My dear hero ಅಂದ್ರು ಮಿಸಸ್ ಪ್ರಿಯಾ

Public TV
1 Min Read

ಬೆಂಗಳೂರು: ಇಂದು ರಾಜ್ಯಾದ್ಯಂತ ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್’ ಚಿತ್ರ ಬಿಡುಗಡೆಯಾಗಿದೆ. ಆದರೆ ಸಿನಿಮಾ ಬಿಡುಗಡೆಯ ಮೊದಲೇ ಈ ಬಗ್ಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

ಪ್ರಿಯಾ ಸುದೀಪ್ ಅವರು, ”ನಾನು ಇದುವೆರೆಗೂ ಈ ರೀತಿಯ ಕ್ರೇಜ್ ಅನ್ನು ಈ ಹಿಂದೆ ನೋಡಿಯೇ ಇರಲಿಲ್ಲ. ರಾಜ್ಯಾದ್ಯಂತ ಇದು ಹಬ್ಬದ ರೀತಿ ಆಗಿದೆ. ಎನರ್ಜಿಟಿಕ್ ಶಿವಣ್ಣ, ನಿರ್ದೇಶಕ ಪ್ರೇಮ್ ಹಾಗೂ ನನ್ನ ಪ್ರೀತಿಯ ಹೀರೋ ಸುದೀಪ್ ಸೇರಿದಂತೆ ಇಡೀ ‘ದಿ ವಿಲನ್’ ಚಿತ್ರತಂಡಕ್ಕೆ ನನ್ನ ಶುಭಾಶಯಗಳು”  ಎಂದು ಬರೆದು  ಟ್ವೀಟ್ ಮಾಡಿದ್ದಾರೆ.

ಇಂದು ಹಲವು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಇತ್ತೀಚೆಗೆ ಸುದೀಪ್ ಕುಟುಂಬ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿಯಾಗಿದ್ದರು. ಭೇಟಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟ ಸುದೀಪ್ ‘ಅವುಕು ರಾಜಾ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರ ಪೋಷಿಸುತ್ತಿರುವ ಸುದೀಪ್ ಅವರ ಲುಕ್ ಈಗಾಗಲೇ ಬಹಿರಂಗವಾಗಿದೆ.

‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಶೂಟಿಂಗ್ ನ ಬಿಡುವಿನ ವೇಳೆ ಚಿರಂಜೀವಿ ಜೊತೆಗೆ ಸುದೀಪ್ ಕುಟುಂಬ ಸಮಯ ಕಳೆದಿದೆ. ಚಿರಂಜೀವಿ ಜೊತೆಗೆ ಸುದೀಪ್ ಪುತ್ರಿ ಸಾನ್ವಿ ಕೂಡ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಚಿರಂಜೀವಿ, ಸುದೀಪ್ ಜೊತೆಗೆ ಜಗಪತಿ ಬಾಬು, ವಿಜಯ್ ಸೇತುಪತಿ, ನಯನತಾರಾ, ತಮನ್ನಾ, ಪೂನಂ ಕೌರ್ ನಟಿಸಿದ್ದಾರೆ. ವಿಶೇಷ ಪಾತ್ರವೊಂದರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಬಣ್ಣ ಹಚ್ಚಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *