30ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡ ಮಂಡ್ಯ ದುರಂತಕ್ಕೆ ಕಾರಣ ಸಿಕ್ತು!

Public TV
1 Min Read

ಮಂಡ್ಯ: ಜಿಲ್ಲೆಯ ಪಂಡಾವಪುರ ಬಳಿಕ ನಡೆದ ಭೀಕರ ಬಸ್ ದುರಂತ ಸಂಭವಿಸಿದ್ದು, ಸುಮಾರು 30 ಮಂದಿ ಮೃತಪಟ್ಟಿದ್ದಾರೆ. ಈ ಅಪಘಾತಕ್ಕೆ ಸ್ಟೇರಿಂಗ್ ಲಾಕ್ ಆಗಿದ್ದೆ ಕಾರಣ ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ್ನ ಕೆಎ-19, 5676 ನೊಂದಣಿ ಸಂಖ್ಯೆಯ ಪಂಚಲಿಂಗೇಶ್ವರ ಬಸ್ ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿತ್ತು. ಈ ವೇಳೆ ಚಿಕ್ಕಬ್ಯಾಡರಹಳ್ಳಿ-ಕನಗನಮರಡಿ ಮಾರ್ಗದಲ್ಲಿ ಹೋಗುತ್ತಿದ್ದಂತೆ ವಿ.ಸಿ ನಾಲೆಗೆ ನೇರವಾಗಿ ಬಸ್ ಮುಳುಗಿತ್ತು. ಪರಿಣಾಮ ಬಸ್ಸಿನಿಂದ ಹೊರಬರಲಾಗದೇ ಪ್ರಯಾಣಿಕರು ಪರದಾಡಿ ಜಲಸಮಾಧಿಯಾಗಿದ್ದಾರೆ.

ಇನ್ನೂ ಅಪಘಾತದಲ್ಲಿ ಗಿರೀಶ್ ಮತ್ತು ಬಾಲಕ ಲೋಹಿತ್ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಸ್ಥಳದಲ್ಲಿದ್ದವರು ಅಪಘಾತ ಬಗ್ಗೆ ಮಾತನಾಡಿದ್ದು, ಈ ಮಾರ್ಗದಲ್ಲಿ ಅಪಘಾತ ಸಂಭವಿಸಿರಲಿಲ್ಲ. ರಸ್ತೆಯೂ ಕೂಡ ದೊಡ್ಡದಾಗಿತ್ತು. ಯಾವುದೇ ತಿರುವು ಕೂಡ ಇರಲಿಲ್ಲ. ಬಸ್ ವಿಸಿ ನಾಲೆಯ ಬಳಿ ಬರುತ್ತಿದ್ದಂತೆ ಸ್ಟೇರಿಂಗ್ ಲಾಕ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ಆತನ ಅಜಾಗರುಕತೆಯಿಂದ ಬಸ್ ನಾಲೆಗೆ ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಮಂಗಳೂರಿನ ನೋಂದಣಿ ಸಂಖ್ಯೆಯನ್ನು ಹೊಂದಿರುವ ರಾಜಕುಮಾರ ಹೆಸರಿನ ಬಸ್ ಇದ್ದಾಗಿದ್ದು, ಬಸ್ ನ ಮಾಲೀಕ ಶ್ರೀನಿವಾಸ್ ಎಂದು ತಿಳಿದು ಬಂದಿದೆ. 2001ರ ಜನವರಿಯಲ್ಲಿ ನೊಂದಣಿಯಾಗಿದ್ದು, ದುರಂತಕ್ಕೀಡಾದ ಬಸ್ಸಿಗೆ ಮುಂದಿನ ವರ್ಷದ ಮೇ 15 ರವೆಗೆ ಫಿಟ್‍ನೆಸ್ ಸರ್ಟಿಫಿಕೇಟ್ ಇತ್ತು. ಇದೇ ನವೆಂಬರ್ 30ರವರೆಗೆ ಬಸ್ಸಿಗೆ ತೆರಿಗೆಯನ್ನು ಕೂಡ ಕಟ್ಟಲಾಗಿತ್ತು. ಬಸ್ ಇನ್ಸೂರೆನ್ಸ್ ಕೂಡ ಮುಂದಿನ ವರ್ಷ 15ರವೆಗೂ ಇತ್ತು.

ಸದ್ಯಕ್ಕೆ ಸಿಎಂ ಕುಮಾರಸ್ವಾಮಿ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವನ ಹೇಳುತ್ತಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಬಸ್ ನಿರ್ವಾಹಕ ಹೇಗೋ ಈಜಿಕೊಂಡು ಪರಾರಿಯಾಗಿದ್ದಾನೆ.

https://www.youtube.com/watch?v=nMUgrgqecdA

https://www.youtube.com/watch?v=qf38bZ6WU1c

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *