ಬೆಂಗಳೂರು: ಕೆಲಸ ಮುಗಿಸಿ ಪಿಜಿಗೆ ವಾಪಸ್‌ ಆಗ್ತಿದ್ದ ವೈದ್ಯೆಗೆ ಕಿರುಕುಳಕ್ಕೆ ಯತ್ನ – ಕಾಮುಕ ಅರೆಸ್ಟ್

1 Min Read

ಬೆಂಗಳೂರು: ಖಾಸಗಿ ಆಸ್ಪತ್ರೆ ವೈದ್ಯೆ (Doctor Harassed) ಜೊತೆ ಅಸಭ್ಯ ವರ್ತನೆ ತೋರಿ ಕಿರುಕುಳಕ್ಕೆ ಯತ್ನಿಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಸೋಲದೇವನಹಳ್ಳಿ (Soladevanahalli) ಠಾಣಾ ವ್ಯಾಪ್ತಿಯ ಚಿಕ್ಕಬಾಣಾವಾರದ ಎಜಿಬಿ ಲೇಔಟ್‌ನಲ್ಲಿ ಘಟನೆ ನಡೆದಿತ್ತು. ತಡರಾತ್ರಿ 12:49 ಸಮಯದಲ್ಲಿ ಕೆಲಸ ಮುಗಿಸಿ ವೈದ್ಯೆ ಪಿಜಿಗೆ ಮರಳುತ್ತಿದ್ದರು. ಪಿಜಿ ಗೇಟ್ ಮುಂದೆ ನಿಂತಾಗ, ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಹಿಂದೆಯಿಂದ ಬಂದು ಯುವತಿಯನ್ನು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನೂ ಓದಿ: ಪತ್ನಿ ಕೊಲೆಗೆ ಪತಿಯ ಪ್ರೀ-ಪ್ಲಾನ್‌; ಬಿಹಾರದಲ್ಲಿ 15 ದಿನ ಗನ್ ಟ್ರೈನಿಂಗ್ – ಎರಡು ಗನ್ ತಂದು ಹೆಂಡತಿ ಹತ್ಯೆ

ಕಾಮುಕನ ಕಾಟ ಕಂಡು ವೈದ್ಯೆ ಕಿರುಚಾಡಲು ಪ್ರಾರಂಭಿಸಿದಾಗ ಅಪರಿಚಿತ ಬೈಕ್‌ನಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದ. ಕಳೆದ 20 ದಿನಗಳ ಹಿಂದೆ ಘಟನೆ ನಡೆದಿದ್ದು, ಬೀದಿ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ವಾಯವ್ಯ ವಿಭಾಗ ಡಿಸಿಪಿ ನಾಗೇಶ್ ಮಾತನಾಡಿ, ಪ್ರಕರಣ ಸಂಬಂಧ ಆರೋಪಿ ರಾಕೇಶ್‌ನನ್ನು ಬಂಧಿಸಲಾಗಿದೆ. ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಬಂದಿದ್ದ. ವಿಳಾಸ ಕೇಳುವ ನೆಪದಲ್ಲಿ ವೈದ್ಯೆ ಜೊತೆ ಅನುಚಿತ ವರ್ತನೆ ತೋರಿದ್ದ. ತಡರಾತ್ರಿ ಡ್ಯೂಟಿ ಮುಗಿಸಿ ಆಟೋದಲ್ಲಿ ವೈದ್ಯೆ ಪಿಜಿಗೆ ಮರಳುತ್ತಿದ್ದರು. ಈ ವೇಳೆ ಆಕೆ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಆರೋಪಿ ರಾಕೇಶ್ 21 ವರ್ಷದ ಯುವಕ. ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಮೂಲತಃ ತುಮಕೂರು ಜಿಲ್ಲೆಯವನು. ಆರೋಪಿ ರಾಕೇಶ್ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪವನ್‌ ನಿಜ್ಜೂರು ಅಮಾನತು – ಬ್ಯಾನರ್‌ ಗಲಾಟೆಯಾದಾಗ ಪಾರ್ಟಿ ಮೂಡ್‌ನಲ್ಲಿದ್ದ ಬಳ್ಳಾರಿ ಎಸ್‌ಪಿ!

Share This Article