ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!

Public TV
2 Min Read

ಮುಂಬೈ: ಒಂದು ಹಾಡಿನ ವಿಡಿಯೋ ಮೂಲಕ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿದ್ದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ.

ಕೇವಲ ಒಂದು ದಿನದಲ್ಲಿ ಪ್ರಿಯಾ ಅವರ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 6 ಲಕ್ಷ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಫಾಲೋ ಆಗಿರುವ ವಿಶ್ವದ ಮೂರನೇ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

18 ವರ್ಷದ ಪ್ರಿಯಾ ಪ್ರಕಾಶ್ ವಾರಿಯಾರ್ ಈಗ ಹಾಲಿವುಡ್ ನ ಸ್ಟಾರ್ ಗಳಾದ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಾಲಿನಲ್ಲಿ ಬಂದು ನಿಂತಿದ್ದಾರೆ. ಈ ಹಿಂದೆ ಒಂದೇ ದಿನದಲ್ಲಿ ಕೈಲೀ ಜೆನ್ನರ್ 8 ಲಕ್ಷ, ರೊನಾಲ್ಡೊ ಅವರನ್ನು 6.50 ಲಕ್ಷ ಮಂದಿ ಫಾಲೋ ಮಾಡಿದ್ದರು.

ಪ್ರಸ್ತುತ 17 ಲಕ್ಷ ಇನ್ ಸ್ಟಾಗ್ರಾಮ್ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಪ್ರಿಯಾ ಅವರು ಸೆನ್ಸೇಷನ್ ಸೃಷ್ಟಿಸಿದ್ದಾರೆ. ಪ್ರಸ್ತುತ ಅವರ ಇನ್ ಸ್ಟಾಗ್ರಾಮ್ ಖಾತೆಗೆ `ಬ್ಲೂ ಟೀಕ್ ಮಾರ್ಕ್’ ಲಭಿಸಿದೆ.

ಕೇವಲ ಒಂದು ದಿನದಲ್ಲಿ `ಒರು ಆಡಾರ್ ಲವ್’ ಚಿತ್ರದ `ಮಾಣಿಕ್ಯಾ ಮಾಲಾರಾಯಾ ಪೂವಿ’ ಹಾಡಿನ ಮೂಲಕ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಚಿತ್ರದ ಈ ಹಾಡನ್ನು ವಿನೀತ್ ಶ್ರೀನಿವಾಸನ್ ಅವರು ಹಾಡಿದ್ದು, ಶಾನ್ ರಹಮಾನ್ ಗೀತೆ ಸಂಯೋಜನೆ ಮಾಡಿದ್ದಾರೆ.

ಚಿತ್ರತಂಡ 1.32 ಸೆಕೆಂಡ್ ನ ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದು, ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡನ್ನು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಮುಗ್ಧವಾಗಿ ಹಾರನ್ನು ಚಿತ್ರೀಕರಿಸಲಾಗಿದೆ. ಚಿತ್ರದ ಹಾಡಿಗೆ ಸಿಕ್ಕ ಪ್ರತಿಕ್ರಿಯೇ ಕಂಡ ಪ್ರಿಯಾ ಚಿತ್ರದ ನಿರ್ದೇಶಕರು, ಚಿತ್ರ ತಂಡ ಮತ್ತು ಅಭಿಮಾನಿಗಳಿಗೆ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ : ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!

https://twitter.com/ppriyavarrier/status/962751427394248705

https://twitter.com/ppriyavarrier/status/963256171703382017

https://www.instagram.com/p/Be-0hR9jBqT/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *