ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಿದೆ: ಪ್ರಿಯಾಂಕ್ ಖರ್ಗೆ

Public TV
3 Min Read

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ (State Government) ಭ್ರಷ್ಟಾಚಾರ (Corruption) ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿದೆ ಎಂದು ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ (priyank kharge) ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಫಲಕ ಅಭಿಯಾನ ನಡೆಸಲು ಇದೇ 23ರಂದು ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸುತ್ತೋಲೆ ಹೊರಡಿಸಿದ್ದಾರೆ. ಆ ನಾಮ ಫಲಕದಲ್ಲಿ ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂದು ತಿಳಿಸಿದೆ. ಇದನ್ನು ಸರ್ಕಾರಿ ಕಚೇರಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಾಕಬೇಕು ಎಂದು ಹೇಳಿದ್ದಾರೆ. ಈ ಅಭಿಯಾನವನ್ನು ನಿಗದಿತ ಕಾಲಾವಧಿಯಲ್ಲಿ ನಡೆಸಲು ತಿಳಿಸಿದ್ದಾರೆ. ಹಾಗಾದರೆ ಈ ಅಭಿಯಾನದ ಮುನ್ನ ಹಾಗೂ ಅಭಿಯಾನದ ನಂತರ ಭ್ರಷ್ಟಾಚಾರ ಮಾಡಬಹುದೇ? ಸರ್ಕಾರಕ್ಕೆ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇಚ್ಛಾಶಕ್ತಿ ಇದ್ದರೆ ಅವರು ನಾವು ಮಾಡುತ್ತಿರುವ ಅಕ್ರಮ ಹಾಗೂ ಹಗರಣಗಳ ಆರೋಪಗಳ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ನೀಡುತ್ತಿತ್ತು. ಆದರೆ ಇಂತಹ ಸುತ್ತೋಲೆಗಳ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಡುಗಳನ್ನು ಉಳಿಸಿ ಎಂಬ ಅಭಿಯಾನ ಮಾಡಿದರೆ ಕಾಡುಗಳಿಗೆ ತೊಂದರೆ ಆಗುತ್ತಿದೆ ಎಂದರ್ಥ. ವಾಯು ಮಾಲಿನ್ಯ ತಡೆಗಟ್ಟಿ ಅಭಿಯಾನ ಮಾಡಿದರೆ ಮಾಲಿನ್ಯ ಹೆಚ್ಚಾಗುತ್ತಿದೆ ಎಂದರ್ಥ. ಆದರೆ ಎನ್‌ಜಿಒ ಮಾಡುತ್ತಿರುವ ಭ್ರಷ್ಟಾಚಾರ ವಿರುದ್ಧ ಅಭಿಯಾನ ಅಂಗೀಕರಿಸಿ ಸಿಎಂ ಕಚೇರಿಯಿಂದ ಅಭಿಯಾನಕ್ಕೆ ಬೆಂಬಲ ಇದೆ ಎಂದರೆ ಈ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದರ್ಥ. ಬಜೆಟ್‌ನಲ್ಲಿ ಸಿಎಂ ಅವರು ಸರ್ವಸ್ಪರ್ಶಿ ಸರ್ವವ್ಯಾಪಿ ಎಂದು ಹೇಳಿದ್ದರು. ಈ ಅಭಿಯಾನದ ಮೂಲಕ ಈ ಸರ್ಕಾರದಲ್ಲಿ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಎಂದರೆ ಅದು ಭ್ರಷ್ಟಾಚಾರ ಮಾತ್ರ ಎಂದು ಕಿಡಿಕಾರಿದರು.

ಈ ಸುತ್ತೋಲೆಯಲ್ಲಿ ಈ ನಾಮಫಲಕವನ್ನು ಸ್ವಯಂ ಪ್ರೇರಿತವಾಗಿ ಹಾಕಿಕೊಳ್ಳಬಹುದು ಎಂದು ಹೇಳಿದ್ದಾರೆ. ನಿಮ್ಮ ಆದೇಶದ ಪ್ರಕಾರ ಈ ನಾಮಫಲಕ ಯಾರು ಹಾಕಿಕೊಳ್ಳುತ್ತಾರೋ ಅವರು ಪ್ರಮಾಣಿಕರು, ಯಾರು ಹಾಕಿಕೊಳ್ಳುವುದಿಲ್ಲವೋ ಅವರು ಭ್ರಷ್ಟರು ಎಂದು ಭಾವಿಸಬೇಕೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

bjP

ಪೇ ಸಿಎಂ ಅಭಿಯಾನ ಮಾಡಿದಾಗ ಮುಖ್ಯಮಂತ್ರಿಗಳು ಕಾಂಗ್ರೆಸ್ ವಿರುದ್ಧ ನೀಚರಾಜಕಾರಣದ ಆರೋಪ ಮಾಡುತ್ತಾರೆ. ಅವರ ಪ್ರಕಾರ 40% ಕಮಿಷನ್ ಪಡೆಯುವುದು ನೀಚ ರಾಜಕಾರಣವಲ್ಲ. ಇವರು ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಹೇಳುವುದು ನೀಚತನ. ರಾಜಕಾರಣವೇ? ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ಎಂದು ಒಪ್ಪಿಕೊಂಡಾಗ, ನಮ್ಮ ರಾಜ್ಯದ ಘನತೆಗೆ ಧಕ್ಕೆ ಬರುವುದಿಲ್ಲವೇ? ತೆಲಂಗಾಣದಲ್ಲಿ ನಿಮಗೆ 40% ಸಿಎಂ ಎಂದು ಫಲಕ ಹಾಕಿದಾಗ ರಾಜ್ಯದ ಘನತೆಗೆ ಧಕ್ಕೆ ಆಗಲಿಲ್ಲವೇ? ಪೇ ಸಿಎಂ ಅಭಿಯಾನ ನೋಡಿದ ತಕ್ಷಣ ನೀವು ನೀಚರಾಜಕಾರಣ ಎನ್ನುತ್ತೀರಿ ಎಂದು ಕಿಡಿಕಾರಿದರು.

ಈ ಕ್ಯೂಆರ್ ಕೋಡ್‌ನಲ್ಲಿ ನಿಮ್ಮ ಸರ್ಕಾರದ ಭ್ರಷ್ಟಾಚಾರದ ರೇಟ್ ಕಾರ್ಡ್ ಇದೆ. ಈ ರೇಟ್ ಕಾರ್ಡ್ ನಾವು ಸಿದ್ಧಪಡಿಸಿರುವುದಲ್ಲ, ಗುತ್ತಿಗೆದಾರರ ಸಂಘದವರು, ಮಠಾಧೀಶರು ಹಾಗೂ ಮಾಧ್ಯಮಗಳ ವರದಿ ಆಧರಿಸಿ ಮುಖ್ಯಮಂತ್ರಿ ಹುದ್ದೆಯಿಂದ ಪೊಲೀಸ್ ಕಾನ್‌ಸ್ಟೇಬಲ್ ತನಕ ನಿಗದಿಯಾಗಿರುವ ರೇಟ್ ಹಾಕಲಾಗಿದೆ. ಈ ಬಗ್ಗೆ ನಿಮ್ಮ ಶಾಸಕರು ನೀಡಿರುವ ಮಾಹಿತಿಯನ್ನೇ ಹಾಕಲಾಗಿದೆ ಎಂದು ಟೀಕಿಸಿದರು.

ನಿಜವಾದ ನೀಚ ರಾಜಕಾರಣ ಎಂದರೆ, ಯುವಕರ ಭವಿಷ್ಯದ ಜತೆ ಆಟವಾಡುತ್ತಾ ಕೀಳು ರಾಜಕೀಯ ಮಾಡುತ್ತಿರುವವರು ನೀವು. ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿ, ಯುವಕರ ಭವಿಷ್ಯವನ್ನು ನಾಶ ಮಾಡಿರುವುದು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ ಸಿಎಂ ಆಗಿದ್ದೀರಲ್ಲಾ ಅದು ಕೀಳು ರಾಜಕಾರಣ, ಶಾಲಾ ಮಕ್ಕಳಿಗೆ ಎಂದು ಹೇಳುತ್ತೀರಿ. ನಮ್ಮ ವಿರೋಧ ಪಕ್ಷದ ನಾಯಕರು ಹಾಗೂ ಪಕ್ಷದ ಅಧ್ಯಕ್ಷರು ಕಾಂಗ್ರೆಸ್ ಸರ್ಕಾರದ ಅವಧಿಯ ಪ್ರಕರಣಗಳನ್ನು ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ. ಆದರೂ ನ್ಯಾಯಾಂಗ ತನಿಖೆ ನೀಡಲು ನೀವು ಹಿಂಜರಿಯುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ನೀವು ಆಡಳಿತದಲ್ಲಿದ್ದು, ವಿರೋಧ ಪಕ್ಷಗಳ ಮೇಲೆ ಆರೋಪ ಮಾಡಬೇಡಿ. ನಮಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ, ವಿರೋಧ ಪಕ್ಷದವರ ಮಾತಿಗೆ ಅಡ್ಡಿ ಪಡಿಸುತ್ತೀರಿ. ಆಡಳಿತದಲ್ಲಿದ್ದವರೇ ಸದನದಲ್ಲಿ ಪ್ಲೆಕಾರ್ಡ್ ಹಿಡಿಯುತ್ತೀರಿ. ನೀವೇ ಬಾವಿಗಿಳಿದು ಪ್ರತಿಭಟಿಸುತ್ತೀರಿ. ನಿಮ್ಮ ಸಚಿವರು ಉತ್ತರ ನೀಡುವಾಗ ನೀವೇ ಅಡ್ಡಿಪಡಿಸಿ ನಮ್ಮ ವಿರುದ್ಧ ಘೋಷಣೆ ಕೂಗುತ್ತೀರಾ ಎಂದು ಟೀಕಿಸಿದರು. ಇದನ್ನೂ ಓದಿ: ಹಿಜಬ್ ಧರಿಸಿದ್ದಕ್ಕೆ ತರಗತಿಗೆ ಪ್ರವೇಶ ನಿಷೇಧ – ವ್ಯಾಪಕ ಪ್ರತಿಭಟನೆ ಬಳಿಕ ಶಾಲೆ ಬಿಡಿಸಿದ ಪೋಷಕರು

ಇಂತಹ ಕ್ಷುಲ್ಲಕ ರಾಜಕೀಯ ಬಿಡಿ. ಈ ಹಾಸ್ಯಾಸ್ಪದ ಅಭಿಯಾನವನ್ನು ಬಿಡಿ. ಯಾವುದೋ ಕೆಳ ಹಂತದ ಅಧಿಕಾರಿ ಇದನ್ನು ಮಾಡಿದ್ದರೆ ನಾವು ಮಾತನಾಡುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿಗಳ ಕಚೇರಿಯಿಂದ ಈ ವಿಚಾರ ಬಂದಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ನಿಮಗೆ ಆಸಕ್ತಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಪಕ್ಷದ ಕೆಲಸ ಮಾಡದೇ ಇರೋರಿಗೆ ಪಕ್ಷದಲ್ಲಿ ಜಾಗವಿಲ್ಲ: ಎಚ್.ಡಿ ಕುಮಾರಸ್ವಾಮಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *