸಾಮಾಜಿಕ ಪರಿಣಾಮಗಳನ್ನ ತಿಳಿಸಿ ಹೇಳಿದ್ದೇವೆ. ಇದನ್ನ ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕವಾಗಿ ಚಾಲೆಂಜ್ ಮಾಡುತ್ತೇವೆ. ಜನರ ನ್ಯಾಯಲಯಕ್ಕೂ ಕೂಡ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಕೇಂದ್ರದ ಸರ್ವಾಧಿಕಾರಿ ಧೋರಣೆ ಸರಿಯಲ್ಲ
ಇನ್ನೂ ಕೇಂದ್ರ ಸಂಘರ್ಷ ಬೇಡ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಂಘರ್ಷ ಯಾರು ಮಾಡ್ತಿರೋದು? ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯನ್ನ ರಾಜ್ಯ ಸರ್ಕಾರ ಒತ್ತಾಯ ಮಾಡುತ್ತಿದೆ. ಕನಿಷ್ಠ ರಾಜ್ಯ ಸರ್ಕಾರ ಜೊತೆ ಸಮಾಲೋಚನೆ ಕೂಡ ಮಾಡಲ್ವ? ನಮ್ಮ 40% ದುಡ್ಡು ತೆಗೆದುಕೊಳ್ತಿರುವಾಗ ಯಾಕೆ ತೆಗೆದುಕೊಳ್ತಿದ್ದಾರೆ ಅಂತನೂ ಕೇಳೋದು ಬೇಡ್ವ? ಅರ್ಟಿಕಲ್ 21, 258, 280 ನೇರ ಉಲ್ಲಂಘನೆಯಾಗಿದೆ. ಆದ್ರ ಬಗ್ಗೆ ಚರ್ಚೆನೂ ಮಾಡೋದಯ ಬೇಡ್ವ.? ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಸರಿಯಲ್ಲ ಎಂದಿದ್ದಾರೆ.

Share This Article