ಮುಂಬೈ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ ಪತನ

Public TV
2 Min Read

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಗುರುವಾರ ಭಾರೀ ಮಳೆಯ ನಡುವೆ ಖಾಸಗಿ ವಿಮಾನವೊಂದು (Private Jet Crash) ಲ್ಯಾಂಡ್ ಆಗಲು ಯತ್ನಿಸುತ್ತಿದ್ದಾಗ ಪತನಗೊಂಡಿದೆ.

ವಿಮಾನದಲ್ಲಿ ಆರು ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸೇರಿ 8 ಮಂದಿ ಇದ್ದರು. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತುರ್ತು ಸೇವೆಗಳು ತಿಳಿಸಿವೆ. ಅವರಿಗೆ ಯಾವ ಪ್ರಮಾಣದಲ್ಲಿ ಗಾಯಗಳಾಗಿವೆ ಎಂಬ ಬಗ್ಗೆ ತಿಳಿದಿಲ್ಲ. ಯಾವುದೇ ಪ್ರಾಣಹಾನಿಯಾಗಿಲ್ಲ. ಇದನ್ನೂ ಓದಿ: ದೆಹಲಿಯಲ್ಲಿ ಶಿವಮೊಗ್ಗ ಮೂಲದ ಐಸಿಸ್ ಉಗ್ರನ ಬಂಧನ

ಅವಘಡದಿಂದ ರನ್‌ವೇಯಲ್ಲಿ ಉಂಟಾಗಿದ್ದ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ಪುನರಾರಂಭಿಸಲಾಗಿದೆ. ಮಳೆಯಿಂದಾಗಿ ಜಾರುವಂತಾಗಿದ್ದ ರನ್‌ವೇ 27ರ ಬಳಿ ಈ ಘಟನೆ ನಡೆದಿದೆ. ವಿಮಾನವು ನೆಲಕ್ಕೆ ಅಪ್ಪಳಿಸುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಖಾಸಗಿ ಜೆಟ್‌ ಪತನಗೊಂಡ ವೇಳೆ ರನ್‌ವೇಯನ್ನು ಕೆಲವು ನಿಮಿಷಗಳ ಕಾಲ ಮುಚ್ಚಲಾಯಿತು. ಈ ಸಮಯದಲ್ಲಿ ಡೆಹ್ರಾಡೂನ್‌ನಿಂದ ಬರುತ್ತಿದ್ದ ವಿಮಾನ – UK865 ಅನ್ನು ಗೋವಾದ ಮೋಪಾ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ವಿಸ್ತಾರಾ ಏರ್‌ಲೈನ್ಸ್ ತಿಳಿಸಿದೆ. ಇದನ್ನೂ ಓದಿ: ಪಾಕ್‌ ಜೊತೆ ಭಾರತೀಯ ಸೇನೆಯ ಮಾಹಿತಿ ಹಂಚಿಕೊಳ್ಳುತ್ತಿದ್ದ ಯೋಧ ಅರೆಸ್ಟ್‌

ವಿಮಾನವು ಲಿಯರ್‌ಜೆಟ್ 45 ಆಗಿದೆ. ಕೆನಡಾ ಮೂಲದ ಬೊಂಬಾರ್ಡಿಯರ್ ಏವಿಯೇಷನ್‌ನ ವಿಭಾಗವು ತಯಾರಿಸಿದ ಒಂಬತ್ತು ಆಸನಗಳ ಸೂಪರ್-ಲೈಟ್ ಬಿಸಿನೆಸ್ ಜೆಟ್ ಇದಾಗಿದೆ. ಇದು ಬೆಂಗಳೂರು ಮೂಲದ ವಿಎಸ್‌ಆರ್ ವೆಂಚರ್ಸ್‌ಗೆ ನೋಂದಾಯಿಸಲ್ಪಟ್ಟಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾಹಿತಿ ನೀಡಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್