ಬೆಂಗಳೂರು: ಬಿಜೆಪಿಯಿಂದ ಉಚ್ಛಾಟನೆ ಆಗಿರೋ ಯತ್ನಾಳ್ ಮೊದಲು ಯಾಕೆ ಉಚ್ಛಾಟನೆ ಆದ್ರು ಅಂತ ತಿಳಿದುಕೊಳ್ಳಲಿ. ಅಮೇಲೆ ನಮ್ಮ ಪಕ್ಷ, ನಮ್ಮ ಅಧ್ಯಕ್ಷರು, ನಮ್ಮ ಸಿಎಂ ಬಗ್ಗೆ ಮಾತಾಡಲಿ ಅಂತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿರುಗೇಟು ನೀಡಿದ್ದಾರೆ.
ಡಿ.ಕೆ ಶಿವಕುಮಾರ್ (DK Shivakumar) ಬಿಜೆಪಿ ಹೋಗೋಕೆ ಸಿದ್ಧತೆ ಮಾಡಿದ್ರು ಎಂಬ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿರುವವರಿಗೆ ಸ್ವಂತಕ್ಕೆ ಅಸೆಸ್‌ಮೆಂಟ್ ಮಾಡೋಕೆ ಆಗಿಲ್ಲ. ಅವರು ಬಿಜೆಪಿಯಲ್ಲಿ ಉಳಿತಾರೋ ಇಲ್ಲವೋ ಅವರಿಗೇ ಗೊತ್ತಿಲ್ಲ. ಅವರು ನಮ್ಮ ಅಧ್ಯಕ್ಷರ ಬಗ್ಗೆ ವಿಮರ್ಶೆ ಮಾಡ್ತಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ
ಯತ್ನಾಳ್ ಯಾಕೆ ಹೊರಗೆ ಹೋಗಿದ್ದಾರೆ ಅಂತ ಇನ್ನು ಅವರಿಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಯಾರು ಹೊರಗೆ ಹೋಗ್ತಾರೆ, ಒಳಗೆ ಬರ್ತಾರೆ ಅಂತ ಅವರಿಗೆ ಗೊತ್ತಾಗುತ್ತಾ? ಅವರು ಸೆಲ್ಫ್ ಅಸೆಸ್‌ಮೆಂಟ್ ಅಲ್ಲೇ ವಿಫಲರಾಗಿದ್ದಾರೆ. ಇವರೆಲ್ಲ ನಮ್ಮ ಪಕ್ಷ, ಸಿಎಂ ಹಾಗೂ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಅಸೆಸ್ ಮಾಡ್ತಾರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಜಯೇಂದ್ರನಿಗೆ ಬೇರೆ ಬಂಡವಾಳವಿಲ್ಲ, ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸ್ತಿದ್ದಾನೆ – ಎಂ.ಬಿ ಪಾಟೀಲ್
ಇವರನ್ನ ಯಾಕೆ ಹೊರಗೆ ಹಾಕಿದ್ದಾರೆ ಅದನ್ನ ಮೊದಲು ಯತ್ನಾಳ್ ಹೇಳಲಿ. ಅವರನ್ನ ಪಕ್ಷದಿಂದಲೇ ತೆಗೆದು ಹಾಕಿದ್ದಾರೆ. ಅವರ ಮಾತಿಗೆ ಹೆಚ್ಚು ಬೆಲೆ ಕೊಡಬೇಡಿ. ಬಿಜೆಪಿಯಲ್ಲಿಯೇ ಅವರ ಮಾತಿಗೆ ಬೆಲೆ ಕೊಟ್ಟಿಲ್ಲ. ಇನ್ನು ನಮ್ಮ ಬಗ್ಗೆ ಮಾತಾಡಿದ್ರೆ ಯಾಕೆ ಬೆಲೆ ಕೊಡ್ತೀರಾ ಎಂದು ಹೇಳಿದ್ದಾರೆ.