ವಿಜಯಪುರದ ನಡು ರಸ್ತೆಯಲ್ಲೇ ಹೊತ್ತಿ ಉರಿದ ಜನತಾ ಬಸ್ – ತಪ್ಪಿದ ಭಾರೀ ಅನಾಹುತ

Public TV
1 Min Read

ವಿಜಯಪುರ: ಬೆಳ್ಳಂಬೆಳಿಗ್ಗೆ ಜನತಾ ಟ್ರಾವೆಲ್ಸ್‌ಗೆ (Janatha Travels) ಸೇರಿದ ಬಸ್ಸು ನಡು ರಸ್ತೆಯಲ್ಲೇ ಹೊತ್ತಿ ಉರಿದು ಸುಟ್ಟು ಕರಕಲಾದ ಘಟನೆ ವಿಜಯಪುರ (Vijayapura) ತಾಲೂಕಿನ ಹಿಟ್ಟನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ಬೆಂಗಳೂರಿಂದ ಪ್ರಯಾಣಿಕರನ್ನ (Passenger) ಹೊತ್ತು ವಿಜಯಪುರಕ್ಕೆ ಬರುತ್ತಿದ್ದಾಗ ಬಸ್ಸಿಗೆ ಬೆಂಕಿ (Fire) ಹತ್ತಿಕೊಂಡಿದೆ. ಚಕ್ರ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.   ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಪ್ರಕರಣ – ಮಾಸ್ಟರ್‌ಮೈಂಡ್‌ ಲಲಿತ್‌ ಬಂಧನ

ಸ್ಫೋಟಗೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗಡೆ ಇಳಿದ ಪರಿಣಾಮ ಯಾವುದೇ ಸಾವು ನೋವು ಸಂಭವಿಸಿಲ್ಲ. ಪ್ರಯಾಣಿಕರ ಬೆಲೆಬಾಳುವ ವಸ್ತುಗಳು, ಬಟ್ಟೆಗಳು ಸುಟ್ಟು ಭಸ್ಮವಾಗಿವೆ. ಗಾಬರಿಗೊಂಡ ಪ್ರಯಾಣಿಕರು ಬೇರೆ ವಾಹನಗಳ ಸಹಾಯದಿಂದ ಊರು ಸೇರಿದ್ದಾರೆ.

ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಮತ್ತು ಅಗ್ನಿ ಶಾಮಕ‌ ದಳ ದೌಡಾಯಿಸಿದ್ದು ಬೆಂಕಿ ನಂದಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Share This Article