ಮೋಹನ್ ಲಾಲ್ ಚಿತ್ರಕ್ಕೆ ನಾಯಕಿಯಾದ ಪ್ರಿಯಾಮಣಿ

Public TV
1 Min Read

ನ್ನಡದ ಹೆಸರಾಂತ ನಟಿ ಪ್ರಿಯಾಮಣಿ (Priyamani) ನಟನೆಯ ಜವಾನ್ ಸಿನಿಮಾದ ಭಾರೀ ಗೆಲುವು ಹಲವರಿಗೆ ಅದೃಷ್ಟವನ್ನು ತಂದಿದೆ. ಜವಾನ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ಪ್ರಿಯಾಮಣಿ ಇದೀಗ ಮತ್ತೋರ್ವ ಸ್ಟಾರ್ ನಟನ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಮಲಯಾಳಂನ ಹೆಸರಾಂತ ನಟ ಮೋಹನ್ ಲಾಲ್ (Mohan Lal) ನಟನೆಯ ‘ನೇರು’ (Neru) ಸಿನಿಮಾಗೆ ಪ್ರಿಯಾಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಮಾಹಿತಿಯನ್ನು ಸ್ವತಃ ಪ್ರಿಯಾಮಣಿ ಅವರೇ ಹಂಚಿಕೊಂಡಿದ್ದು, ನೇರು ಸಿನಿಮಾದ ಶೂಟಿಂಗ್ ನಲ್ಲೂ ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ನಾಯಕಿಯಾಗಿ ಆಯ್ಕೆಯಾಗಿರುವ ಕುರಿತು ಹೇಳಿಕೊಂಡಿದ್ದರೂ, ಪಾತ್ರದ ಹಿನ್ನೆಲೆಯನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಆದರೆ, ಹೆಮ್ಮೆಯಿಂದ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

ಜವಾನ್ ಸಿನಿಮಾದಲ್ಲಿ ಪ್ರಿಯಾಮಣಿ ಅವರ ಪಾತ್ರ ತುಂಬಾ ಹೊತ್ತು ಪರದೆಯ ಮೇಲೆ ಬಾರದೇ ಇದ್ದರೂ, ಅದೊಂದು ವಿಭಿನ್ನ ಮತ್ತು ವಿಶೇಷ ಪಾತ್ರವಾಗಿತ್ತು. ಹಾಗಾಗಿ ಪ್ರಿಯಾಮಣಿ ಪಾತ್ರ ಜನರ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಇದೀಗ ಮತ್ತೆ ಸ್ಟಾರ್ ನಟನ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

 

ಈ ಸಿನಿಮಾವನ್ನು ಜೀತು ಜೋಸೆಫ್ (Jeetu Joseph) ನಿರ್ದೇಶನ ಮಾಡುತ್ತಿದ್ದು, ಮೋಹನ್ ಲಾಲ್ ನಟನೆಯ ದೃಶ್ಯಂ ಸಿನಿಮಾಗೆ ಇವರೇ ನಿರ್ದೇಶಕರು. ದೃಶ್ಯಂ, ದೃಶ್ಯಂ2 ಯಶಸ್ಸಿನ ನಂತರ ಮತ್ತೆ ಮೋಹನ್ ಲಾಲ್ ಜೊತೆ ಜೀತು ಕೈ ಜೋಡಿಸಿದ್ದಾರೆ. ಹೀಗಾಗಿ ನೇರು ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಮತ್ತೊಂದು ವಿಶೇಷ ಕತೆಯನ್ನು ಹೇಳಲಿದ್ದಾರಂತೆ ಜೀತು ಜೋಸೆಫ್.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್